ಸಾಹಿತ್ಯ ಚಟುವಟಿಕೆಗಳಿಗೆ ವಿಶೇಷ ಕಾಯಕಲ್ಪ-ಶೆಲ್ಲಿಕೇರಿ

????????????????????????????????????????????????????????????????????????????????????????????????????????????????????????????????????????????????????????????????????????????????????????

ಬಾದಾಮಿ, ಏ21: ಜಿಲ್ಲೆಯಲ್ಲಿನ ಸಾಹಿತ್ಯ ಚಟುವಟಿಕೆಗಳಿಗೆ ವಿಶೇಷ ಕಾಯಕಲ್ಪ ನೀಡುವುದರ ಜೊತೆಗೆ ಎಲ್ಲ ಸಾಹಿತಿ, ಕಲಾವಿದರಿಗೆ ಸೂಕ್ತ ವೇದಿಕೆ ಒದಗಿಸುತ್ತೇನೆ. ಒಂದು ಮಾದರಿ ಜಿಲ್ಲಾಘಟಕ ಮಾಡಲು ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಜಿಲ್ಲಾ ಕಸಾಪ ಚುನಾವಣಾ ಸ್ಪರ್ಧಾರ್ಥಿ ಶಿವಾನಂದ ಶೆಲ್ಲಿಕೇರಿ ಹೇಳಿದರು.
ಅವರು ನಗರದ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬಾಗಲಕೋಟ ಜಿಲ್ಲೆಗೆ ಸಾಹಿತ್ಯ ಸಮ್ಮೇಳನ ನಡೆಸಲು, ಸಮಗ್ರ ಅಭಿವೃದ್ಧಿ, ಸಾಹಿತಿಗಳಿಗೆ ಸೂಕ್ತ ವೇದಿಕೆ, ಕಲಾವಿದರು, ವಚನ ಸಾಹಿತ್ಯ, ಕಮ್ಮಟ, ವಿಚಾರ ಸಂಕೀರಣ, ಕಲೆ ಸಾಹಿತಿಗಳಿಗೆ ಪುನಶ್ಚೇತನ ಕೈಗೊಳ್ಳಲು ವಿಶಿಷ್ಟ ಯೋಜನೆ ಇಟ್ಟುಕೊಂಡಿದ್ದೇನೆ ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
8900 ಜನರ ಪ್ರತಿನಿಧಿ ಚರಿತ್ರೆಯ ಹೊಸ ಇತಿಹಾಸ ಬರೆಯಲು ಸನ್ನದ್ದನಾಗಿದ್ದೇನೆ. ಜಿಲ್ಲೆಯಲ್ಲಿನ 3445 ಕಲಾವಿದರು ಸಾಂಸ್ಕøತಿಕ ವಾರಸುದಾರರು, ಈಗಾಗಲೇ ಅವರಿಗೆ ರಾಜ್ಯ, ಅಂತರಾಷ್ಟ್ರೀಯ ಅವಕಾಶ ಕಲ್ಪಿಸಿದ್ದೇನೆ. ಕಸಾಪ ರಥ ಎಳೆಯಲು ತಯಾರಿದ್ದೇನೆ. ನನಗೆ ತಾಲೂಕಿನ ಎಲ್ಲ ಸಾಹಿತ್ಯಾಭಿಮಾನಿಗಳು, ಅಜೀವ ಸದಸ್ಯರು ಮೇ.9 ರಂದು ನಡೆಯುವ ಚುನಾವಣೆಯಲ್ಲಿ ಮತ ನೀಡಿ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.
ಎಸ್.ಬಿ.ಮಮದಾಪೂರ ಪದವಿ ಕಾಲೇಜಿನ ಪ್ರಾಚಾರ್ಯ ಆರ್.ಬಿ.ಸಂಕದಾಳ ಮಾತನಾಡಿ ಬಾದಾಮಿ ತಾಲೂಕಿನವರಾದ ಶಿವಾನಂದ ಶೆಲ್ಲಿಕೇರಿ ಇವರಿಗೆ ಜಿಲ್ಲಾ ಕಸಾಪ ಚುನಾವಣೆಯಲ್ಲಿ ಮತ ನೀಡಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಬೇಕು ಎಂದರು. ಅನ್ನದಾನಿ ಹಿರೇಮಠ ನಂತರ ಬಾದಾಮಿ ತಾಲೂಕಿನವರಿಗೆ ಅವಕಾಶ ಕಲ್ಪಿಸಬೇಕು ಎಂದರು. ರಾಜ್ಯ ಸಹಕಾರಿ ಮಹಾಮಂಡಳದ ನಿರ್ದೇಶಕ ಹೊನ್ನಯ್ಯ ಹಿರೇಮಠ ಮಾತನಾಡಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಶಿವಾನಂದ ಶೆಲ್ಲಿಕೇರಿ ಮತ್ತು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಶೇಖರಗೌಡ ಮಾಲಿಪಾಟೀಲ ಅವರಿಗೆ ಮತ ನೀಡಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಎಸ್.ಬಿ.ಕಲಹಾಳ, ಎಂ.ಎಸ್.ಹಿರೇಹಾಳ, ಬಿ.ಎಫ್.ಹೊರಕೇರಿ, ಶಂಕರ ಹೂಲಿ. ಬಿ.ಎಸ್.ಪವಾಡಶೆಟ್ಟಿ, ರಾಚಣ್ಣ ಪಟ್ಟಣದ, ಅಶೋಕ ನಾಗಠಾಣ, ಬಿ.ಎಲ್.ಹೂಲಿ, ಬೋನಗೇರ, ಎಸ್.ಕೆ.ಜವಳಗದ್ದಿ, ಹನಮಂತರಾಜು, ಗೋಪಾಲಪ್ಪನವರ, ಪಿತಾಂಬರ ಗಾಣಗೇರ, ಎಸ್.ಜಿ.ಗೌಡರ ಹಾಜರಿದ್ದರು.