ಸಾಹಿತ್ಯ ಬರಹಗಿಂತ ಜೀವನ ಮೌಲ್ಯ ತುಂಬಾ ಮುಖ್ಯ

ರಾಯಚೂರು,ಮಾ.೦೬- ಸಾಹಿತ್ಯ ಬರಹಗಿಂತ ಜೀವನ ಮೌಲ್ಯಗಳು ತುಂಬಾ ಮುಖ್ಯ ಎಂದು ಸಂಗೀತ ಮಠಪತಿಯವರು ಹೇಳಿದರು.
ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ರಾಯಚೂರಿನ ಕನ್ನಡ ಭವನದಲ್ಲಿ ಡಾ.ಬರಗೂರು ರಾಮಚಂದ್ರಪ್ಪ ದತ್ತಿ, ರಾಜಲಷ್ಮಿ ರಾಮಚಂದ್ರಪ್ಪ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ಕಾದಂಬರಿಗಳಿಗೆ ಜ್ಞಾನಪೀಠ ಪ್ರಶಸ್ತಿ ಪಡೆದ ನಾಡು ನಮ್ಮದು. ಕಾದಂಬರಿಗಳು ಜೀವನದ ಮೌಲ್ಯಗಳನ್ನು ಹೇಳುತ್ತವೆ.
ಅದಕ್ಕಾಗಿ ನನಗೆ ಕಾದಂಬರಿಯನ್ನು ಬರೆಯುವ ಹುಚ್ಚು ಹಿಡಿದು ಕಾದಂಬರಿಯನ್ನು ಬರೆದೆ ಎಂದರು. ಆ.ನಾ.ಕ್ರು. ಅವರ ಕಾದಂಬರಿಗಳು ಹೆಣ್ಣಿನ ಬದುಕನ್ನು ನೈಜವಾಗಿ ಚಿತ್ರಿಸುತ್ತವೆ ಅವರ ಕಾದಂಬರಿಗಳು ನನಗೆ ಇಷ್ಟ ಎಂದರು.
ರಾಜ್ಯ ಕಸಾಪದ ದತ್ತಿಗೆ ಭಾಜನರಾದ ಹಿರಿಯ ಸಾಹಿತಿಗಳು ಹಾಗೂ ಉಪನ್ಯಾಸಕರಾದ ಡಾ.ಸಿ.ಬಿ. ಚಿಲರಾಗಿ, ಅವರು ಮಾತನಾಡುತ್ತ ರಾಯಚೂರು ಸಾಹಿತ್ಯ ಲೋಕದಲ್ಲಿ ಅನೇಕ ಶ್ರೇಷ್ಠ ಸಾಹಿತ್ಯ ಲೇಖರರು ಇದ್ದರೆ, ಇತ್ತಿಚಗೆ ಯುವ ಬರಹಗಾರರು ಉತ್ತಮ ಸಾಹಿತ್ಯ ಕೃಷಿ ಮಾಡುತ್ತಿದ್ದಾರೆ. ದಕ್ಷಿಣ ಕರ್ನಾಟಕಕ್ಕಿಂತ ಉತ್ತರದಲ್ಲಿ ಹದವಾದ ಸಾಹಿತ್ಯ ಬರೆಯುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಈರಣ್ಣ ಬೆಂಗಾಲಿ, ಮಸ್ಕಿಯ ಲೇಖಕಿಯಾದ ರೇಣುಕಾ ಕೋಡಗುಂಟಿ, ಮಕ್ಕಳ ಸಾಹಿತಿಗಳಾದ ಶಂಕರ್ ದೇವರು ಹಿರೇಮಠ ಇವರನ್ನು ಸಹ ಸನ್ಮಾನಿಸಿ ಗೌರವಿಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಕಸಾಪದ ಅಧ್ಯಕ್ಷರಾದ ಎ.ರಂಗಣ್ಣ ಪಾಟೀಲ್‌ರವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿಜಯಪುರ ಜಿಲ್ಲೆಯ ಕಸಾಪದ ಅಧ್ಯಕ್ಷರಾದ ಹಾಸಿಂಪೀರ ವಾಲೀಕಾರ ಅವರು ಭಾಗವಹಿಸಿದ್ದರು. ಹಿರಿಯ ಸಾಹಿತಿಗಳಾದ ಡಾ. ಸರ್ವಮಂಗಳ ಸಕ್ರಿಯವರು ಅಭಿನಂದನಾ ನುಡಿಗಳನ್ನು ಆಡಿದರು.
ಅತಿಥಿಗಳಾಗಿ ತಾಲೂಕ ಅಧ್ಯಕ್ಷರುಗಳಾದ ರಾಯಚೂರಿನ ವೆಂಕಟೇಶ್ ಬೇವಿನಬೆಂಚಿ, ಸಿರಿವಾರದ ಮಲ್ಲಿಕಾರ್ಜುನ್ ಹಳ್ಳೂರ್, ಮಾನ್ವಿಯ ರವಿಕುಮಾರಪಾಟೀಲ್, ಲಿಂಗಸೂಗೂರಿನ ಮಲ್ಲಿಕಾರ್ಜುನ ಗೌಡೂರ್, ಮಾನ್ವಿಯ ನೇತಾಜಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಕೆ. ಈ. ನರಸಿಂಹ, ದೇವದುರ್ಗದ ಸೂಗಮ್ಮ ಗದ್ದಗಿ ಮತ್ತು ವಾಣಿಶ್ರೀ ವೆಂಕಟೇಶ್ ರಾಯಚೂರು, ಜಿಲ್ಲಾ ಕಸಾಪ ಕಾರ್ಯದರ್ಶಿಗಳಾದ ತಾಯಪ್ಪ ಹೊಸೂರ, ಮಂಜುನಾಥ ಕಾಮಿನ, ರೇಖಾ ಬಡಿಗೇರ್, ಯಂಕಣ್ಣ ಯಾದವ, ಸೇರಿದಂತೆ ಇತರರು ಭಾಗವಹಿಸಿದ್ದರು. ದಂಡಪ್ಪ ಬಿರಾದಾರ್ ನಿರೂಪಿಸಿದರು.
ಪ್ರತಿಭಾ ಗೋನಾಳ ಪ್ರಾರ್ಥಿಸಿದರು. ಕಸಾಪದ ಎಲ್ಲಾ ಪದಾಧಿಕಾರಿಗಳು, ಅಜೀವ ಸದಸ್ಯರು, ಮಾಧ್ಯಮದ ಬಂಧುಗಳು, ಕನ್ನಡ ಪರಹೋರಾಟಗಾರರು, ಚಿಂತಕರು, ಲೇಖಕರು ಹಾಗೂ ಕನ್ನಡದ ಮನಸುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.