ಸಾಹಿತ್ಯದಲ್ಲಿ ಕವನ, ಕಾವ್ಯ ಹೆಚ್ಚಿನ ಅಧ್ಯಯನ ಅವಶ್ಯ – ಛಾಯಾ

ರಾಯಚೂರು.ಮಾ.೧೪- ಇಂದಿನ ಮಕ್ಕಳಿಗೆ ಕನ್ನಡದ ಬಗ್ಗೆ ಅಭಿಯಾನ ಮೂಡಿಸುವುದು ಸವಾಲಿನ ಕೆಲಸ. ಕನ್ನಡವನ್ನು ಬೆಳೆಸಲು ಸಾಹಿತ್ಯ ಚಟುವಟಿಕೆಗೆ ಕಾರ್ಯಕ್ರಮ ಮೂಡಿಸುವುದು ಅವಶ್ಯಕವಾಗಿದೆಂದು ಕನ್ನಡ ಸಾಹಿತ್ಯ ಅಕಾಡೆಮಿಯ ಸದಸ್ಯ ಛಾಯಾ ಭಗವತಿ ಅವರು ಹೇಳಿದರು.
ಅವರಿಂದು ನಗರದ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಆಕಾಶವಾಣಿ ರಾಯಚೂರು ಎಫ್‌ಎಂ ಕೇಂದ್ರ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅವರ ಸಹಯೋಗದಲ್ಲಿ ಕಾವ್ಯಚೈತ್ರ ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಯುವ ಪೀಳಿಗೆ ಸಾಹಿತ್ಯದಲ್ಲಿ ಭಾಗವಹಿಸುವ ಮುನ್ನಾ ಅವರು ಕವನ, ಕಾವ್ಯ ಹೆಚ್ಚಿನ ಅಧ್ಯಯನ ಮಾಡಬೇಕು. ಇದಕ್ಕೆ ಪಾಲಕರು, ಶಿಕ್ಷಕರು ಪ್ರೋತ್ಸಾಹ ನೀಡಬೇಕೆಂದರು. ಮಕ್ಕಳು ದೊಡ್ಡವರ ಅನುಕರಣೆ ಮಾಡುವುದರಿಂದ ಪ್ರಾಥಮಿಕ ಹಂತದಲ್ಲಿಯೇ ಕನ್ನಡದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕೆಂದರು.
ಆಧುನಿಕ ಯುಗದಲ್ಲಿ ಮಾಧ್ಯಮಗಳು ಗಣಕಯಂತ್ರ ಸಾಧನೆಗಳಿಂದ ಕನ್ನಡ ಸಾಹಿತ್ಯ ಓದುವುದರ ಜೊತೆಗೆ ವಿಶ್ವಮಟ್ಟದಲ್ಲಿ ಬೆಳೆಸಬೇಕು. ಬರಹಗಾರನಾಗಬೇಕಾದರೇ, ಆಳವಾದ ಅಧ್ಯಯನ ಅತಿ ಮುಖ್ಯ. ಈ ನಿಟ್ಟಿನಲ್ಲಿ ಓದುವ ಹವ್ಯಾಸ ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಮಲ್ಲಿರ್ಕಾಜುನ ಸ್ವಾಮಿ ಶಿಖರಮಠ, ಡಾ.ವಿ.ಜಿ.ಭಾವಲಕ್ಕಿ, ಡಾ.ಬಿ.ಎಂ.ಶರಬೇಂದ್ರ ಸ್ವಾಮಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.