ಸಾಹಿತ್ಯ ರಚನೆಗೆ ಮುಂದಾಗಲು ಕರೆ


ಸಂಜೆ ವಾಣಿ ವಾರ್ತೆ
ಕೊಟ್ಟೂರು, ಏ.14: ಶಿಕ್ಷಕ ತರಬೇತಿ ಕಾಲೇಜುಗಳಲ್ಲಿ ಸಾಹಿತ್ಯ ಬೆಳೆಸುವ ನಿಟ್ಟಿನಲ್ಲಿ ಮುಂದಾಗಬೇಕು ‌ಎಂದು  ಕಾಲೇಜು ಪ್ರಾಂಶುಪಾಲರಾದ ರವಿಕುಮಾರ್ ಹೇಳಿದರು.
ಪಟ್ಟಣದ ತುಂಗಭದ್ರಾ ಕಾಲೇಜು
 ಆವರಣದಲ್ಲಿ ಆಯೋಜಿಸಿದ್ದ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ ಹುಬ್ಬಳ್ಳಿ ಹಾಗೂ ವಿಜಯ ನಗರ ಜಿಲ್ಲಾ ಘಟಕ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಕೊಟ್ಟೂರು ತಾಲ್ಲೂಕು ಘಟಕ ಇವರ ಸಂಯುಕ್ತಾಶ್ರಯದಲ್ಲಿ
ಚುಟುಕು ಚಿರಂತನ ಕವಿಗೋಷ್ಠಿ ಕಾರ್ಯಕ್ರಮ  ಉದ್ಘಾಟಿಸಿ ಮಾತನಾಡಿದರು.
 ಮೊಬೈಲ್ ಫೋನ್ ಹಾಗೂ ಸಾಮಾಜಿಕ ಜಾಲ ತಾಣಗಳಲ್ಲಿ ಪ್ರತಿಯೊಬ್ಬರೂ ಸಾಹಿತ್ಯ ಬೆಳೆಸುವ ಆಸಕ್ತಿ  ಕುಂಠಿತವಾಗುತ್ತಿದೆ
ಕಾಲೇಜು ಶಿಕ್ಷಣದಲ್ಲಿ ಓದುವ ಬರೆಯುವ ಹವ್ಯಾಸಗಳು ಕಡಿಮೆಯಾಗುತ್ತದೆ.
ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಚುಟುಕು ಸಾಹಿತ್ಯ ಕವನ ನಗೆ ಹನಿಗಳನ್ನು ರಚಿಸಲು ಹಾಗೂ ಕನ್ನಡ ಸಾಹಿತ್ಯ ಬೆಳೆಸುವ ನಿಟ್ಟಿನಲ್ಲಿ ಮುಂದಾಗಬೇಕು ಎಂದರು.
ಚುಟುಕು ಸಾಹಿತ್ಯ ರಚನೆ ಐದರಿಂದ ಆರು ಸಾಲುಗಳಲ್ಲಿ ಬರೆಯುವುದಕ್ಕೆ ಚುಟುಕು ಸಾಹಿತ್ಯ ಎನ್ನುವುದು. ಯುವ ಕವಿಗಳು ಸಾಹಿತ್ಯ ರಚನೆ
  ಹವ್ಯಾಸ ರೂಢಿಸಿಕೊಳ್ಳಿ ಎಂದು ಮೊರಿಗೇರಿ ಮಂಜುನಾಥ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕ. ಚು .ಸಾ ಪ.ಕೊ ,ಘ ಪದಾಧಿಕಾರಿಗಳಾದ
ಎಂ ಎಸ್ ವಿರೇಶ್, ಶಿವು ಚಿನ್ನನಹಳ್ಳಿ , ಪ್ರಭಾಕರ, ನಾಗರಾಜ್ ,  ಕಾಲೇಜು ವಿದ್ಯಾರ್ಥಿಗಳು ಚುಟುಕು ಕವನಗಳ ವಾಚನ ಮಾಡಿ ಚಿರಂತನ ಕವಿಗೋಷ್ಠಿಯಲ್ಲಿ ಭಾಗವಹಿಸುವ ಮೂಲಕ ಗಮನ ಸೆಳೆದರು.
ವಾಚನ ಮಾಡಿದವರಿಗೆ ಉಪನ್ಯಾಸಕರಾದ ಶಿವು ಕುಮಾರ್  ಪ್ರಮಾಣ ಪತ್ರ ನೀಡಿ ಗೌರವಿಸಿದರು.
ಕಾವೇರಿ ಪ್ರಾರ್ಥನೆ ಸಲ್ಲಿಸಿದರು.ಉಪನ್ಯಾಸಕರಾದ ಅರವಿಂದ್ ಬಸಾಪುರ ಸ್ವಾಗತಿಸಿದರು. ಎಂ ಈಶ್ವರಯ್ಯ ವಂದಿಸಿದರು.
ಈ ಸಂದರ್ಭದಲ್ಲಿ ಬಿ ಇ ಡಿ ಕಾಲೇಜು ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು.