ಸಾಹಿತ್ಯ ಲೋಕಕ್ಕೆ ಬೇಂದ್ರೆಯವರ ಕೊಡುಗೆ ಅಪಾರ

ಸೊರಬ.ಮೆ.22: ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಸಾಹಿತಿಗಳ ಸಾಹಿತ್ಯಾಭಿರುಚಿ ಯಿಂದ ಹೊರಹೊಮ್ಮಿದ ಸಾಹಿತ್ಯ ಸಂಪತ್ತು ಅಗಾಧವಾಗಿದೆ ಬೇಂದ್ರೆಯವರ ಕೊಡುಗೆ ಅನಿಟ್ಟಿನಲ್ಲಿ ಹಿರಿದಾದುದಾಗಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ.ವಿಶ್ವನಾಥ್ ಹೇಳಿದರು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ದತ್ತಿನಿಧಿ ಕಾರ್ಯಕ್ರಮವನ್ನು ಶಾಂತಮ್ಮ ಬಸವನಗೌಡ, ಶೋಭಾ ಬಾಯಿ ಅನಂತರಾವ್ ಡೋಂಗ್ರೆ ದತ್ತಿ ಹೆಸರಿನಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಬೇಂದ್ರೆಯ ವೇರ ಸಾಹಿತ್ಯದಲ್ಲಿ ಸಮಾ ಜವನ್ನು ತಿದ್ದುವ ಸಂದೇಶ ಇರುತಿತ್ತು ಸಾಮಾಜಿಕ ಮೌಲ್ಯದ ಒಳನೋಟ ಎದ್ದು ಕಾಣುತ್ತದೆ ಎಂದು ಹೇಳಿದರು.ಶಿರಸಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕ ನೀಲೇಶ್ ಜಾನಪದ ಸಾಹಿತ್ಯದಲ್ಲಿ ಮಹಿಳೆಯ ಪಾತ್ರ ಹಿರಿದಾದುದಾಗಿದೆ ಎಂಬ ವಿಚಾರವನ್ನು ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು ಆಧುನೀಕರಣ ಹಾಗೂ ಪಾಶ್ಚತೀಕರಣದ ಪ್ರಭಾವದಿಂದ  ಗ್ರಾಮೀಣ ಜಾನಪದ ಸಂಸ್ಕೃತಿ ನಶಿಸುತ್ತಿರುವ ಹಂತಕ್ಕೆ ತಲುಪಿದೆ ಎಂದು ಹೇಳಿದ ಅವರು ಈ ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಸಕಾರಾತ್ಮಕವಾಗಿ ಎಲ್ಲರೂ ಪ್ರಯತ್ನಿಸಿದಾಗ ಸಾಂಸ್ಕೃತಿಕ ನೆಲೆಗಟ್ಟಿನ್ನು ಉಳಿಸಲು ಸಾಧ್ಯ ಎಂದರು. ಕಸಾಪ ಅಧ್ಯಕ್ಷ ಶಿವಾನಂದ ಪಾಣಿ ಕಾರ್ಯಕ್ರಮ ಉದ್ಘಾಟಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲೆ ಡಾ . ಎನ್.ಹೇಮಲತಾ ವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ದತ್ತಿ ದಾನಿ ಸಂಜಯ್ ಡೋಂಗ್ರೆ, ಕಸಾಪ ಕಾರ್ಯದರ್ಶಿ ರಮೇಶ್, ಪದಾಧಿಕಾರಿಗಳಾದ ಸವಿತಾ, ನೇತ್ರಾ, ರೇಣುಕಮ್ಮಗೌಳಿ, ಉಪನ್ಯಾಸಕರಾದ ನೇತ್ರಾವತಿ, ಪವಿತ್ರ, ರಾಜಶೇಖರ್ ಗೌಡ, ಮೊದಲಾದವರಿದ್ದರು. ಜಯಲಕ್ಷ್ಮಿ ಪ್ರಾರ್ಥಿಸಿ,ಲಕ್ಷೀಶ ಸ್ವಾಗತಿಸಿದರು, ಶ್ವೇತಾ ನಿರೂಪಿಸಿದರು,ಸಂದೇಶ್ ವಂದಿಸಿದರು.