
(ಸಂಜೆವಾಣಿ ವಾರ್ತೆ)
ವಿಜಯಪುರ:ಆ.4: ನಗರದ ಸಿಕ್ಯಾಬ್ ಎ.ಆರ್.ಎಸ್. ಇನಾಮದಾರ ಮಹಿಳಾ ಮಹಾವಿದ್ಯಾಲಯದ ಉರ್ದು ಮತ್ತು ಹಿಂದಿ ವಿಭಾಗದಿಂದ ಪ್ರೇಮಚಂದ ಜಯಂತಿಯನ್ನು ಆಚರಿಸಲಾಯಿತು.
ಈ ಸಮಾರಂಭದ ಮುಖ್ಯ ಅತಿಥಿ ಪ್ರೊ. ಹಾಮೀದ್ ಅಶ್ರಫ್ ಮಹಾರಾಷ್ಟ್ರ ಉದಯಗಿರಿ ಮಹಾವಿದ್ಯಾಲಯ ಉದಗೀರ, ಮಾತನಾಡುತ್ತ ಪ್ರೇಮಚಂದ ಒಬ್ಬ ಮಹಾನ್ ಕಾದಂಬರಿಕಾರ ಮತ್ತು ಬರಹಗಾರರಾಗಿದ್ದರು ಲೌಕಿಕ ಸಂಪತ್ತಿನ ಹಿಂದೆ ಹೋಗದೆ ಸಾಹಿತ್ಯ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು ಇವರು ಮಾನವೀತೆಯ ಪ್ರತಿಪಾದಕ, ಮಾನವೀಯ ಗುಣಗಳು ಮತ್ತು ಮೌಲ್ಯಗಳನ್ನು ಪ್ರತಿಪಾದಿಸಿದರು, ಪರಸ್ಪರ ಪ್ರೀತಿ ಪ್ರೇಮಗಳು ಸೌಹಾರ್ದತೆ ಅವರ ಕೃತಿಗಳ ಸಂದೇಶವಾಗಿದೆ. ವಿದ್ಯೆ ಮತ್ತು ಜ್ಞಾನ ಅಂತರದೃಷ್ಟಿಗಳನ್ನು ಬೆಳೆಸುತ್ತದೆ, ಸಂಪತ್ತಿನ ಹಿಂದೆ ಹೋಗದೆ ಜ್ಞಾನ ಕಡೆ ಹೋದರೆ ಸಂಪತ್ತು ತಾನಾಗಿಯೇ ಬರುತ್ತದೆ ಇಂದಿನ ಕಾಲದಲ್ಲಿ ವಿದ್ಯೆಗಳಿಸುವುದು ಹೆಚ್ಚು ಅವಶ್ಯಕವಾಗಿದೆ ಎಂದು ಕಿವಿಮಾತು ಹೇಳಿದರು.
ವಿದ್ಯಾರ್ಥಿಗಳು ಸಾಹಿತ್ಯ ಅಧ್ಯಯನ ಮಾಡಲು ಮುಂದೆ ಬರಬೇಕೆಂದು ಕರೆ ನೀಡಿದರು, ಪ್ರೇಮಚಂದ ಅವರು 15ಕ್ಕೂ ಹೆಚ್ಚು ಕಾದಂಬರಿಗಳು ಮತ್ತು 300ಕ್ಕೂ ಹೆಚ್ಚು ಸಣ್ಣಕತೆಗಳನ್ನು ಬರೆದರು, ಪತ್ರಕರ್ತ, ಸಂಪಾದಕ, ಉರ್ದು, ಹಿಂದಿ ಲೇಖಕರಾಗಿ ಕಾರ್ಯನಿರ್ವಹಿಸಿದರು ಇವರು ಎಂದು ಪ್ರಚಾರ ಬಯಸಲಿಲ್ಲ, ಕೀರ್ತಿಯ ಬೆನ್ನು ಬೀಳಲಿಲ್ಲ ಸರಳವಾದ ಜೀವನವನ್ನು ನಡೆಸಿದರು.
ಪ್ರಾಚಾರ್ಯರಾದ ಪ್ರೋ. ಎಂ.ಟಿ. ಕೋಟ್ನಿಸ್ ತಮ್ಮ ಅಧ್ಯಕ್ಷೆಯ ಭಾಷಣದಲ್ಲಿ ಪ್ರೇಮಚಂದರ ಉರ್ದು ಮತ್ತು ಹಿಂದಿ ಕಾದಂಬರಿಗಳು ಮಾನವೀಯ ಮೌಲ್ಯಗಳನ್ನು ಸಾರುತ್ತವೆಂದರು ಸಾಹಿತ್ಯದ ದೃಷ್ಟಿಯಿಂದ ಇವರಿಗೆ ನೋಬಲ್ ಪ್ರಶಸ್ತಿ ನೀಡಿ ಗೌರವಿಸಬೇಕಾಗಿತ್ತೆಂದರು.
ಕಾರ್ಯಕ್ರಮದ ಆರಂಭದಲ್ಲಿ ಕು. ಶಾಹೀನ್ ಕುರಾನ್ ಪಠಸಿದರು, ಕು. ಜೊಹರಾ ಜಾಗೀರದಾರ ಹಮ್ದ ಹಾಡಿದರು, ಕು. ಮಿನ್ಹಾಜ್ ಹಳ್ಳಿ, ಕು. ಜೈನಬ್ ನಾಗರಬಾವಡಿ, ಕು. ಸದಫನಾಜ ಮುಧೋಳ ಪ್ರೇಮಚಂದ ಕುರಿತು ಮಾತನಾಡಿದರು ಡಾ. ಎಚ್.ಕೆ. ಯಡಹಳ್ಳಿ ಅತಿಥಿಗಳನ್ನು ಸ್ವಾಗತಿಸಿದರು,
ಡಾ. ಹಾಜೀರಾ ಪರವೀನ ಅತಿಥಿಗಳನ್ನು ಪರಿಚಯಿಸಿದರು, ಡಾ. ಮೊಹ್ಮದ ಸಮೀಯುದ್ದೀನ್ ಕಾರ್ಯಕ್ರಮನ್ನು ನಿರೂಪಿಸಿದರು ಪ್ರೋ. ಹಸನ್ ಕಾದ್ರಿ ವಂದಿಸಿದರು.
ಕಾರ್ಯಕ್ರಮದಲ್ಲಿ ಉಪ ಪ್ರಚಾರ್ಯರಾದ ಶ್ರೀಮತಿ ಜೋಹರಾ ಖಾಜಿ, ಶ್ರೀಮತಿ ನಸ್ರಿನ ಸುಲ್ತಾನಾ ಮಹಾವಿದ್ಯಾಲಯದ ಪ್ರಾಧ್ಯಪಕ ವರ್ಗ ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರದ್ದರು.