ಸಾಹಿತ್ಯ ಸಮ್ಮೇಳನಗಳು ಸಮಗ್ರ ಅಧ್ಯಯನ ಮಾಡುತ್ತವೆ: ಪೆÇ್ರ ಅವಟಿ

ವಿಜಯಪುರ:ಜು.26: ಸಾಹಿತ್ಯ ಸಮ್ಮೇಳನಗಳು ದೇಶ ನಾಡು ಕುರಿತು ಸಮಗ್ರ ಅಧ್ಯಯನ ಮಾಡುತ್ತವೆ ಎಂದು ಶಾಂತವೀರ ಪ ಪೂ ಕಾಲೇಜಿನ ಉಪನ್ಯಾಸಕರಾದ ಪೆÇ್ರ ಮಲ್ಲಿಕಾರ್ಜುನ ಅವಟಿ ಅಭಿಪ್ರಾಯ ವ್ಯಕ್ತಪಡಿಸಿದರು
1) ಮಹಾಂತ ಗುಲಗಂಜಿ ದತ್ತಿ. ವಿಷಯ ವಿಜಯಪುರ ಜಿಲ್ಲಾ ಹನ್ನೆರಡನೆಯ ಕನ್ನಡ ಸಾಹಿತ್ಯ ಸಮ್ಮೇಳನ ಸಿಂದಗಿ ಕುರಿತು
2) ಗೌರಮ್ಮಾ ಕೊಟ್ರಬಸಯ್ಯ ತಂಬ್ರಹಳ್ಳಿಮಠ ದತ್ತಿ ವಿಷಯ ಸಂತರ ಹಾಗು ಆರೂಢರ ಮಹಿಮೆ ಕುರಿತು ಎರಡು ದತ್ತಿ ಕಾರ್ಯಕ್ರಮ ಸರಕಾರಿ ಮೆಟ್ರೀಕ ಪೂರ್ವ ಬಾಲಕರ ವಿಧ್ಯಾರ್ಥಿನಿಲಯ ಟಕ್ಕೆ ವಿಜಯಪುರದಲ್ಲಿ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಪೆÇ್ರ ಮಲ್ಲಿಕಾರ್ಜುನ ಅವಟಿ ಸಾಹಿತ್ಯ ಕ್ಷೇತ್ರ ವವ್ಯಾಪ್ತಿಯ ವಿವಿಧ ವಿಷಯಗಳ ಮೇಲೆ ಜವಾಬ್ದಾರಿಯುತವಾಗಿ ಚಚಿ9ಸಿ ವ್ಯವಸ್ಥೆಯ ಸಾಧಕ ಬಾಧಕಗಳಿಗೆ ಸಮ್ಮೇಳನಗಳು ಪರಿಹಾರ ಕಂಡುಕೊಳ್ಳುತ್ತವೆ. ಸಾಹಿತಿಗಳು ,ವಿದ್ವಾಂಸರು, ಕೃಷಿಕರು ,ಜಾನಪದ ಚಿಂತಕರು ಮುಂತಾದವರು ಗೋಷ್ಠಿಯಲ್ಲಿ ಆಮೂಲ್ಯವಾದ ವಿಚಾರ ವಿನಿಮಯ ಮಾಡಿಕೊಳ್ಳುವದರಿಂದ ಸವ9ರಿಗೂ ಉಪಯುಕ್ತವಾಗುತ್ತವೆ ಎಂದರು
ಎರಡನೇಯ ಉಪನ್ಯಾಸ ನೀಡಿದ ಶಾಂತವೀರ ಪ ಪೂ ಕಾಲೇಜಿನ ಉಪನ್ಯಾಸಕರಾದ ಪೆÇ್ರ ಬಸವರಾಜ ಕುಂಬಾರ ಸಂತರ ಹಾಗು ಆರೂಢರ ಮಹಿಮೆ ಕುರಿತು ಮಾತನಾಡಿ ಈ ದೇಶದಲ್ಲಿ ಸಂತ ಕನಕದಾಸ ,ಕಬೀರದಾಸ, ತುಕಾರಾಮ ಮುಂತಾದವರು ತಮ್ಮ ಸರಳತೆ, ಮಾನವೀಯ ದೃಷ್ಟಿಯಿಂದ ಸಮಾಜ ಕಲ್ಯಾಣ ಮಾಡುವ ಸಂಕಲ್ಪ ಇರುವದರಿಂದ ಸಂತರಾದರು. ನುಡಿದಂತೆ ನಡೆ ಅವರದಾಗಿತ್ತು.
ಪವಿತ್ರ ಹಾಗು ನಿರ್ಮಲವಾದ ಮನಸ್ಸು ಅವರದಾಗಿತ್ತು. ಆಧ್ಯಾತ್ಮಿಕ ಪ್ರಪಂಚ ಕಟ್ಟುವಲ್ಲಿ ಅವರ ಪಾತ್ರವಿದೆ. ಆರೂಢ ಪರಂಪರೆಯ ಬಿದರ ಜಿಲ್ಲೆಯ ಶಿವಕುಮಾರ ಸ್ವಾಮೀಜಿ ವಿಜಯಪುರ ಶಾಂತಾಶ್ರಮದ ಲಿ: ಅಭಿನವ ಶಿವಪುತ್ರ ಸ್ವಾಮೀಜಿ ಹಾಗು ಇಂಚಲ ಭಾರತಿ ಸ್ವಾಮೀಜಿ ಆರೂಢರ ಪರಂಪರೆಯನ್ನು ಉಳಿಸಿಕೊಂಡ ಕೀರ್ತಿ ಅವರಿಗೆ ಸಲ್ಲುತ್ತದೆ ಲಿ: ಸಿದ್ದೇಶ್ವರ ಶ್ರೀ ಇವರ ತತ್ವ ಸಿದ್ಧಾಂತಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಎಂದರು
ಕಾರ್ಯಕ್ರಮ ಉದ್ಘಾಟಿಸಿದ ಸರಕಾರಿ ಪ್ರೌಢ ಶಾಲೆಯ ಮುಖ್ಯ ಅಧ್ಯಾಪಕಿ ಕಮಲಾ ಮುರಾಳ ಮಾತನಾಡಿ ಸಾಹಿತ್ಯ ಸಮ್ಮೇಳನಗಳು ಸಮಾಜಮುಖಿಯಾಗಿ ವಿಷಯ ಗಳನ್ನು ಚಚಿ9ಸುವದರಿಂದ ಯುವಜನರಿಗೆ ಅಪಾರವಾದ ಜ್ಞಾನ ನೀಡುತ್ತವೆ. ಹೊಸ ಪ್ರತಿಭೆಗಳನ್ನು ಗುರುತಿಸುವ ಕಾರ್ಯ ಶ್ಲಾಘನೀಯವಾಗಿದೆ.
ಭಾರತೀಯ ಸಂಸ್ಕøತಿಯ ಉತ್ಸವಗಳು ಸಂತರ ಸೂಫಿಗಳು ಶರಣರು ಶಿವಾಚಾರ್ಯರು ಸಮೃದ್ಧ ಸಾಹಿತ್ಯ ಉಳಿಸಿದ್ದರಿಂದ ಸರ್ವರು ಗೌರವದಿಂದ ಬದುಕುತ್ತಿದ್ದೆವೆ ಎಂದರು
ಜಿಲ್ಲಾ ದತ್ತಿ ಸಂಚಾಲಕ ರಾಜೇಸಾಬ ಶಿವನಗುತ್ತಿ ಮಾತನಾಡಿ ಜಿಲ್ಲೆಯಲ್ಲಿ 149 ದತ್ತಿಗಳಿದ್ದು ಎಲ್ಲವೂಗಳನ್ನು ವಿದ್ವಾಂಸರಿಂದ ಗೋಷ್ಠಿಗಳನ್ನು ಏರ್ಪಡಿಸುತ್ತಿದ್ದೇವೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ವಹಿಸಿದ್ದರು.
ವಿಧ್ಯಾರ್ಥಿನಿಲಯ ಪಾಲಕ ಬಸವರಾಜ ಸಾವಳಗಿ ಕವನ ವಾಚಿಸಿದರು . ಮೆಹೆತಾಬ. ಕಡಕೋಳ ಮಡಿವಾಳೇಶನ ತತ್ವ ಪದ ಹಾಡಿ ಸಭೆಯನ್ನು ರಂಜಿಸಿದರು .ಚನ್ನಬಸಯ್ಯ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ನೂರಾರು ವಿಧ್ಯಾರ್ಥಿಗಳು ಭಾಗಿಯಾಗಿದ್ದರು.