ಸಾಹಿತಿ- ಸಾಹಿತ್ಯ ವ್ಯಕ್ತಿತ್ವ  ಬದಲಾಯಿಸುವಂತಾಗಬೇಕು

ಸಂಜೆವಾಣಿ ವಾರ್ತೆ

ದಾವಣಗೆರೆ.ಆ.೨೦: ಕವಿ, ಸಾಹಿತಿ, ರಾಜಕಾರಣಿ ಸದಾ ಎಲ್ಲರ ತಲುಪವಂತಿರಬೇಕು. ದ್ವೀಪಗಳಂತಾಗಿರುವ ಕಾರಣಕ್ಕೆ ಸಂಬಂಧ ದೂರವಾಗಿ ಅಂತರ್ಮುಖಿ ಆಗುತ್ತಿದ್ದೇವೆ ಎಂದುಸಾಹಿತಿ ಡಾ. ಲೋಕೇಶ್ ಅಗಸನಕಟ್ಟೆ ಎಂದು ತಿಳಿಸಿದರು. ನೀವು-ನಾವು ಸಾಂಸ್ಕೃತಿಕ ವೇದಿಕೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಂಯುಕ್ತಾಶ್ರಯದಲ್ಲಿ ವೆಂಕಟ್ರಮಣ ಬೆಳಗೆರೆಯವರ ಧರಣಿ ಮಂಡಲ ಕವನ ಸಂಕಲನ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದರು.ಸಾಹಿತಿಗಳು ಒಳಗೊಂಡಂತೆ ಎಲ್ಲರಿಗೂ ಚಲನಶೀಲತೆ ಬೇಕು. ಇಲ್ಲದೇ ಹೋದಲ್ಲಿ ಸತ್ತಂತೆ. ಅನೇಕ ಕಾರಣಗಳಿಂದ ಸಹಜ ಶೀಲತೆಯಿಂದ ಕೃತಿಮತೆಯೆಡೆಗೆ ಸಾಗುತ್ತಿದ್ದೇವೆ. ಮಾನವೀಯತೆಯೇ ಕಾಣೆಯಾಗಿ ಪ್ರಯತ್ನ ಪೂರ್ವಕವಾಗಿ ಅಂತರ ಕಾಪಾಡಿಕೊಳ್ಳುತ್ತಿದ್ದೇವೆ. ಭಾರತೀಯರಿಂದ ಕಲಿಯಬೇಕು ಎಂದು ಹೇಳಲಾಗುತ್ತದೆ. ಆದರೆ, ಈಗಿನ ವಾತಾವರಣ ನೋಡಿದರೆ ಏನು ಕಲಿಯಬೇಕು ಎಂದು ಪ್ರಶ್ನಿಸಿದರು.ಸಾಹಿತಿ ಮತ್ತು ಸಾಹಿತ್ಯ ನಮ್ಮ ವ್ಯಕ್ತಿತ್ವ ವನ್ನು ಬದಲಾಯಿಸುವಂತಾಗಬೇಕು. ಮಾನವೀಯತೆಯ ಮತ್ತೆ ಜಾಗೃತ ಮೂಡಿ ಸುವಂತಾಗಬೇಕು. ಸಾಹಿತ್ಯ ಓದಿದಾಗ ಕೆಲವು ಗಂಟೆಗಳಿಗಾದರೂ ಹೊಸತನದ ಅನುಭವ ತಂದುಕೊಡುವಂತಾಗಬೇಕು. ಆಗ ಆದಕ್ಕೆ ಶಕ್ತಿ ಇದೆ ಎಂಬುದು ವ್ಯಕ್ತವಾಗುತ್ತದೆ. ಕೃತಿ ಅಮೂಲ್ಯ ಆಗಿರಬೇಕು ಎಂದೇನಿಲ್ಲ. ಕೆಲವು ಸಾಲುಗಳಾದರೂ ಸ್ಫೂರ್ತಿ, ಚೈತನ್ಯ ನೀಡುವಂತಿರಬೇಕು ಎಂದು ಆಶಿಸಿದರು.ಒಂದು ಕವಿತೆ, ಕವಿ, ಲೇಖಕ ಉಳಿಯ ಬೇಕಾದರೆ ಒಂದು ಕೃತಿ ಸಾಕು. ಕುವೆಂಪು ಅವರು ಬರೆದಿರುವ ಎಲ್ಲ ಕವನಗಳು ನೆನಪಿನಲ್ಲಿ ಉಳಿಯುವಂತಿಲ್ಲ. ಕೆಲವು ಉಳಿಯುವಂತಿವೆ. ದ.ರಾ. ಬೇಂದ್ರೆಯ ವರದ್ದು ಹೆಚ್ಚಿಸಬಹುದು. ಎಲ್ಲ ಸಾಲುಗಳು ಶ್ರೇಷ್ಠವಾಗಿರಲು ಆಗುವುದಿಲ್ಲ ಎಂದು ತಿಳಿಸಿದರು.ನವ್ಯ ಸಾಹಿತ್ಯದ ಕಾಲದವರಿಗೆ ಒಂದು ಬದ್ಧತೆ, ದೃಷ್ಟಿಕೋನ ಇರುತ್ತದೆ. ಗೊತ್ತೋ ಗೊತ್ತಿಲ್ಲದೆಯೋ ಒಂದು ಬದ್ಧತೆ, ಸಿದ್ಧಾಂತ ಕ್ಕೆ ನಿಷ್ಟರಾಗಿರುತ್ತಾರೆ. ಕೃತಿಯಲ್ಲಿ ಆಕೃತಿ ಅಂದರೆ ಆಲೋಚನೆ, ದೃಷ್ಟಿಕೋನ,‌ ಶಬ್ದ ಗುಣ, ನಾದಮಯತೆ ಇರಬೇಕು. ಮಾನವೀಯತೆಯ ಅಂತಃಕರಣದ ಸ್ಪರ್ಶ, ಕಳಕಳಿ ಇರಬೇಕು. ವೆಂಕಟ್ರಮಣ ಬೆಳಗೆರೆ ಕವನ ಸಂಕಲನಗಳಲ್ಲಿ ಎಲ್ಲದರ ಮುಕ್ಕತೆ ಇದೆ ಎಂದು ತಿಳಿಸಿದರು.ಕವಿತೆಗಳು ನೇರವಾಗಿ ಗದ್ಯದ ಮೂಲಕ ಹೋಗುತ್ತಿರುವಾಗ ಗುರಿ ತಲುಪುತ್ತಿವೆ. ಆದರೆ, ನೈಜ ಗುರಿ ತಲುಪುತ್ತವೆ ಎಂದು ಹೇಳುವಂತಿಲ್ಲ ಎಂದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ. ವಾಮದೇವಪ್ಪ, ಸಾಹಿತಿ ವೆಂಕಟ್ರಮಣ ಬೆಳಗೆರೆ, ಮೋಹನ್ ಕುಮಾರ್, ಸಂತೆಬೆನ್ನೂರು ಫೈಜಟ್ರಾಜ್, ಅರುಣಾ ಕುಮಾರಿ ಬಿರಾದಾರ್ ಇತರರು ಇದ್ದರು.ನೀವು ನಾವು ಸಾಂಸ್ಕೃತಿಕ ವೇದಿಕೆಯ ಎಸ್.ಎಸ್. ಸಿದ್ದರಾಜು ಸ್ವಾಗತಿಸಿದರು.