ಸಾಹಿತ್ಯ ಕ್ಷೇತ್ರದಲ್ಲಿ ‘ವ್ಯವಹಾರ’ ಅನಗತ್ಯ

ಪುತ್ತೂರು, ಅ.೨೯- ಸಾಹಿತ್ಯಗಳು ಮನಸ್ಸಿನ ಭಾವನೆಗಳನ್ನು ಹೊರಹಾಕಲು ಸೂಕ್ತ ಮಾಧ್ಯಮ. ಹಾಗಾಗಿ ಸಾಹಿತ್ಯ ಕೃಷಿಯಲ್ಲಿ ‘ವ್ಯವಹಾರ’ಗಳನ್ನು ಮಾಡದೇ ಉತ್ತಮ ಸಾಹಿತ್ಯ ಪ್ರಕಾರಗಳು ಮೂಡಿ ಬರುವುದು ಅಗತ್ಯ ಎಂದು ಪುತ್ತೂರಿನ ವಿವೇಕಾನಂದ ಪದವಿ ಕಾಲೇಜಿನ ಸಂಚಾಲಕ ಮುರಳಿಕೃಷ್ಣ ಕೆ.ಎನ್ ಹೇಳಿದರು.

ಪುತ್ತೂರಿನ ವಿವೇಕಾನಂದ ಪದವಿ ಕಾಲೇಜಿನ ಬೈಂದೂರು ಪ್ರಭಾಕರ ರಾವ್ ಸಭಾಭವನದಲ್ಲಿ ನಡೆದ ತೃತೀಯ ಬಿ.ಎಸ್ಸಿ ವಿದ್ಯಾರ್ಥಿನಿ ಕುಮಾರಿ ಆಶಾದೇವಿ.ಕೆ.ಎಸ್ ಇವರ ಕಥಾಸಂಕಲನ “ವಲ್ಡ್ ಆಫ್ ಮಾರ್ವೆಲ್ (ತಿoಡಿಟಜ oಜಿ mಚಿಡಿveಟ) ಎಂಬ ಕಥಾ ಸಂಕಲನವನ್ನು ಬಿಡುಗಡೆಗೊಳಿಸಿದರು.

ಕಾಲೇಜಿನ ಇಂಗ್ಲೀಷ್ ವಿಭಾಗದ ಮುಖ್ಯಸ್ಥ ಬಾಲಕೃಷ್ಣ ಎಚ್ ಇವರು ಕಥಾ ಸಂಕಲನವನ್ನು ವಿಮರ್ಶಿಸಿ ಆಶಾದೇವಿಯಂತಹ ಯುವ ಸಾಹಿತಿಗಳು ಸಮಾಜಕ್ಕೊಂದು ಮಾದರಿ ಎಂದರು.

ಕಾಲೇಜಿನ ಪ್ರಾಂಶುಪಾಲ ಪ್ರೊ.ವಿ.ಜಿ ಭಟ್ ಮಾತನಾಡಿ, ವಿದ್ಯಾರ್ಥಿಗಳು ಪಾಠದ ಜೊತೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಕೂಡಾ ಭಾಗವಹಿಸಿದಾಗ ಅವರ ಸರ್ವತೋಮುಖ ಬೆಳವಣಿಗೆ ಆಗಲು ಸಾಧ್ಯ ಎಂದರು. ಜೊತೆಗೆ ಕಾಲೇಜಿನ ಐಕ್ಯೂಎಸಿ ಸಂಯೋಜಕ ಪ್ರೊ. ಶಿವಪ್ರಸಾದ್ ಕೆ.ಎಸ್ ಮತ್ತು ವಿದ್ಯಾರ್ಥಿ ಲೇಖಕಿ ಆಶಾದೇವಿ ಉಪಸ್ಥಿತರಿದ್ದರು.

ಇಂಗ್ಲೀಷ್ ವಿಭಾಗದ ಉಪನ್ಯಾಸಕಿಯರಾದ  ರೇಖಾ ನಾಯರ್ ಸ್ವಾಗತಿಸಿ,  ಮೋತಿಬಾಯಿ ವಂದಿಸಿದರು. ಸರಸ್ವತಿ ಕಾರ್‍ಯಕ್ರಮ ನಿರೂಪಿಸಿದರು.