ಸಾಹಿತಿ ಶೇಷರಾವ ಮಾನೆ ಅವರಿಗೆ ರಾಜ್ಯ ಪ್ರಶಸ್ತಿ

ವಿಜಯಪುರ, ಮಾ.30-ಕರ್ನಾಟಕ ಸ್ವಯಂ ಪಾರ್ಟಿ ಸಂಘಟನೆ ವತಿಯಿಂದ ನಗರದ ಮಂಗಳೂರು ಹೊಟೇಲ್ ಸಭಾಭವನದಲ್ಲಿ ಜರುಗಿದ ಸಂಘಟನಾ ಉದ್ಘಾಟನಾ ಸಮಾರಂಭದ ಪ್ರಯುಕ್ತವಾಗಿ ವಿಜಯಪುರ ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಶೇಷರಾವ ಮಾನೆ ಅವರಿಗೆ ಕರ್ನಾಟಕ ಕೃಷಿ ಸಾಹಿತ್ಯ ರತ್ನ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮಂಗಳೂರು ಹೊಟೇಲ್ ಉದ್ಯಮಿ ಅಬ್ದುಲ ಹಮೀದ ಘನ ಅಧ್ಯಕ್ಷತೆಯನ್ನು ವಹಿಸಿದ್ದರು. ಉದ್ಘಾಟಕರಾಗಿ ರಾಜ್ಯಾಧ್ಯಕ್ಷ ಮಂಜುನಾಥ ಎನ್. ಜಿಲ್ಲಾ ಸಂಚಾಲಕ ಕೃಷ್ಣಾಜಿ ಕುಲಕರ್ಣಿ, ವಸಂತರಾವ ಕುಲಕರ್ಣಿ, ಬಾಬು ಲಮಾಣಿ, ಎಂ.ಎಂ. ಖಲಾಸಿ, ಬೆಳಗಾವಿ ವಿಭಾಗದ ಜಿಲ್ಲಾ ಪದಾಧಿಕಾರಿಗಳು ಮುಂತಾದವರು ಉಪಸ್ಥಿತರಿದ್ದರು.