ಸಾಹಿತ್ಯ ಸಮ್ಮೇಳನ ಅರ್ಥಪೂರ್ಣವಾಗಿ ಜರುಗಲಿ

ವಿಜಯಪುರ:ಮಾ.17: 18 ನೇ ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳ ಅರ್ಥಪೂರ್ಣವಾಗಿ ಜರುಗಲಿ ರಾಜ್ಯಕ್ಕೆ ಹಿರಿಯ ಇಲ್ಲಿಯ ಗೋಷ್ಠಿಗಳು ಮಾದರಿಯಾಗಲೆಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ ಮಹೇಶ ಜೋಶಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಭವನದಲ್ಲಿ ನಡೆದ ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡುತ್ತ ಕನ್ನಡ ನಾಡಿನ ಪರಂಪರೆ ಸಂಸ್ಕøತಿ ಉಳಿಸಿ ಬೆಳಸುವ ಗುರಿ ಉದ್ದೇಶ ಕನ್ನಡ ಸಾಹಿತ್ಯ ಪರಿಷತ್ತು ಹೊಂದಿದೆ. ಜಾನಪದ ಸಾಹಿತ್ಯ ನಮ್ಮೆಲ್ಲರ ಉಸಿರು, ಅದನ್ನು ಉಳಿಸುವ ಗುರಿ ಹೊಂದಿದ್ದೇವೆ, ಹಿರಿಯರು ಮೌಖಿಕವಾಗಿ ಉಳಿಸುಲಿಕೊಂಡು ಬಂದಿರುವ ಸಾಹಿತ್ಯವನ್ನು ಲಿಖಿತ ರೂಪದಲ್ಲಿ ತರುವ ಸಕಲ ಪ್ರಯತ್ನವನ್ನು ಮಾಡುತ್ತೇವೆ. ಸಮ್ಮೇಳನಗಳ ಮೂಲಕ ಸಾಹಿತ್ಯಾಭಿರುಚಿಯನ್ನು ಮೂಡಿಸುತ್ತೇವೆ. ಜಿಲ್ಲೆಯ ಪರಿಷತ್ತಿನ ಅಧ್ಯಕ್ಷರಾದ ಹಾಸೀಂಪೀರ ವಾಲೀಕಾರ ಅವರು ಕ್ರಿಯಾಶೀಲರಾಗಿ ಕೆಲಸ ನಿರ್ವಹಿಸುತ್ತಾರೆ ಅವರಿಗೆ ತಮ್ಮ ಸಹಾಯ ಸಹಕಾರ ನೀಡಬೇಕೆಂದರು. ಮುಖ್ಯ ಅತಿಥಿಗಳಾಗಿ ಬಿ ಎಂ ಪಟೇಲ್ ಪಾಂಡು ಅವರು ಮಾತನಾಡಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯಾದ್ಯಂತ ಸಾಹಿತ್ಯದ ಚಟುವಟಿಕೆಗಳನ್ನು ನಿರಂತರವಾಗಿ ಹಮ್ಮಿಕೊಂಡಿದೆ. ಯುವ ಸಾಹಿತ್ಯ ಪ್ರತಿಭೆಗಳಿಗೆ ಮತ್ತು ಹಿರಿಯರಿಗೆ ಪೆÇ್ರೀತ್ಸಾಹ ನೀಡುತ್ತಿದ್ದೇವೆ, ವಿಜಯಪುರ 18 ನೇ ಜಿಲ್ಲಾ ಸಮ್ಮೇಳನ ಅರ್ಥಪೂರ್ಣವಾಗಿ ಜರುಗಲು ಸಹಕರಿಸಲು ಮನವಿ ಮಾಡಿದರು. ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಭಾರತಿ ಪಾಟೀಲ, ಪ್ರಾಚಾರ್ಯ ಬಸವರಾಜ ಬಾಪಗೊಂಡ , ವಿ ಸಿ ನಾಗಠಾಣ, ಡಾ ವಿ ಡಿ ಐಹೋಳ್ಳಿ, ಮಹಾದೇವ ರೆಬಿನಾಳ,ಕೆ ಸುನಂದ, ಡಾ ಸಂಗಮೇಶ ಮೇತ್ರಿ, ಅಭಿಷೇಕ ಚಕ್ರವರ್ತಿ, ಅಲ್ಲಮಪ್ರಭು ಮಲ್ಲಿಕಾರ್ಜುನಮಠ, ವಿಜಯ ಲಕ್ಷ್ಮೀ ಕೌಲಗಿ, ರಾಜೇಸಾಬ ಶಿವನ ಗುತ್ತಿ, ಡಾ ಆನಂದ ಕುಲಕರ್ಣಿ, ಸಂಗೀತಾ ಮಠಪತಿ, ದಾದಾ ಬಕ್ಷಿ, ಪ್ರದೀಪ ಕುಲಕರ್ಣಿ, ರಾಜು ಢವಳಗಿ ಮುಂತಾದವರು ಉಪಸ್ಥಿತರಿದ್ದರು