ಸಾಹಿತ್ಯದಿಂದ ಜಯ ಸಿಕ್ಕಿದೆ

ರಾಯಚೂರು,ಜ.೨೨- ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ರಾಯಚೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ರಾಯಚೂರು ಏಮ್ಸ್ ಹೋರಾಟ ಸಮಿತಿ ರಾಯಚೂರು ಇವರ ಸಂಯುಕ್ತ ಆಶ್ರಯದಲ್ಲಿ ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸಲು ಒತ್ತಾಯಿಸಿ, ಕವಿಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿತ್ತು.
ಸಾಹಿತ್ಯದಿಂದ ಹಲವಾರು ಹೋರಾಟಗಳಿಗೆ ಜಯ ಸಿಕ್ಕ ಉದಾಹರಣೆ ಹಲವಾರು ಇವೆ, ಅಂತಹ ಸಾಹಿತ್ಯ ಬರೆಯುವ ಕವಿಗಳು ನಮ್ಮಲ್ಲಿ ಇದ್ದಾರೆ ಎಂದು ಕವಿಗೋಷ್ಠಿಯ ಉದ್ಘಾಟನೆಯನ್ನು ಮಾಡಿದ ಹಿರಿಯ ಸಾಹಿತಿ ವೀರ ಹನುಮಾನ್ ಹೇಳಿದರು.
ಕವಿಗೋಷ್ಠಿ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿಗಳಾದ ಆಂಜನೇಯ ಜಾಲಿಬೆಂಚಿಯವರು ವಹಿಸಿದ್ದರು. ಕವಿಗೋಷ್ಠಿಯಲ್ಲಿ ೨೫ಕ್ಕೂ ಹೆಚ್ಚು ಕವಿಗಳು ಭಾಗವಹಿಸಿದ್ದರು.
ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಸಾಹಿತಿಗಳಾದ ದೇವೇಂದ್ರಗೌಡ ಸಿಂಧನೂರು, ಜಾನ್ ವೇಸ್ಲಿ ಪ್ರಾಸ್ತವಿಕವಾಗಿ ಬಸವರಾಜ್ ಕಳಸ ಮಾತನಾಡಿದರು. ಸ್ವಾಗತವನ್ನು ವೆಂಕಟೇಶ್ ಜಾಲಿಬೆಂಚಿಯವರು ನೆರವೇರಿಸಿದರು, ನಿರೂಪಣೆಯನ್ನು ಬಿ ವಿಜಯ ರಾಜೇಂದ್ರ, ವಂದರ್ಪಣೆಯನ್ನು ರಾವುತರಾವ್ ಬರೂರ ಪ್ರಾರ್ಥನೆಯನ್ನು ಸುಲೋಚನಾ ಸಂಘ ನೆರವೇರಿಸಿದರು.