ಸಾಹಿತಿ ಡಾ.ಗವಿಸಿದ್ಧಪ್ಪರಿಗೆ ಸುವರ್ಣ ಗೌರವ ಪ್ರಶಸ್ತಿ

ಕಲಬುರಗಿ:ಫೆ.2: ಸಾಹಿತಿ,ಚಿಂತಕ,ಸಂಘಟಕ ಡಾ.ಗವಿಸಿದ್ಧಪ್ಪ ಪಾಟೀಲ ಅವರ ಜೀವನ ಸಾಧನೆ, ಸಾಹಿತ್ಯ ಸೇವೆ ಅಮೋಘ.ಅವರ ಐವತ್ತರ ಸುವರ್ಣ ಸಂಭ್ರಮದಲ್ಲಿ ಸುವರ್ಣ ಕರ್ನಾಟಕ ಗೌರವ ಪ್ರಶಸ್ತಿ ನೀಡುತ್ತಿರುವುದು ಸಂತಸ ತಂದಿದೆ ಎಂದು ಪ್ರತಿಷ್ಠಾನದ ಕಾರ್ಯದರ್ಶಿ ಡಾ.ಚಿ.ಸಿ.ನಿಂಗಣ್ಣ ಅಭಿಪ್ರಾಯಪಟ್ಟರು. ಅವರು ಪ್ರಶಸ್ತಿ ಪ್ರದಾನ ಸಂದರ್ಭದಲ್ಲಿ ಮಾತನಾಡಿದರು. ಪ್ರತಿಷ್ಠಾನದ ಗೌರವಾಧ್ಯಕ್ಷ ಪ.ಮನುಸಗರ ಸೂಗಯ್ಯನವರ ಆತ್ಮೀಯರಾದ ಪಾಟೀಲರು ಸದಾ ಅವರ ಚಿಂತನೆಯಲ್ಲಿ ಇದ್ದಾರು.ಸೂಗಯ್ಯ ಕುರಿತು ಮೂರು ಮೌಲಿಕ ಪುಸ್ತಕ ಪ್ರಕಟಿಸಿ ದಾಖಲಿಸಿದ್ದಾರೆಂದರು. ಗ್ರಂಥಪಾಲಕ ಡಾ.ವಿಜಯಕುಮಾರ ಗೋಪಾಲೆ,ಡಾ.ಪೀರಪ್ಪ ಸಜ್ಜನ,ಡಾರಾಜಕುಮಾರ ಮಾಳಗೆ,ವೆಂಕಟೇಶ ನೀರಡಗಿ,ಚಿದಾನಂದ ಹಿರೇಮಠರು,ಗೌತಮ ಸಕ್ಕರಗಿ ಇತರರು ಇದ್ದರು.