ಸಾಹಿತಿ ಬಿಎಮ್ ಅಮರವಾಡಿಗೆ ತಹಶೀಲ್ದಾರ ಚಿದ್ರೆ ಸನ್ಮಾನ

ಸಂಜೆವಾಣಿ ವಾರ್ತೆ
ಔರಾದ: ಜಿಲ್ಲಾ ಪ್ರಥಮ ದಾಸ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಕ್ರೀಯಾಶೀಲ ಶಿಕ್ಷಕ ಬಿಎಮ್ ಅಮರವಾಡಿ ಅವರಿಗೆ ತಹಶೀಲ್ದಾರ ಮಲ್ಲಶೆಟ್ಟಿ ಚಿದ್ರೆ ಸನ್ಮಾನಿಸಿದರು.
ಬುಧವಾರ ತಾಲೂಕಿನ ಎಕಲಾರ ಶಾಲೆಗೆ ಆಗಮಿಸಿ ಶಿಕ್ಷಕ ಅಮರವಾಡಿ ಅವರಿಗೆ ಸನ್ಮಾನಿಸಿ ಮಾತನಾಡಿದ ಅವರು ಗಡಿ ತಾಲೂಕಿನಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರ ಜೋತೆಗೆ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸೇವೆಯನ್ನು ನೀಡಿದ ಅಮರವಾಡಿ ಕೆಲಸಕ್ಕೆ ಜಿಲ್ಲಾ ಕಸಾಪ ಗೌರವಿಸಿ ದಾಸ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಮಾಡಿರುವುದು ಸಂತಸದ ವಿಷಯವಾಗಿದೆ ಎಂದರು.
ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವ ದಿನಮಾನಗಳಲ್ಲಿ ಎಕಲಾರ ಗ್ರಾಮದಲ್ಲಿನ ಸರ್ಕಾರಿ ಶಾಲೆಯನ್ನು ಕಂಗೋಳಿಸುವಂತೆ ಮಾಡುವುದರ ಜೋತೆಗೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಜಿಲ್ಲೆ ತಾಲೂಕು ಹಾಗೂ ವಿಭಾಗ ಮಟ್ಟದ ಇಲಾಖೆಯ ಅಧಿಕಾರಿಗಳು ಶಾಲೆಗೆ ಬರುವಂತೆ ಮಾಡಿರುವ ಶಿಕ್ಷಕ ಬಿಎಮ್ ಅಮರವಾಡಿ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಮುಖಂಡ ಚಂದ್ರಶೇಖರ ಪಾಟೀಲ ಮಾತನಾಡಿ, ಒಬ್ಬ ಶಿಕ್ಷಕರು ಮನಸ್ಸು ಮಾಡಿದರೆ ಶಾಲೆ ಗ್ರಾಮವನ್ನು ಸುಧಾರಣೆ ಮಾಡುತ್ತಾರೆ ಎನ್ನುವುದು ಕೇಳಿದ್ದೆವೆ ಪತ್ರಿಕೆ ಟಿವಿಗಳಲ್ಲಿ ವರದಿಗಳನ್ನು ನೋಡಿದ್ದೇ, ಆದರೆ ಶಿಕ್ಷಕ ಅಮರವಾಡಿ ಈ ಹಿಂದೆ ತಾಲೂಕಿನ ಕರಂಜಿ ಶಾಲೆಯಲ್ಲಿ ಸೇವೆ ಸಲ್ಲಿಸಿದಾಗ ಅಲ್ಲಿನ ಮಕ್ಕಳಿಗೆ ಉತ್ತಮ ಶಿಕ್ಷಣದ ಜೋತೆಗೆ ಮಾನವೀಯ ಮೌಲ್ಯಗಳನ್ನು ಉಣ ಬಡಿಸಿದರು. ಎಕಲಾರ ಶಾಲೆಗೆ ಬಂದಾಗಿನಿಂದಲು ಶಾಲೆಯಲ್ಲಿನ ಮಕ್ಕಳನ್ನು ತನ್ನ ಮಕ್ಕಳಂತೆ ತಿಳಿದು ಎಲ್ಲರದ ಸಮಸ್ಯೆಗಳನ್ನು ಬಗೆ ಹರಿಸುವುದರ ಜೋತೆಗೆ ಒಳ್ಳೆಯ ಕಾರ್ಯ ಅಮರವಾಡಿಯಿಂದ ನಡೆಯುತ್ತಿರುವುದು ಸಂತಸದ ವಿಷಯವಾಗಿದೆ ಎಂದರು. ಇಂತಹ ಒಳ್ಳೆಯ ಶಿಕ್ಷಕರನ್ನು ಪಡೆದುಕೊಂಡ ಗ್ರಾಮಸ್ಥರು ಹಾಗೂ ಇಲ್ಲಿನ ಮಕ್ಕಳು ನಿಜಕ್ಕೂ ಪುಣ್ಯವಂತರಾಗಿದ್ದಾರೆ, ಶಿಕ್ಷಕ ಅಮರವಾಡಿ ಅವರ ನಿಸ್ವಾರ್ಥ ಸೇವೆ ನಿತ್ಯ ನಿರಂತರವಾಗಿ ಹೀಗೆ ಸಾಗಲೆಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಪ್ರಭುರಾವ ಬಾಳೂರೆ, ವೀರಶೆಟ್ಟಿ ಗಾದಗೆ, ಅಂಕುಶ ಪಾಟೀಲ್, ಸಿದ್ದೇಶ್ವರಿ ಸ್ವಾಮಿ, ರೂಪಾ ಸೇರಿದಂತೆ ಶಾಲೆಯ ಶಿಕ್ಷಕರು ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.