ಸಾಹಿತ್ಯ ಜನರನ್ನು ಒಗ್ಗೂಡಿಸಬೇಕು: ಬಟ್ಟು ಸತ್ಯನಾರಾಯಣ

ಕಲಬುರಗಿ,ಆ 5: ಸಾಹಿತ್ಯ ಮತ್ತು ಭಾಷೆ ಜನರನ್ನು ಒಗ್ಗೂಡಿಸಬೇಕು, ಜನರಲ್ಲಿ ಒಡಕು ಉಂಟು ಮಾಡಬಾರದು. ಸಾಹಿತ್ಯ ಜನರಲ್ಲಿ ರಾಷ್ಟ್ರೀಯತೆ, ರಾಷ್ಟ್ರಭಕ್ತಿ ಮತ್ತು ರಾಷ್ಟ್ರಪ್ರೇಮ ಗಟ್ಟಿಗೊಳಿಸಬೇಕು. ದೇಶ ಸೇವೆಯ ಗುರಿಯಿಂದ ದೂರ ಸರಿದರೆ ಸಾಹಿತ್ಯ, ಭಾಷೆ ತಮ್ಮ ಮಹತ್ವ ಕಳೆದುಕೊಳ್ಳುತ್ತವೆ. ರಾಷ್ಟ್ರೀಯ ಆಂದೋಲನ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದನ್ನು ಮರೆಯುವಂತಿಲ್ಲ. ಭಾಷೆಯಲ್ಲಿ ಆಗಾಧ ಶಕ್ತಿ ಇದೆ. ಆದರೆ ಇದರ ದುರುಪಯೋಗ ಆಗಬಾರದು. ಸಾಹಿತ್ಯ, ಭಾಷೆ ನಮ್ಮ ವ್ಯಕ್ತಿತ್ವವನ್ನು ರೂಪಿಸುವುದರ ಜೊತೆಗೆ ಸಮಾಜದ, ದೇಶದ ವ್ಯಕ್ತಿತ್ವವನ್ನೂ ರೂಪಿಸುತ್ತದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪೆÇ್ರ ಬಟ್ಟು ಸತ್ಯನಾರಾಯಣ ಹೇಳಿದರು. ಮಾನವಿಕ ಮತ್ತು ಭಾಷಾ ನಿಕಾಯ ಏರ್ಪಡಿಸಿದ ರಾಷ್ಟ್ರೀಯತೆ ಮತ್ತು ಸಾಹಿತ್ಯ ಎಂಬ ವಿಷಯದ ಕುರಿತು ಹಮ್ಮಿಕೊಳ್ಳಲಾದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟ್ರೀಯತೆ ಭಾರತೀಯರ ರಕ್ತದಲ್ಲಿಯೇ ಇದೆ. ವಸುದೈವ ಕುಟುಂಬಕಂ ಮತ್ತು ವಂದೇ ಮಾತರಂ ಎಂಬ ಊಕ್ತಿಗಳು ಭಾರತೀಯರ ರಾಷ್ಟ್ರೀಯತೆಯ ಕಲ್ಪನೆಯನ್ನು ವಿವರಿಸುತ್ತವೆ. ಆದರೆ ಭಾಷೆಗಳು ರಾಷ್ಟ್ರೀಯತೆ ಜನರ ಮನಸ್ಸಿನಲ್ಲಿ ಗಟ್ಟಿಗೊಳಿಸಲು ಅಡತಡೆ ಉಂಟು ಮಾಡಿವೆ. ಹಿಂದಿ ರಾಷ್ಟ್ರಭಾಷೆಯಾಗಿ ಸ್ವೀಕೃತಗೊಂಡಿಲ್ಲ. ಹೀಗಾಗಿ ಸಾಹಿತ್ಯ ಮತ್ತು ಭಾಷೆಗಳು ರಾಷ್ಟ್ರೀಯತೆ ಬೆಳೆಸುವಲ್ಲಿ ಬಹಳ ಮಹತ್ವದ ಪಾತ್ರ ನಿರ್ವಹಿಸುತ್ತಿಲ್ಲ ಎಂದು ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪೆÇ್ರ ವಿಜಯ್ ನಾಗಣ್ಣವರ ಹೇಳಿದರು.
ಬಹುತ್ವದಿಂದ ಕೂಡಿರುವ ಭಾರತೀಯರನ್ನು ಒಗ್ಗೂಡಿಸುವ ಶಕ್ತಿ ಕೇವಲ ರಾಷ್ಟ್ರೀಯತೆಗೆ ಇದೆ. ಜನರನ್ನು ಒಗ್ಗೂಡಿಸುವ,ಐಕ್ಯತೆ ಸಾಧಿಸುವ, ಭಾರತೀಯರು ಒಂದು ಜನಾಂಗವಾಗಿ, ಒಂದು ದೇಶವಾಗಿ ಬದುಕುವಂತೆ ಮಾಡುವ ಶಕ್ತಿ ರಾಷ್ಟ್ರೀಯತೆಗೆ ಇದೆ. ಜಾತಿ, ಸಮುದಾಯ, ಧರ್ಮ, ಪ್ರದೇಶ, ಭಾಷೆಗಳಲ್ಲಿ ಒಡೆದು ಹೋದ ಭಾರತೀಯರನ್ನು ಒಂದೇ ಸೂರಿನ ಅಡಿ ಬದುಕುವಂತೆ ಮಾಡಲು ರಾಷ್ಟ್ರೀಯತೆನ್ನು ಅಪ್ಪಿಕೊಳ್ಳುವುದು ಮತ್ತು ಸ್ವೀಕರಿಸುವುದು ಅನಿವಾರ್ಯ.ಭಾರತೀಯರಿಗೆ ರಾಷ್ಟ್ರೀಯತೆಯ ಕಲ್ಪನೆ ಇರಲಿಲ್ಲ ಎಂಬ ವಾದ ಸರಿಯಲ್ಲ. ರಾಜಕೀಯವಾಗಿ ಭಾರತ ಹಲವು ರಾಜಮನೆತನಗಳ ಆಡಳಿತಕ್ಕೆ ಒಳಪಟ್ಟಿದ್ದರೂ ಸಾಹಿತ್ಯಕವಾಗಿ, ಸಾಂಸ್ಕøತಿಕವಾಗಿ ಒಂದು ರಾಷ್ಟ್ರವಾಗಿತ್ತು. ಇದಕ್ಕೆ ಅನೇಕ ನಿದರ್ಶನಗಳಿವೆ. ಮೊಗಲರ ಆಳ್ವಿಕೆ ಪ್ರಾರಂಭವಾಗುವ ಮೊದಲೇ ಭಾರತೀಯ ಅನೇಕ ರಾಜಮನೆತನಗಳು ಅಖಂಡ ಭಾರತ ಆಳಿದ ಮತ್ತು ವಿದೇಶಗಳಲ್ಲಿ ಆಳ್ವಿಕೆ ಮಾಡಿದ ನಿದರ್ಶನಗಳಿವೆ. ಭಾರತೀಯ ಇತಿಹಾಸ ಓದುವ ಕ್ರಮ ಸರಿಯಾಗಿಲ್ಲ.ಹಲವು ಭಾಷೆಗಳನ್ನಾಡುವ ಜನರು ಈ ದೇಶದಲ್ಲಿದ್ದಾರೆ. ಆದರೆ ಭಾಷೆಯ ತೊಡಕಿನಿಂದ ಪರಸ್ಪರರ ನಡುವೆ ಸಂವಹನ ಸಾಧ್ಯವಾಗುತ್ತಿಲ್ಲ. ಹಿಂದಿಯನ್ನು ರಾಷ್ಟ್ರಭಾಷೆಯನ್ನಾಗಿ ಸ್ವೀಕರಿಸುವ ಅಗತ್ಯವಿದೆ. ಇಂಗ್ಲಿಷ್ ಭಾಷೆಗೆ ಮಣಿ ಹಾಕಿದರೆ ಮುಂದಿನ ಐವತ್ತು ವರ್ಷಗಳಲ್ಲಿ ಭಾರತೀಯ ಭಾಷೆಗಳು ಕಣ್ಮರೆಯಾಗಬಹುದು. ಹಿಂದಿ ಬೇಡವೆಂದರೆ ಭಾರತೀಯ ಬೇರೆ ಭಾಷೆಯನ್ನು ರಾಷ್ಟ್ರಭಾಷೆಯನ್ನಾಗಿ ಮಾಡಬಹುದು. ಭಾರತೀಯರನ್ನು ಒಗ್ಗೂಡಿಸಲು ರಾಷ್ಟ್ರೀಯ ಭಾಷೆ ಅಗತ್ಯವಾಗಿ ಬೇಕು, ರಾಷ್ಟ್ರೀಯತೆಗೆ ಒತ್ತು ನೀಡುವುದರ ಮೂಲಕ, ರಾಷ್ಟ್ರೀಯತೆ ನಮ್ಮ ನರ ನಾಡಿಯಲ್ಲಿ ಮಿಡಿಯುವಂತೆ ಮಾಡುವುದರ ಮೂಲಕ ನಾವು ಸದೃಢ, ಸುಸ್ಥಿರ ಭಾರತ ಕಟ್ಟಲು ಸಾಧ್ಯವಿದೆ ಎಂದು ಮಾನವಿಕ ಮತ್ತು ಭಾಷಾ ನಿಕಾಯದ ಡೀನ್ ಪೆÇ್ರ ಬಸವರಾಜ ಡೋಣೂರ ಹೇಳಿದರು.
ಪೆÇ್ರ ಉಮಾರಾಣಿ, ಸಾಯಿಕೃಷ್ಣ ಭಾರದ್ವಾಜ್, ಮಹೇಂದ್ರ ಎಂ ವಿಚಾರ ಸಂಕಿರಣದಲ್ಲಿ ಮಾತನಾಡಿದರು.ಇಂಗ್ಲಿಷ್ ಸಹಾಯಕ ಪ್ರಾಧ್ಯಾಪಕ ಡಾ. ಪ್ರಕಾಶ್ ಬಾಳಿಕಾಯಿ ನಿರೂಪಿಸಿದರು. ಡಾ ಆಶಿಶ್ ಬೆನಮಕರ ವಂದನೆ ಸಲ್ಲಿಸಿದರು.