ಸಾಹಿತ್ಯದಲ್ಲಿ ಜಾನಪದ ಸಾಹಿತ್ಯ ಮಹತ್ವದ್ದು: ಶೇಷರಾವ ಮಾನೆ

(ಸಂಜೆವಾಣಿ ವಾರ್ತೆ)
ವಿಜಯಪುರ:ಜು.19: ಎಲ್ಲ ಸಾಹಿತ್ಯಗಳಲ್ಲಿ ಜಾನಪದ ಸಾಹಿತ್ಯ ಅತ್ಯಂತ ಮಹತ್ವದ ಸಾಹಿತ್ಯವಾಗಿದೆ ಎಂದು ಕನ್ನಡಪರ ಹೋರಾಟಗಾರ ಶೇಷರಾವ ಮಾನೆ ಅಭಿಪ್ರಾಯ ವ್ಯಕ್ತಪಡಿಸಿದರು
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು,ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಹಾಗು ನಗರ ಘಟಕ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಮದಲ್ಲಿ ದಿ: ಕುಂತಿದೇವಿ ಚಂದ್ರಪ್ಪ ಅಕ್ಕಲಕೋಟ ದತ್ತಿ ವಿಷಯ ಜಾನಪದ ಬೆಳೆದು ಬಂದ ದಾರಿ ಹಾಗು ದಿ: ಸುಗಂಧಿ ಮುರಿಗೆಪ್ಪ ದಿ : ಬಾಬುರಾವ ಹುಜರೆ ದತ್ತಿ ವಿಷಯ: ರಾಷ್ಟ್ರ ಸೇವೆ ಮಾಡಿದವರ ಸ್ಮರಣೆ
ಕುರಿತು ಮೆಟ್ರೀಕ ನಂತರದ ಅಲ್ಪಸಂಖ್ಯಾತರ ಬಾಲಕರ ವಸತಿ ನಿಲಯ ಸಕಾಫ ರೋಜಾ ವಿಜಯಪುರ ಇಲ್ಲಿ ದತ್ತಿ ನಿಧಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಮಾನೆ ಅವರು ಉದ್ಘಾಟಿಸಿ ಮಾತನಾಡಿ ಜಾನಪದ ಸಾಹಿತ್ಯ ಎಲ್ಲ ರೀತಿಯ ಗೋಷ್ಠಿಯಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ . ಜನಸಾಮಾನ್ಯರರು , ಕೃಷಿಕರು ಜಾನಪದ ಸಾಹಿತ್ಯದ ಮಾಲೀಕರು ಎಂದರು
ಡಾ: ಸೋಮಶೇಖರ ವಾಲಿ ವಿಶ್ರಾಂತ ಸಹಾಯಕ ನಿರ್ದೇಶಕರು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ವಿಜಯಪುರ ಇವರು ಜಾನಪದ ಸಾಹಿತ್ಯ ಮಹತ್ವ ಮತ್ತು ಗರತಿಯ ಹಾಡು ಕುರಿತು ಮಾತನಾಡಿ ನಮ್ಮ ಗ್ರಾಮೀಣ ಸಮಾಜ ಮಹಿಳೆಯರು ಹಾಗು ಕೃಷಿಕರು ಜಾನಪದ ಸಾಹಿತ್ಯದ ಮಹತ್ವ ಅರಿತು ಅವುಗಳನ್ನು ಮೌಖಿಕ ಪರಂಪರೆಯ ಮೂಲಕ ಜಾನಪದ ಸಾಹಿತ್ಯ ಉಳಿಸಿ ಬೆಳೆಸುವ ಕಾರ್ಯ ಮಾಡಿದರು ಸಮಾಜದ ಅಮೂಲ್ಯವಾದ ಮೌಲ್ಯ ಕಾಪಾಡಿದ ಕೀರ್ತಿ ಜಾನಪದರಿಗೆ ಸಲ್ಲುತ್ತದೆ. ಅಂಗಿಯ ಮ್ಯಾಲಂಗಿ ಚಂದೇನೋ ನನ್ನರಾಯ. ಮಾವಿನ ಹಣ್ಣು ಮನಿಯಾಗ ಇಟ್ಟುಕೊಂಡು ಬೇವಿನಕಾಯಿ ತಿನ್ನಬೇಡ. ಎಂದು ಹಾಡನ್ನು ಹಾಡುತ್ತಾ ಮಕ್ಕಳಿಗೆ ಜಾನಪದ ಸಾಹಿತ್ಯದ ಅಭಿರುಚಿ ಮೂಡಿಸಿದರು
ಕನ್ನಡ ಸಾಹಿತ್ಯ ಪರಿಷತ್ತು ಇಂಡಿ ಅಧ್ಯಕ್ಷ ರಾಘವೇಂದ್ರ ಕುಲಕರ್ಣಿ ದೇಶಕ್ಕಾಗಿ ವಿಜಯಪುರ ಜಿಲ್ಲೆಯ ಮಹನೀಯರ ಸೇವೆ ಕುರಿತು ಮಾತನಾಡಿ ಚನ್ನಬಸಪ್ಪ ಅಂಬಲಿಯವರು ಬಬಲೇಶ್ವರ ತಾಲೂಕಿನ ಅರ್ಜುನಗಿ ಗ್ರಾಮದವರು 1952 ಹಾಗು 1957 ಎರಡು ಬಾರಿ ಕಾಂಗ್ರೆಸ್ಸಿನಿಂದ ಶಾಸಕರಾದರು. ಭಾರತದ ಸ್ವಾತಂತ್ರ್ಯ ಹೋರಾಟ ಹಾಗು ಕನಾ9ಟಕ ಏಕೀಕರಣ ಸಮಿತಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ದೇಶ ಪ್ರೇಮಿಯಾಗಿದ್ದರು
ಅಖಂಡ ಜಿಲ್ಲೆಯಾಗಿದ್ದ ಸಮಯದಲ್ಲಿ ಕರ್ನಾಟಕದ ಸರದಾರ ಪಟೇಲರೆಂದು ಪ್ರಸಿದ್ಧರಾಗಿದ್ದರು. ಎಸ್ ಆರ್ ಕಂಠಿ ಮುರಿಗೆಪ್ಪ ಸುಗಂದಿ ಬಿ ಡಿ ಜತ್ತಿ ಮುಂತಾದವರು ದೇಶಕ್ಕಾಗಿ ಹೋರಾಡಿದರು ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ನ್ಯಾಯವಾದಿ ಎಂ ಎಂ ಕ್ಲಾಸ್ ಮಾತನಾಡಿದರು. ಜಿಲ್ಲಾ ದತ್ತಿ ಸಂಚಾಲಕ ರಾಜೇಸಾಬ ಶಿವನಗುತ್ತಿನ ಉಪಸ್ಥಿತರಿದ್ದರು. ನಿಲಯ ಮೇಲ್ವಿಚಾರಕ ಗವಿಸಿದ್ದಪ್ಪ ಸಜ್ಜನ ಸ್ವಾಗತಿಸಿ ನಿರೂಪಿಸಿದರು