ಸಾಹಿತ್ಯಕ್ಕೆ ಹೊಸ ಭಾಷ್ಯ ಬರೆದ ಶರಣರು: ನ್ಯಾಯವಾದಿ ಖಾಡೆ

ಸಂಜೆವಾಣಿ ವಾರ್ತೆ,
ವಿಜಯಪುರ,ಏ.8: ಶರಣರ ಚಿಂತನ ಮಂಥನದಿಂದ ಮೂಡಿ ಬಂದ ಮೂರ್ತ ಸ್ವರೂಪವೇ ವಚನ ಸಾಹಿತ್ಯ. ಸರ್ವರನ್ನು ಸಮಭಾವದಿಂದ ಕಂಡ ಹನ್ನೆರಡನೇ ಶತಮಾನವೂ ಸುವರ್ಣಯುಗವಾಗಿತ್ತು, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿದ ಶರಣರು ವಚನ ಸಾಹಿತ್ಯ ರಚಿಸುವದರ ಮೂಲಕ ಕನ್ನಡ ಸಾಹಿತ್ಯಕ್ಕೆ ಹೊಸ ಭಾಷ್ಯ ಬರೆದರು ಎಂದು ಹಿರಿಯ ನ್ಯಾಯವಾದಿ ವಿ.ಎಸ್. ಖಾಡೆ ಅಭಿಪ್ರಾಯ ಪಟ್ಟರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಭಾ ಭವನದಲ್ಲಿ ಶಾಂತಾಬಾಯಿ ಎಸ್ ಗುಂಡಳ್ಳಿ ಹಾಗೂ ದಿ ಪ್ರಭಾವತಿ ಮಲ್ಲಪ್ಪ ಪಟ್ಟಣಶೆಟ್ಟಿ ಇವರ ಹೆಸರಿನ ದತ್ತಿ ನಿಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಚನಗಳು ಕನ್ನಡ ಸಾಹಿತ್ಯದ ಸುವರ್ಣ ನಿಧಿ ಬೇರ್ಪಟ್ಟಿದ್ದ ವಚನಗಳನ್ನು ಸಂಗ್ರಹಿಸಿ ಮುದ್ರಿಸಿ ಜನರಿಗೆ ಪರಿಚಯಿಸಿದ ಫ.ಗು. ಹಳಕಟ್ಟಿ ಅವರ ಕಾರ್ಯ ಅನನ್ಯವಾದದ್ದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ರಾಂತ ಉಪನಿರ್ದೇಶಕ ಎಸ್.ಐ. ಕಣಬೂರ ಮಾತನಾಡಿ, ಕಠಿಣ ಮತ್ತು ರಾಜಾಶ್ರಯದಲ್ಲಿ ಕನ್ನಡ ಸಾಹಿತ್ಯವನ್ನು ಸರಳೀಕರಣಗೊಳಿಸಿ ಜನ ಸಾಮನ್ಯರಿಗೂ ಅರ್ಥವಾಗುವಂತೆ ವಚನ ರಚಿಸಿದ ಕೀರ್ತಿ ಶರಣರದು. ಪ್ರಮಾಣ ಬದ್ಧವಾಗಿರುವ ವಚನಗಳು ವ್ಯಕ್ತಿಯ ದೋಷವನ್ನು ತಿದ್ದುವ ಮೂಲಕ ಮಾನವೀಯ ಮೌಲ್ಯಗಳನ್ನು ಮೂಡಿಸುವ ಶ್ರೇಷ್ಠ ಸಂದೇಶಗಳಾಗಿವೆ ಎಂದರು.
ಮಹಾವೈರಾಗ್ಯ ನಿಧಿ ಮುಕ್ತಾಯಕ್ಕನ ಕುರಿತು ಉಪನ್ಯಾಸ ನೀಡಿದ ಸಾಹಿತಿ ಅಂಬಿಕಾ ಕರಕಪ್ಪಗೋಳ ಅಂದು – ಇಂದು – ಮುಂದೆ ಸರ್ವಕಾಲದಲ್ಲಿ ಒಪ್ಪಿಕೊಳ್ಳುವ ಹನ್ನೆರಡನೇ ಶತಮಾನದ ವಚನಗಳು ಸಮಾನತೆ ಸಮಷ್ಟಿ ಭಾವವನ್ನು ಮೂಡಿಸಿದವು. ಜ್ಞಾನ ಮತ್ತು ಪರಮಾತ್ಮನ ಹಂಬಲಿಸಿದ ಶರಣೆ ಮುಕ್ತಾಯಕ್ಕ ಶೋಕ ಸಂದರ್ಭದಲ್ಲಿಯೂ ವಚನ ರಚನೆ ಮಾಡಿದ ಶ್ರೇಷ್ಠ ವಚನಕಾರ್ತಿ ಎಂದರು.
ಅನುಭವ ಮಂಟಪದ ಶಿವಶರಣೆಯರ ಕುರಿತು ಮಾತನಾಡಿದ ಶರಣ ಚಿಂತಕ ಮಹಮ್ಮದ್ ಗೌಸ್ ಹವಾಲ್ದಾರ್, ಕೇವಲ ಅನುಭವದ ಮೇಲೆಯೇ ಸರ್ವರನ್ನು ಪ್ರೀತಿಸುವ ಸಾಹಿತ್ಯ ವಚನ ಸಾಹಿತ್ಯ, ಕಾಯಕಕ್ಕೆ ಪ್ರಾಧಾನ್ಯತೆ ನೀಡಿದ ಶಿವಶರಣೆಯರು ಸಂಸಾರದ ಜೊತೆಗೆ ಆಧ್ಯಾತ್ಮಿಕ ಚಿಂತನೆಗಳನ್ನೊಳಗೊಂಡ ವಚನ ರಚಿಸಿ ವಿಶ್ವಕ್ಕೆ ಸಮಾನತೆಯ ಸಂದೇಶ ನೀಡಿದರು ಎಂದರು.
ಸಾನ್ನಿಧ್ಯ ವಹಿಸಿದ ಹುಣಶ್ಯಾಳ ಪಿಬಿ ಸಂಸ್ಥಾನದ ಪೂಜ್ಯ ಶ್ರೀ ಆನಂದ ದೇವರು ಮಾತನಾಡುತ್ತ, ಇಂದು ಹೆಣ್ಣುಮಕ್ಕಳು ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಹಾಗೂ ಮುಖ್ಯವಾಹಿನಿಗೆ ಬರಲು ಕಾರಣ ಶರಣ ಶರಣೆಯರು ಹೇಳುವದರ ಮೂಲಕ ಆಶೀರ್ವಚನ ನೀಡಿದರು.
ವೇದಿಕೆ ಮೇಲೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಸಿಂಪೀರ ವಾಲೀಕಾರ ರಾಜೇಸಾಬ ಶಿವನಗುತ್ತಿ, ಅಭಿμÉೀಕ ಚಕ್ರವರ್ತಿ, ಶಿವಾನಂದ ಡೋಣೂರ ಆಸೀನರಾಗಿದ್ದರು.
ಮೊದಲಿಗೆ ಸುನಂದ ಕೋರಿ ಪ್ರಾರ್ಥನೆ ಮಾಡಿದರು. ಡಾ ಸಂಗಮೇಶ ಮೇತ್ರಿ ಸ್ವಾಗತಿಸಿ ಪರಿಚಯಿಸಿದರು, ಶೋಭಾ ಬಡಿಗೇರ ಪ್ರಾಸ್ತಾವಿಕ ಮಾತನಾಡಿದರು. ಪೆÇ್ರ ಸುಭಾಸಚಂದ್ರ ಕನ್ನೂರ ಕಾರ್ಯಕ್ರಮ ನಿರೂಪಿಸಿದರು. ಇಂದಿರಾ ಬಿದರಿ ವಂದಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾವತಿ ಅಂಕಲಗಿ, ಅರ್ಜುನ ಶಿರೂರ, ಸಿದ್ದಾರಾಮ ಬಿರಾದಾರ, ಲಕ್ಷ್ಮಿ ಕಾತರಾಳ, ಅಲ್ಲಿಸಾಬ ಖಡಕೆ, ಗಂಗಮ್ಮ ರಡ್ಡಿ, ಅನಿತಾ ಕಾಂಬಳೆ, ಜಿ ಎಸ್ ಬಳೂರ, ಅಶೋಕ ಪೂಜಾರಿ, ವಿಜಯಲಕ್ಷ್ಮಿ ಎಚ್, ಹನಮಂತಪ್ಪ ತೊದಲಬಾಗಿ, ಸಿದ್ದರಾಮಪ್ಪ ಜಂಗಮಶೆಟ್ಟಿ, ಎನ್.P.É ಕುಲಕರ್ಣಿ, ಶಿವಲೀಲಾ ಕೊರವಾರ ಮುಂತಾದವರು ಉಪಸ್ಥಿತರಿದ್ದರು.