ಸಾಹಿತ್ಯಾಸಕ್ತರ ಮಾದರಿ ಗ್ರಂಥಾಲಯ ‘ಸಿರಿಗನ್ನಡ ಪುಸ್ತಕ ಮಳಿಗೆ’

ಬೀದರ:ಡಿ.29: ಸಿರಿಗನ್ನಡ ಪುಸ್ತಕ ಮಳಿಗೆ ಇದೊಂದು ಬೀದರ ಸಾಹಿತ್ಯಾಸಕ್ತರ ಮಾದರಿ ಗ್ರಂಥಾಲಯವಾಗಿದೆ. ರಂಗಮಂದಿರದ ಸಮೀಪ ಇರುವುದರಿಂದ ಸಭೆ ಸಮಾರಂಭಗಳಿಗೆ ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸುವ ಸಾಹಿತಿಗಳಿಗೆ ಈ ಪುಸ್ತಕ ಮಳಿಗೆ ಸಹಕಾರಿಯಾಗಿದೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಜಂಟಿ ನಿರ್ದೇಶಕರಾದ ಬಳವಂತರಾವ ಪಾಟೀಲ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ನೆಹರೂ ಮೈದಾನದ ಹತ್ತಿರ ಇರುವ ಸಿರಿಗನ್ನಡ ಪುಸ್ತಕ ಮಳಿಗೆಗೆ ಭಾನುವಾರ ಭೇಟಿ ನೀಡಿದ ಬಳವಂತರಾವ ಪಾಟೀಲ ಅವರು ಡಾ. ಜಗನ್ನಾಥ ಹೆಬ್ಬಾಳೆಯವರು ಪುಸ್ತಕ ಮಳಿಗೆ ಸ್ಥಾಪನೆ ಮಾಡಿ ಸಾಹಿತ್ಯಾಸಕ್ತರ ಪ್ರೀತಿಗೆ ಪಾತ್ರರಾಗಿದ್ದಾರೆ ಎಂದರು.
ಮಳಿಗೆಯಲ್ಲಿ ಎಲ್ಲಾ ರೀತಿಯ ಪುಸ್ತಕಗಳನ್ನು ಸಂಗ್ರಹಿಸಿ ಪ್ರತಿದಿನ ಒಂದೊಂದು ಶಾಲಾ ಮಕ್ಕಳಿಗೆ ಮಳಿಗೆಗೆ ಭೇಟಿ ನೀಡುವಂತೆ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಇದರಿಂದ ಮಕ್ಕಳಲ್ಲಿ ಪುಸ್ತಕ ಕುರಿತು ಪ್ರೀತಿ ಅಭಿಮಾನ ಹುಟ್ಟುತ್ತದೆ. ಓದುವ ಹವ್ಯಾಸ ಬೆಳೆಯುತ್ತದೆ. ಪುಸ್ತಕ ಮಳಿಗೆಯಲ್ಲಿ ಹಿರಿಯ ಸಾಹಿತಿಗಳ ಭಾವಚಿತ್ರಗಳನ್ನು ಅಳವಡಿಸಬೇಕು. ಮಳಿಗೆಯಲಿ ಕನ್ನಡಕ್ಕೆ ಸಂಬಂಧಪಟ್ಟ ಹಾಡುಗಳನ್ನು ಸಣ್ಣ ಧ್ವನಿಯಲ್ಲಿ ನಿರಂತರವಾಗಿ ನಡೆಯುತ್ತಿರಬೇಕು ಎಂದು ಮಾರ್ಗದರ್ಶನ ಮಾಡಿದರು. ಡಾ. ಜಗನ್ನಾಥ ಹೆಬ್ಬಾಳೆಯವರು ಬೀದರ ಜಿಲ್ಲೆಯಲ್ಲಿ ಉತ್ತಮ ಸಾಂಸ್ಕøತಿಕ ವಾತಾವರಣವನ್ನು ನಿರ್ಮಾಣ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಡಾ. ಹೆಬ್ಬಾಳೆಯವರ ಕಾರ್ಯ ಅಭಿನಂದನೀಯ ಎಂದು ಬಳವಂತರಾವ ಪಾಟೀಲ ನುಡಿದರು,
ಡಾ. ಜಗನ್ನಾಥ ಹೆಬ್ಬಾಳೆ ಮಾತನಾಡಿ “ಎಲ್ಲರ ಸಹಕಾರದಿಂದ ಬೀದರ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ, ಜನಪದ ಸಾಹಿತ್ಯ ಮತ್ತು ಸಾಂಸ್ಕøತಿಕ ವಾತಾವರಣ ನಿರ್ಮಿಸಲು ಸಾಧ್ಯವಾಯಿತು. ಕರ್ನಾಟಕ ಸಾಹಿತ್ಯ ಸಂಘದಲ್ಲಿ ಉತ್ತಮ ಸಭಾಂಗಣ ನಿರ್ಮಿಸಲಾಗಿದೆ. ಈಗಾಗಲೇ ಸಾಕಷ್ಟು ಖರ್ಚಾಗಿದೆ. ಇನ್ನಷ್ಟು ಸಾಹಿತ್ಯ ಮತ್ತು ಸಂಸ್ಕøತಿ ಉಳಿಸಿ ಬೆಳೆಸಲು ಸರ್ಕಾರ ಅನುದಾನ ನೀಡಿ ಸಹಕರಿಸಿದರೆ ಜಿಲ್ಲೆಯಲ್ಲಿ ಭರ್ಜರಿ ಸಾಹಿತ್ಯದ ವಾತಾವರಣ ನಿರ್ಮಿಸಬಹುದು ಎಂದು ನುಡಿದರು. ಸಂಘದ ಕಾರ್ಯಚಟುವಟಿಕೆಗಳ ಕುರಿತು ಜಂಟಿ ನಿರ್ದೇಶಕರಿಗೆ ಸಮಗ್ರವಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಸಾಹಿತ್ಯ ಸಂಘದ ಅಧ್ಯಕ್ಷರಾದ ಡಾ. ಜಗನ್ನಾಥ ಹೆಬ್ಬಾಳೆ, ಪ್ರೊ. ಎಸ್.ಬಿ.ಬಿರಾದಾರ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ. ರಾಜಕುಮಾರ ಹೆಬ್ಬಾಳೆ, ಕಜಾಪ ಬೀದರ ತಾಲೂಕಾಧ್ಯಕ್ಷ ಎಸ್.ಬಿ.ಕುಚಬಾಳ, ಪ್ರಕಾಶ ಕನ್ನಾಳೆ, ಶಿವಶರಣಪ್ಪ ಗಣೇಶಪುರ, ಮಹಾರುದ್ರ ಡಾಕುಳಗೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.