ಸಾಹಿತ್ಯ ರತ್ನ ಅಣ್ಣಾ ಭಾವು ಸಾಠೆ ಜಯಂತಿ ನಿಮಿತ್ತ ಬೃಹತ್ ಬೈಕ್ ರ್ಯಾಲಿ

(ಸಂಜೆವಾಣಿ ವಾರ್ತೆ)
ಔರಾದ : ಆ.3: ಸಾಹಿತ್ಯ ರತ್ನ ಅಣ್ಣಾ ಭಾವು ಸಾಠೆ ರವರ 102ನೇ ಜಯಂತ್ಯುತ್ಸವದ ಅಂಗವಾಗಿ
ಮಾದಿಗ ಸಮಾಜ ಸಂಘದ ವತಿಯಿಂದ ಸಮಾಜ ಮುಖಂಡ ಬಂಟಿ ದರಬಾರೆ,ಹಾಗೂ ಸುಧಾಕರ ಕೊಳ್ಳುರ ಅವರ ನೇತೃತ್ವದಲ್ಲಿ ಪಟ್ಟಣದಲ್ಲಿ ಬೃಹತ್ ಬೈಕ್ ರ್ಯಾಲಿ ನಡೆಯಿತು.
ಪಟ್ಟಣದ ಯಲ್ಲಾಲಿಂಗೇಶ್ವರ ಪೆಟ್ರೋಲ್ ಬಂಕ್ ನಿಂದ ಕನ್ನಡಾಂಬೆ ವೃತ್ತ, ಬಸ್ ನಿಲ್ದಾಣದ ಮುಖಾಂತರ ಬಸವೇಶ್ವರ ವೃತ್ತ,, ಬಸ್ ಡಿಪೆÇೀ ಸೇರಿದಂತೆ ವಿವಿಧ ಮುಖ್ಯ ರಸ್ತೆಗಳ ಮೂಲಕ ಅಣ್ಣಾ ಭಾವು ಸಾಠೆ ಅವರ ಭಾವಚಿತ್ರ ಮೆರವಣಿಗೆ ಹಾಗೂ ಬೃಹತ್ ಬೈಕ್ ರ್ಯಾಲಿ ಕನ್ನಡಾಂಬೆ ವೃತ್ತದಲ್ಲಿ ಸಮಾವೇಶಗೊಂಡಿತ್ತು, ಅಣ್ಣಾ ಭಾವು ಸಾಠೆ ಭಾವಚಿತ್ರಕ್ಕೆ ಮರಾಠ ಸಮುದಾಯದ ಮುಖಂಡ ಶಿವಾಜಿರಾವ ಪಾಟೀಲ ಮುಂಗನಾಳ ಅವರು ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಬಾಬುರಾವ್ ತಾರೆ, ಡಾ ಫಯಾಜ , ರಾಮಣ್ಣ ಒಡೆಯರ್, ಅನಂಜಾ ರಡ್ಡಿ, ಗಣಪತಿ ವಾಸುದೇವ್, ಸುಭಾಷ್ ಲಾಧಾ, ಬಾಲಾಜಿ ಮಿತ್ವ, ಬಬ್ಲು ಶಾ, ಬಾಲಾಜಿ ಕಾಸಲೆ, ಶಂಕರ ಪಾಟೀಲ, ಇಸ್ಮಾಯಿಲ್, ಸ್ವಾಮಿ ದಾಸ್ ಮೇಘ, ತುಳಸಿರಾಮ್ ಜಕಾತೆ, ಅನಿಲ್ ಸೂರ್ಯವಂಶಿ, ಯಶೇಪ್ಪಾ ಶೆಂಬೆಳ್ಳಿ, ಸಮಾಧಾನ ಸಂತಪುರ್, ಲಖನ್ ಲಾಧೇಕರ್, ಅಮರ್ ಜಲ್ವ,ರಾಜು ಡೊಂಗರಗಾಂವ, ನಾಮದೇವ, ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.