
ಬೀದರ್: ಎ.8:ಎಲ್ಲರನ್ನು ಒಗ್ಗೂಡಿಸುವ ಶಕ್ತಿ ಸಾಹಿತ್ಯಕ್ಕೆ ಇದೆ. ಸಾಹಿತ್ಯ ಓದುವವರಿಗೆ ಒಳಿತು ಆಗುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸಲೀಂ ಪಾಶಾ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ವತಿಯಿಂದ ಲೇಖಕಿ ಕಸ್ತೂರಿ ಶಿವಪುತ್ರ ಪಟಪಳ್ಳಿ ಅವರ 25ನೇ ವಿವಾಹ ವಾರ್ಷಿಕೋತ್ಸವ ಅಂಗವಾಗಿ ನಗರದ ಹಾರೂರಗೇರಿ ಕಮಾನ್ ಹತ್ತಿರದ ಜೈ ಭವಾನಿ ಫಂಕ್ಷನ್ ಹಾ???ನಲ್ಲಿ ಆಯೋಜಿಸಿದ್ದ ಕಸ್ತೂರಿ ಪಟಪಳ್ಳಿ ರಚಿತ ತ್ಯಾಗಮಯಿ ಕೃತಿ ಲೋಕಾರ್ಪಣೆ, ದಾಂಪತ್ಯ ಕವಿಗೋಷ್ಠಿ ಹಾಗೂ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಟಿವಿ, ಮೊಬೈಲ್ ಪ್ರಭಾವದ ಮಧ್ಯೆ ಕನ್ನಡ ಪರಂಪರೆ ಹಾಗೂ ಹಿರಿಮೆಯನ್ನು ಉಳಿಸಬೇಕಿದೆ ಎಂದರು.
ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ಮಾತನಾಡಿ, ಜನ್ಮದಿನ, ಮದುವೆ ವಾರ್ಷಿಕೋತ್ಸವ ಸಮಾರಂಭಗಳು ಸಮಾಜಮುಖಿಯಾಗಬೇಕು ಎಂದು ಸಲಹೆ ಮಾಡಿದರು.
ವೈಯಕ್ತಿಕ ಸ್ವಾರ್ಥಕ್ಕಾಗಿ ಸಮಾಜದ ಸ್ವಾಸ್ಥ್ಯ ಹಾಳು ಮಾಡಬಾರದು. ಸಣ್ಣ ಪುಟ್ಟ ಕೆಡಕುಗಳನ್ನು ನಿವಾರಿಸುವ ಮೂಲಕ ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಹೇಳಿದರು.
ಸಾನಿಧ್ಯ ವಹಿಸಿದ್ದ ಬೆಳ್ಳೂರಿನ ಸಚ್ಚಿದಾನಂದ ಮಠದ ಅಮೃತಾನಂದಮಯಿ ಮಾತನಾಡಿ, ಕಸ್ತೂರಿ ಪಟಪಳ್ಳಿ ಅವರು ಕುಟುಂಬ, ಶಾಲೆ, ಸಮಾಜ ಸೇವೆಯನ್ನು ಸಮರ್ಪಕವಾಗಿ ನಿಭಾಯಿಸಿದ್ದಾರೆ. ಅದಕ್ಕೆ ಶಿವಪುತ್ರ ಪಟಪಳ್ಳಿ ನೀಡಿದ ಸಹಕಾರ ಸ್ಮರಣೀಯ ಎಂದರು.
ಕರ್ನಾಟಕ ಲೇಖಕಿಯರ ಸಂಘದ ಕೊಪ್ಪಳ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಾವಿತ್ರಿ ಮುಜುಮದಾರ್ ಮಾತನಾಡಿ, ಲೇಖಕಿ ಕಸ್ತೂರಿ ಅವರು ತ್ಯಾಗಮಯಿ ಕೃತಿಯಲ್ಲಿ ಮಹಿಳಾ ನೋವು, ಆತಂಕ ಮೊದಲಾದ ಸಂಗತಿಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ. ಕೃತಿ ಸುತ್ತಮುತ್ತಲಿನ ಬದುಕನ್ನು ಅರ್ಥಪೂರ್ಣವಾಗಿ ಕಟ್ಟಿಕೊಟ್ಟಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ
ಗೌರವ ಕಾರ್ಯದರ್ಶಿ ಟಿ.ಎಂ. ಮಚ್ಚೆ ಆಶಯ ನುಡಿ ಆಡಿದರು. ಕಸ್ತೂರಿ ಶಿವಪುತ್ರ ಪಟಪಳ್ಳಿ ದಂಪತಿಯನ್ನು ಅಭಿನಂದಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪರಿಷತ್ ಜಿಲ್ಲಾ ಘಟಕದ ನಿಕಟಪೂರ್ವ ಅಧ್ಯಕ್ಷ ಪೆÇ್ರ. ಸಿದ್ರಾಮಪ್ಪ ಮಾಸಿಮಾಡೆ, ನಿವೃತ್ತ ಸಾ ಶಿ ಇಲಾಖೆಯ ನಿರ್ದೇಶಕರಾದ ಡಾ ಚಂದ್ರೆಗೌಡ ಹಾಗೂ ಶಿವಕುಮಾರ ಸ್ವಾಮಿ,ಸಮಾರಂಭದಲ್ಲಿ ಪ್ರಮುಖರಾದ ಇನಾಯತ್ ಅಲಿ ಶಿಂಧೆ, ಶಾಂತಕುಮಾರ ಚಂದಾ, ದೇವೇಂದ್ರ ಕರಂಜೆ, ಸಿದ್ದಾರೆಡ್ಡಿ ನಾಗೋರಾ, ಉಪಸ್ಥಿತರಿದ್ದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಕೋಶಾಧ್ಯಕ್ಷ ಶಿವಶಂಕರ ಟೋಕರೆ ಸ್ವಾಗತಿಸಿದರು. ಜಗನ್ನಾಥ ಕಮಲಾಪುರೆ ನಿರೂಪಿಸಿದರು.
ಗೌರವ ಕಾರ್ಯದರ್ಶಿ ಶಿವಕುಮಾರ ಕಟ್ಟೆ ವಂದಿಸಿದರು.