ಸಾಹಿತ್ಯ ಸಂಸ್ಕಾರವನ್ನು ಬಿತ್ತಬೇಕುಃ ಶಶಿಕಲಾ ವೀರಯ್ಯಸ್ವಾಮಿ

ವಿಜಯಪುರ, ನ.13-ಕಷ್ಟಗಳ ನಡುವೆ ಸುಖವನ್ನರಸುತ್ತ ನಗುನಗುತ್ತ ಶಾಂತಿಯಿಂದ ಬಾಳುವುದೇ ಜೀವನದ ಸಾರ್ಥಕತೆಯಾಗಿದೆ. ಸದ್ಗುಣಗಳು ಅಳವಡುತ್ತವೆ. ಪ್ರಾಮಾಣಿಕ ಬದುಕಿನಿಂದ ಜೀವನ ಪ್ರೀತಿ ಹೆಚ್ಚುವುದೆಂದು ಸಾಹಿತಿ ಮಲ್ಲಮ್ಮ ಬಿರಾದಾರ ಹೇಳಿದರು. ಅವರು ಡಾ. ಸರಸ್ವತಿ ಚಿಮ್ಮಲಗಿಯವರ ದತ್ತಿ ಕಾರ್ಯಕ್ರಮದಲ್ಲಿ ಆಧುನಿಕ ವಚನಕಾರ್ತಿಯರು ಕುರಿತಾಗಿ ಉಪನ್ಯಾಸ ನೀಡಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಜಿಲ್ಲೆಯ ಇಬ್ಬರು ಮಹಿಳಾ ಸಾಧಕಿಯರಾದ ಹಿರಿಯ ಸಾಹಿತಿ ಶ್ರೀಮತಿ ಶಶಿಕಲಾ ವೀರಯ್ಯಸ್ವಾಮಿ ಹಾಗೂ ಜಿಲ್ಲಾಸ್ಪತ್ರೆಯ ಶುಶ್ರೂಕ ಅಧಿಕಾರಿಗಳಾದ ಅನುಪಮಾ ಚಲವಾದಿಯವರನ್ನು ಸನ್ಮಾನಿಸಿತು.
ವೀರಶೈವ ಮಹಾಸಭಾದಲ್ಲಿ ನಡೆದ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ವಿಠ್ಠಲ ಪೂಜಾರಿ ಮತ್ತು ಅಧ್ಯಕ್ಷರಾಗಿ ಜಿಲ್ಲಾ ವೀರಶೈವ ಮಹಾಸಭಾದ ವಿ.ಸಿ. ನಾಗಠಾಣ ಭಾಗವಹಿಸಿದ್ದರು. ಸನ್ಮಾನ ಸ್ವೀಕರಿಸಿದ ಶಶಿಕಲಾ ವೀರಯ್ಯಸ್ವಾಮಿ ಅವರು ಸಾಹಿತಿಗಳಾದವರು ಜನರಲ್ಲಿ ಸಾಮಾಜಿಕ ಪ್ರಜ್ಞೆ, ಬೆಳೆಸಬೇಕು. ಸಾಹಿತ್ಯದ ಉದ್ದೇಶ ಕೇವಲ ಮನರಂಜನೆಯಾಗಿರದೆ ನೀತಿ ಪ್ರಚೋದಕವೂ ಆಗಿರಬೇಕು. ಇಂದಿನ ಪ್ರಸಾರ ಮಾಧ್ಯಮದಲ್ಲಿ ಬರುವ ಧಾರಾವಾಹಿ ಮತ್ತು ಸಿನೆಮಾಗಳು ಮಕ್ಕಳಲ್ಲಿ ಅನೈತಿಕ ಗುಣಗಳನ್ನು ಉತ್ತೇಜಿಸುತ್ತವೆಯೆಂದು ಹೇಳಿದರು.
ಸಾನಿಧ್ಯವನ್ನು ವಹಿಸಿದ್ದ ಪೂಜ್ಯ ಶ್ರೀ ಶಂಭುಲಿಂಗ ಮಹಾಸ್ವಾಮಿಗಳು ಮಾತನಾಡಿ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಿದರೆ ದೇಶ ಪ್ರಗತಿ ಹೊಂದುತ್ತದೆಯೆಂದು ಹೇಳಿದರು.
ಜಂಬುನಾಥ ಕಂಚ್ಯಾಣಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಿದ್ದಲಿಂಗ ಹದಿಮೂರ ಸ್ವಾಗತಿಸಿದರು. ಪ್ರೊ. ಎ.ಎಸ್. ಕೋರಿ ಪ್ರಾರ್ಥಿಸಿದರು. ಯಮನೂರಪ್ಪ ಅರಬಿ ವಂದಿಸಿದರು. ಆಮರೇಶ ಸಾಲಕ್ಕಿ ಕಾರ್ಯಕ್ರಮ ನಿರೂಪಿಸಿದರು.
ಎಂ.ಆಯ್. ಕುಮಟಗಿ, ಸಿ.ಎಸ್. ಕಣಕಾಲಮಠ, ಪ್ರೊ. ವಿ.ಡಿ. ಐಹೊಳ್ಳಿ, ಕಮಲಾಕ್ಷಿ ಗೆಜ್ಜಿ, ಬಿ.ಎಚ್. ಬಾದರಬಂಡಿ, ಎಂ.ಎಂ. ಅವರಾದಿ, ಡಾ. ಉಷಾ ಹಿರೇಮಠ, ಸುನೀಲ ಜೈನಾಪೂರ, ಕೌಲಗಿ ಗುರುಗಳು, ಬಿ.ಎಸ್. ಹಳ್ಳಿ, ಎಸ್.ಜಿ. ನಾಡಗೌಡರ ಮುಂತಾದವರು ಉಪಸ್ಥಿತರಿದ್ದರು.