ಸಾಹಿತ್ಯ ಕ್ಷೇತ್ರಕ್ಕೆ ಬೆಂಬಲ: ವಿಠ್ಠಲ ಕಟಕದೊಂಡ

ವಿಜಯಪುರ: ಜೂ.19:ಸಾಹಿತ್ಯ ಕ್ಷೇತ್ರಕ್ಕೆ ನಿರಂತರವಾದ ನನ್ನ ಬೆಂಬಲವಿದೆ. ಸಾಹಿತಿಗಳೆಂದರೆ ನನಗೆ ಅಪಾರ ಗೌರವ ಎಂದು ನಾಗಠಾಣ ಮತಕ್ಷೇತ್ರದ ಶಾಸಕ ವಿಠ್ಠಲ ಕಟಕದೊಂಡ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಜಿಲ್ಲಾ, ತಾಲೂಕು ಹಾಗೂ ನಗರ ಘಟಕ ಕನ್ನಡ ಸಾಹಿತ್ಯ ಪರಿಷತ್ತು ವಿಜಯಪುರದ ವತಿಯಿಂದ ನೂತನ ಶಾಸಕರಾಗಿ ಆಯ್ಕೆಯಾದ ವಿಠ್ಠಲ ಕಟಕದೊಂಡ ಅವರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ನಾನು ಸಾಮಾಜಿಕ ರಾಜಕೀಯ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದರು ಸಾಹಿತ್ಯ ಕ್ಷೇತ್ರಕ್ಕೆ ಎಲ್ಲ ಬೆಂಬಲ ನೀಡುತ್ತೇನೆ. ಕಸಾಪ ಅಧ್ಯಕ್ಷರಾದ ಹಾಸಿಂಪೀರ ವಾಲೀಕಾರ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಚಟುವಟಿಕೆಗಳನ್ನು ಗಮನಿಸುತ್ತಿದ್ದೇನೆ. ಕನ್ನಡ ಸಾಹಿತ್ಯ ಪರಿಷತ್ತು ವಿಜಯಪುರ ಜಿಲ್ಲೆಯಲ್ಲಿ ರಾಜ್ಯದ ಗಮನ ಸೆಳೆಯುಂತೆ ಕಾರ್ಯ ನಿರ್ವಹಿಸಬೇಕು. ಹೆಚ್ಚು ಹೆಚ್ಚು ಸಾಹಿತ್ಯ ಸಮ್ಮೇಳನಗಳು, ಜರುಗಬೇಕು ನಾಡಿನ ವಿದ್ವಾಂಸರನ್ನು ಕರೆಸಿ ಉತ್ತಮವಾದ ಗೋಷ್ಠಿಗಳನ್ನು ಆಯೋಜಿಸಿ ಈ ಭಾಗದ ಜನರಿಗೆ ಸಾಹಿತ್ಯಾಭಿರುಚಿ ಮೂಡಿಸಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಗಡಿನಾಡು ಕನ್ನಡ ಪ್ರಾಧಿಕಾರದ ಅಧ್ಯಕ್ಷ ಡಾ ಸೋಮಶೇಖರ ಮಾತನಾಡಿ ರಾಜ್ಯದಲ್ಲಿ ಹತ್ತೊಂಬತ್ತು ಗಡಿನಾಡು ಜಿಲ್ಲೆಗಳಿವೆ, ಆ ಭಾಗಗಳಲ್ಲಿ ಸರ್ಕಾರ ಮತ್ತು ಪ್ರಾಧಿಕಾರ ಕನ್ನಡದ ಭಾಷಿಕರಿಗೆ ಜಾನಪದ ಸಾಹಿತ್ಯ, ಮಕ್ಕಳ ಸಾಹಿತ್ಯ, ಕವಿಗೋಷ್ಠಿ, ಕೃಷಿ ಸಾಹಿತ್ಯ ಮುಂತಾದವುಗಳ ಮೂಲಕ ಕನ್ನಡದ ಅಭಿವೃದ್ಧಿ ಕಾರ್ಯ ನಿರಂತರ ಮಾಡುತ್ತಿದ್ದೇವೆ. ಕನ್ನಡ ಉಳಿದೆಲ್ಲ ಭಾಷೆಗಳಿಗಿಂತ ಶ್ರೇಷ್ಠವಾದ ಭಾಷೆಯಾಗಿದೆ. ಕನ್ನಡ ಅನ್ನದ, ಆಡಳಿತದ, ಮಾತೃ ಭಾಷೆಯಾಗಿದೆ. ವಿಜಯಪುರ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತು ಹಾಸಿಂಪೀರ ವಾಲೀಕಾರ ಅವರ ಅಧ್ಯಕ್ಷತೆಯಲ್ಲಿ ಅತ್ತ್ಯುತ್ತಮ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಹೆಮ್ಮೆಯ ವಿಷಯ, ವಿಶೇಷವಾಗಿ ವಚಣ ಸಾಹಿತ್ಯದ ಕುರಿತು ಉಪನ್ಯಾಸಗಳು ಗೋಷ್ಠಿಗಳು ಜರುಗುತ್ತಿರುವುದು ಸಂತಸ ಎಂದರು,
ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ವಹಿಸಿದ್ದರು. ಬಸವರಾಜ ಚೌಕಿಮಠ, ವೇಣುಗೋಪಾಲ ಕಟ್ಟಿ, ಶರಣಗೌಡ ಪಾಟೀಲ್, ಚಿದಾನಂದ ಗೊರವರ ಮುಖ್ಯ ಅತಿಥಿಗಹ ಸ್ಥಾನ ವಹಿಸಿದ್ದರು. ನಗರ ಘಟಕದ ಅಧ್ಯಕ್ಷೆ ಸಂಗೀತಾ ಮಠಪತಿ, ದತ್ತಿ ಸಂಚಾಲಕ ರಾಜೇಸಾಬ ಶಿವನಗುತ್ತಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಕಸಾಪ ಪದಾಧಿಕಾರಿಗಳಾದ ಕೆ ಸುನಂದಾ, ಸುಖದೇವಿ ಅಲಬಾಳಮಠ, ಅಭಿಷೇಕ ಚಕ್ರವರ್ತಿ, ರವಿ ಕಿತ್ತೂರ, ಎಸ್ ಎಲ್ ಇಂಗಳೇಶ್ವರ, ಗುರು ಮಹೇಶ್, ಚೆನ್ನಬಸಯ್ಯ ಕೊಟಗಿ, ರಾಜಶೇಖರಯ್ಯ ಹಿರೇಮಠ, ಅನ್ನಪೂರ್ಣ ಬೆಳ್ಳೆನ್ನವರ, ಶೋಭಾ ಮೆಡೆಗಾರ, ಎ ಡಿ ಮುಲ್ಲಾ, ಡಾ ವ್ಹಿ ಎಂ ಭಾಗಾಯತ್, ಅನಂತ ದಾಣಿ, ಕವಿತಾ ಕಲ್ಯಾಣಪ್ಪಗೋಳ, ಜ್ಯೋತಿ ಹಿಪ್ಪರಗಿ, ವಿಕಾಸ ಪದಕಿ, ಕಾಶಿಂಬಿ ನದಾಫ್, ಪ್ರತಿಭಾ ಪಾಟೀಲ್, ಅರ್ಜುನ್ ಶಿರೂರ, ತ್ರಿವೇಣಿ ಬುರ್ಲಿ, ಮಹಾದೇವಿ ತೆಲಗಿ, ಯಮನಪ್ಪ ಪವಾರ ಮತ್ತಿತರರು ಉಪಸ್ಥಿತರಿದ್ದರು.