ಸಾಹಿತಿ ವೆಂಕಮ್ಮಗೆ ಅಂಬೇಡ್ಕರ್ ಸಂಘದಿಂದ ಗೌರವ ಸನ್ಮಾನ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.14: ನಗರದದಲ್ಲಿನ ಬಳ್ಳಾರಿ ಜಿಲ್ಲಾ ಡಾ.ಬಿ.ಆರ್. ಅಂಬೇಡ್ಕರ್ ಸಂಘದ ಕಚೇರಿಯಲ್ಲಿ ಇಂದು ಅಂಬೇಡ್ಕರ್ ಅವರ 132 ನೇ ಜಯಂತಿಯನ್ನು ಸಂಘದ ಅಧ್ಯಕ್ಷ ಬಿ.ಕೆ.ಅನಿಲ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಆಚರಿಸಲಾಯ್ತು.
ಅಂಬೇಡ್ಕರ್ ಮತ್ತು ಜಗಜೀವನ್ ರಾಂ ಅವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯ್ತು.
ಈ ಸಂದರ್ಭದಲ್ಲಿ ಸಾಹಿತಿ, ಪ್ರಸಕ್ತ ಸಾಲಿನ  ಡಾ. ಬಾಬು ಜಗಜೀವನ ರಾಮ್ ರಾಜ್ಯ ಪ್ರಶಸ್ತಿ ಪುರಷ್ಕೃತರಾದ ಎನ್.ಡಿ.ವೆಂಕಮ್ಮ ಅವರನ್ನು ಸಂಘದಿಂದ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯ್ತು.
ಸಂಘದ ಅಧ್ಯಕ್ಷ ಅನಂತಕುಮಾರ್, ಮುಖಂಡರುಗಳಾದ ಈ.ರಾಮಪ್ಪ, ಕೆ.ಗಿರಿಮಲ್ಲಪ್ಪ, ಕೆ.ವೀರಬಸಪ್ಪ, ಎಸ್.ಕಲ್ಲಪ್ಪ, ಎಲ್.ಮಾರೆಣ್ಣ, ಮುಕ್ಕಣ್ಣ, ನೀಲಕಂಠ, ಮಲ್ಲಿನಾಥ, ಭೀಮದಾಸ್, ಮೇಘನಾಥ್, ಶಿವಕುಮಾರ್, ಕೆ.ವೆಂಕಟೇಶ್, ಪಿ.ಅಂಬಿಕ, ಕೆ.ವೈ.ಶಶಿಕುಮಾರ್, ಕೆ.ಎಂ.ಶಿವಕುಮಾರ್, ಮನೋಹರ್, ಮೊದಲಾದವರು ಈ ಸಂದರ್ಭದಲ್ಲಿ ಇದ್ದರು.