ಸಾಹಿತ್ಯ ಓದುವುದರಿಂದ ಸಂಕಷ್ಟ ಹಿಮ್ಮೆಟ್ಟಿಸಬಹುದು: ರುದ್ನೂರ

?????????

ಚಿತ್ತಾಪುರ:ಜು.17: ಸಾಹಿತ್ಯ ಓದುವುದರಿಂದ ಬದುಕಿನ ಸಂಕಷ್ಟಗಳಿಗೆ ಉತ್ತರ ಕಂಡುಕೊಳ್ಳಬಹುದಾಗಿದೆ. ಕನ್ನಡ ಭಾಷೆ ಜಗತ್ತಿನಲ್ಲಿ ಅತ್ಯಂತ ಶ್ರೀಮಂತ ಭಾಷೆಯಾಗಿದ್ದು, ಅತೀ ಹೆಚ್ಚಿನ ಜ್ಞಾನ ಪೀಠಪ್ರಶಸ್ತಿಗಳು ಕನ್ನಡ ಭಾಷೆಗೆ ಒಲಿದು ಬಂದಿವೆ ಎಂದು ಚಿತ್ತಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ಧವೀರಯ್ಯ ರುದ್ನೂರ ಹೇಳಿದರು.

ಪಟ್ಟಣದ ಹೊರ ವಲಯದ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಯಲ್ಲಿ ಶುಕ್ರವಾರ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ವತಿಯಿಂದ ಏರ್ಪಡಿಸಿದ್ದ 2021-22ನೇ ಸಾಲಿನ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು. ಸಣ್ಣ ಪುಟ್ಟ ವಿಷಯಗಳಿಗೂ ಆತ್ಮಾಹತ್ಯೆ ಮಾಡಿಕೊಳ್ಳುವ ಮನಸ್ಥಿತಿ ಹೆಚ್ಚಾಗುತ್ತಿದೆ. ಸಾಹಿತ್ಯದ ಬಗ್ಗೆ ತಿಳುವಳಿಕೆ ಇರುವವರು ಎಂದಿಗೂ ಜೀವನದ ಬಗ್ಗೆ ಭರವಸೆ ಕಳೆದುಕೊಳ್ಳುವುದಿಲ್ಲ. ಕನ್ನಡ ಸಾಹಿತ್ಯ ಪರಿಷತ್ತು ಇಂತಹ ಹತ್ತಾರು ಕಾರ್ಯಕ್ರಮಗಳು ಆಯೋಜನೆ ಮಾಡುವ ಮೂಲಕ ಪ್ರೇರಣೆ ನೀಡಬೇಕು ಎಂದು ಸಲಹೆ ನೀಡಿದರು.

ಕನ್ನಡ ಸಾಹಿತ್ಯ ಪರಿಷತ್ತು ಕಲಬುರ್ಗಿ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿ, ಇಂಜಿನಿಯರ ತಪ್ಪು ಮಾಡಿದರೆ ಒಂದು ಕಟ್ಟಡ ಉರುಳುತ್ತದೆ. ನ್ಯಾಯವಾದಿ ತಪ್ಪು ಮಾಡಿದರೆ ನಿರಪರಾಧಿ ಭವಿಷ್ಯ ಕಮರುತ್ತದೆ. ವೈದ್ಯ ತಪ್ಪು ಮಾಡಿದರೆ ರೋಗಿ ಸಾಯುತ್ತಾನೆ ಆದರೆ ಶಿಕ್ಷಕ ತಪ್ಪು ಮಾಡಿದರೆ ಇಡೀ ಸಮಾಜ ಹಾಳಾಗುತ್ತದೆ ಎಂದು ಹೇಳಿದ ಅವರು, ಶಿಕ್ಷಕರು ಮತ್ತು ಪತ್ರಕರ್ತರ ಮೂಲಕ ಕನ್ನಡದ ತೇರು ಎಳೆಯುವ ಸಾಹಸ ನಾವು ಮಾಡುತ್ತಿದ್ದೇವೆ ಎಂದರು.

ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಬಸವರಾಜ ಬಳ್ಳೂಂಡಗಿ ಮಾತನಾಡಿ, ತಾಲೂಕಿನಲ್ಲಿ ಶಿಕ್ಷಣದ ಗುಣಮಟ್ಟ ಶೇ.40 ಇತ್ತು ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಅವರ ಒತ್ತಾಸೆ ಹಾಗೂ ಕ್ಷೇತ್ರಶಿಕ್ಷಣಾಧಿಕಾರಿಗಳ ಕರ್ತವ್ಯ ಪ್ರಜ್ಞೆಯಿಂದಾಗಿ ಶೇ.80ಕ್ಕೆ ಏರಿದೆ ಇದು ಗಮನಾರ್ಹ ಬದಲಾವಣೆ ಎಂದು ಹೇಳಿದರು.

ಕಸಾಪ ಕಾಶೀರಾಯ ಕಲಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಪಂ ಮಾಜಿ ಸದಸ್ಯ ಶಿವರುದ್ರಪ್ಪ ಭೀಣಿ ಸಮಾರಂಭ ಉದ್ದೇಶಿಸಿ ಮಾತನಾಡಿದರು. ಕಸಾಪ ತಾಲೂಕು ಅಧ್ಯಕ್ಷ ವೀರೇಂದ್ರಕುಮಾರ ಕೊಲ್ಲೂರ ಸಭೆ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ, ಯಶವಂತರಾಯ ಅಷ್ಟಗಿ, ಸಂಘಟನಾ ಕಾರ್ಯದರ್ಶಿ ಸಿದ್ಧಲಿಂಗ ಬಾಳಿ, ಕಸಾಪ ತಾಲೂಕು ಗೌರವ ಕಾರ್ಯದರ್ಶಿ ಮಲ್ಲಿಕಾರ್ಜುನ ಮುಡಬೂಳಕರ, ಶ್ರೀಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ ಪೇದು, ಚಿತ್ತಾಪುರ ಪುರಸಭೆ ಉಪಾಧ್ಯಕ್ಷೆ ಶೃತಿ ಪೂಜಾರಿ, ಕಸಾಪ ಸಲಹೆಗಾರ್ತಿ ಕವಿತಾ ಚವ್ಹಾಣ, ವಿಜಯಕಮಾರ ಭಂಕಲಗಿ, ಲಿಂಗಣ್ಣ, ನರಸಪ್ಪ ಚಿನ್ನಕಟ್ಟಿ, ವೀರಭದ್ರಪ್ಪ ಗುರುಮಠಕಲ, ಸಿದ್ಧಯ್ಯಶಾಸ್ತ್ರೀ ನಂದೂರಮಠ, ಹರಿಶ್ಚಂದ್ರ ಕರಣಿಕ, ಸಾಬಣ್ಣ ಬರಾಟೆ, ಚಂದ್ರಶೇಖರ ಲೇವಡಿ, ನಿಂಗಪ್ಪ ಗೋಡೆಕಾರ್, ಮಹ್ಮದ ಇಬ್ರಾಹಿಂ, ಸ್ವರ್ಣಲತಾ ರೆಡ್ಡಿ ದುಗ್ನೂರ, ನರಸಿಂಹಲು ಆಲಮೇಲಕರ್, ಮನೋಹರ ಹಡಪದ, ನಿಕಟಪೂರ್ವ ಅಧ್ಯಕ್ಷ ನಾಗಯ್ಯಸ್ವಾಮಿ ಅಲ್ಲೂರು, ಮಡಿವಾಳಪ್ಪ ಹೇರೂರು, ರಾಯಪ್ಪ ಕೊಟಗಾರ, ಇದ್ದರು. ಕಸಾಪ ಗೌರವ ಕಾರ್ಯದರ್ಶಿ ಜಗದೇವ ದಿಗ್ಗಾಂವಕರ ಸ್ವಾಗತಿಸಿದರು.

ಮಹಿಳಾ ಪ್ರತಿನಿಧಿ ಪೂಜಾ ಭಂಕಲಗಿ ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ಬಸಪ್ಪ ಎಂಬತ್ನಾಳ ವಂದಿಸಿದರು. ಸಂಸ್ಥೆಯ ಶಾಲಾ ವಿದ್ಯಾರ್ಥಿಗಳಿಂದ ಪ್ರಾರ್ಥನೆ ಗೀತೆ ಪ್ರಸ್ತುತ ಪಡಿಸಲಾಯಿತು.