ಸಾಹಿತಿ ಕುಂವೀಗೆ ಗನ್ ಮ್ಯಾನ್


ಸಂಜೆವಾಣಿ ವಾರ್ತೆ
ಕೊಟ್ಟೂರು, ಜೂ.15: ಪಟ್ಟಣದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕುಂ. ವೀರಭದ್ರಪ್ಪ ಅವರಿಗೆ ಕಾಂಗ್ರೆಸ್ ಸರ್ಕಾರ ಗನ್ ಮ್ಯಾನ್  ನಿಯೋಜಿಸಿದೆ.
ಕಳೆದ ಎರಡು ವರ್ಷಗಳಿಂದ ಆಗಂತುಕನ್ನೊಬ್ಬ ಎರಡು, ಮೂರು ತಿಂಗಳಿಗೊಮ್ಮೆ ಅವಾಚ್ಯ ಶಬ್ದಗಳಿಂದ ನಿಂಧಿಸಿ. ಹಿಂದುದ್ರೋಹಿ ಎಂದು ಕೊಲೆ ಬೆದರಿಕೆ ಪತ್ರಗಳನ್ನು ಬರೆಯುತ್ತಿದ್ದ.
ಇದು ರಾಜ್ಯ ಸಾಹಿತ್ಯ ವಲಯದಲ್ಲಿ ಸಂಚಲನ ಮೂಡಿಸಿತ್ತು. ಇದೇ ಮಾದರಿಯಲ್ಲಿ ನಾಡಿನ 61 ಜನರಿಗೂ ಪತ್ರಗಳು ರವಾನೆಯಾಗಿದ್ದವು.
ಕುಂ. ವೀರಭದ್ರಪ್ಪ. ವಿಜಯನಗರ ಎಸ್ಪಿ‌ ಕಂಡು ದೂರನ್ನು ದಾಖಲಿಸಿದ್ದರಾದರೂ ಪೊಲೀಸರು ಪತ್ರ ಬರೆಯುವ ಆಗಂತುಕನನ್ನು ಪತ್ತೆ ಮಾಡಲು ವಿಫಲವಾಗಿದ್ದಕ್ಕೆ ಸಾಹಿತ್ಯಾಭಿಮಾನಿಗಳಿಂದ ವಿರೋಧ ವ್ಯಕ್ತವಾಗಿತ್ತು.
ಅಂದಿನ ಬಿಜೆಪಿ ಸರ್ಕಾರ ನಾಡಿನ ಹಲವಾರು ಸಾಹಿತಿಗಳಿಗೆ ಸಮಾಜ ಸುಧಾಕರರಿಗೆ ಕೊಲೆ ಬೆದರಿಕೆ ಪತ್ರಗಳು ಬಂದಾಗ್ಯೂ ಗಂಭೀರವಾಗಿ ತೆಗೆದುಕೊಳ್ಳಲೆ ಇಲ್ಲ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ತಿಂಗಳಾಗುವ ಮೊದಲೆ ಹೀಗೆ ಪತ್ರಬರೆಯುತ್ತಿದ್ದ ಆಗಂತಕನ್ನೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದೆ.
ಇದರ ನಡುವೆ ಪೊಲೀಸ್ ಇಲಾಖೆ ಸೋಮವಾರದಿಂದ ಶಶಾಸ್ತ್ರ ಮೀಸಲು ಪಡೆಯ ಪ್ರವೀಣ್ ಕುಮಾರ್ ಎಂಬ ಪೊಲೀಸನನ್ನು ಕುಂ. ವೀ. ಬೆಂಗಾವಲಿಗೆ ಗನ್ ಮ್ಯಾನ್ ನೇಮಿಸಿದೆ.
.‌
ಇಂದಿನ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ನನಗೆ ಪತ್ರ ಬರೆಯುತ್ತಿದ್ದ ಎಂಬ ಸಂಶಯದ ಮೇಲೆ ವ್ಯಕ್ತಿಯೊಬ್ಬನನ್ನು ಪೊಲೀಸರು ವಶಪಡಿಸಿಕೊಂಡು ವಿಚಾರಣೆ ಮಾಡುತ್ತಿದೆ.
ನಾನು ಸ್ವತಂತ್ರವಾಗಿ ಇರಬಯಸುವವನು. ಬೆಳಗ್ಗೆ ವಾಕಿಂಗ್ ಹೋಗುವಾಗ ಗನ್ ಮ್ಯಾನ್ ನನ್ನೊಂದಿಗೆ ಇರುವುದನ್ನು ನೋಡಿದ ಜನ ವಕ್ರವಾಗಿಯೂ ಮತ್ತು ವಿಚಿತ್ರವಾಗಿ ನೋಡುವುದನ್ನು ನೋಡಿದರೆ ಮುಜುಗರವಾಗುತ್ತದೆ.
ಆದರೂ ಕಾಂಗ್ರೆಸ್ ಸರ್ಕಾರ ಸಾಹಿತಿಗಳ ಭದ್ರತೆಗೆ. ಕಾಳಜಿವಹಿಸಿದೆ. ಇದು ಬಿಜೆಪಿ ಸರ್ಕಾರಕ್ಕೆ ಇರಲಿಲ್ಲ
ಕುಂ. ವೀರಭದ್ರಪ್ಪ. ಸಾಹಿತಿ ಕೊಟ್ಟೂರು