ಸಾಹಿತಿ ಕಾ.ಹು ಬಿಜಾಪುರ ಅವರಿಗೆ ನುಡಿನಮನ

ವಿಜಯಪುರ, ಸೆ.11-ಹಿರಿಯ ಸಾಹಿತಿ, ನಾಟಕಕಾರ, ಕೃಷಿಕ, ಸರಳ ಸಜ್ಜನಿಕೆಯ ಸಾಕಾರಮೂರ್ತಿ ಜಾನಪದ ಗಾರುಡಿಗ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಕಾ.ಹು ಬಿಜಾಪುರ ಅವರ ಜೀವನ ಇತರರಿಗೆ ಮಾದರಿ ಎಂದು ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷ ಜಂಬುನಾಥ ಕಂಚಾಣಿ ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಭಾ ಭವನದಲ್ಲಿ ಕಾಹು ಬಿಜಾಪುರ ಅವರಿಗೆ ನುಡಿನಮನ ಸಲ್ಲಿಸಿ ಮಾತನಾಡುತ್ತಾ ಬೆವರಿನ ಸಂಸ್ಕøತಿಯಿಂದ ಬೇಸಾಯ ಸಂಸ್ಕøತಿಗೆ ಬಂದವರು. ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆ ಲೇಸು ಎನ್ನುವ ಬದುಕು ಅವರದು. ಐತಿಹಾಸಿಕ ಹಾಗು ಸಮಾಜಿಕ ನಾಟಕಗಳನ್ನು ಬರೆದರು. ಮಾನವೀಯ ಮೌಲ್ಯಗಳ ಆರಾಧಕರಾಗಿದ್ದರು. ಮಕ್ಕಳ ಸಾಹಿತ್ಯ ಸಂಗಮದ ಸಂಸ್ಥಾಪಕರಾದರು ಗ್ರಾಮೀಣ ಪ್ರದೇಶಕ್ಕೆ ಇವರ ಚಿಂತನೆಗಳು ಪ್ರೇರಕವಾಗಿದ್ದವು ಎಂದರು

ಶಿವಬಸವ ಆಶ್ರಮ ಶಂಭುಲಿಂಗ ಸ್ವಾಮಿಗಳು ಮಾತನಾಡಿ ಈ ನಾಡಿನ ಭಾವೈಕ್ಯತೆಯ ಹರಿಕಾರರಾಗಿದ್ದರು. ಬಾಗೇವಾಡಿ ತಾಲೂಕು ಅವರ ಸಾಹಿತ್ಯ ಹಾಗು ಕೃಷಿ ಕ್ಷೇತ್ರವಾಗಿತ್ತು ಸಮಾಜಮುಖಿ ಚಿಂತನೆ ಶ್ರೇಷ್ಠವಾಗಿದ್ದವು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ ಶೇಖರ್ ದಳವಾಯಿ ಪ್ರಾಚಾರ್ಯ ಕೆಜೆ ಲಮಾಣಿ ಮಾತನಾಡಿದರು

ಸಾಹಿತಿ ಶಕುಂತಲಾ ಹಿರೇಮಠ ಕವನ ವಾಚನ ಮಾಡಿ ನುಡಿನಮನ ಸಲ್ಲಿಸಿದರು ಸಾಹಿತಿ ಜಯಶ್ರೀ ಹಿರೇಮಠ ಅಶೋಕ ಗುಡದಿನ್ನಿ ಪ್ರೋ ಮಹಾದೇವ ರೇಬಿನಾಳ ಕೆ ಸುನಂದಾ ಡಾ ಸಂಗಮೇಶ ಮೇತ್ರಿ ವಿದ್ಯಾವತಿ ಅಂಕಲಗಿ ಪ್ರೋ ಶಿವಾನಂದ ಸಿಂಹಾಸನಮಠ ಪ್ರೋ ಬಸವರಾಜ ಕುಂಬಾರ ಸಂಗೀತಾ ಮಠಪತಿ ಸುಖದೇವಿ ಅಲಬಾಳಿ ಬಂದೇನವಾಜ ಬಿಜಾಪುರ ಅಂಬಾದಾಸ ಜೋಶಿ ವಿಜಯಾ ಬಿರಾದಾರ ವಿಶ್ವನಾಥ ಅರಬಿ ಯುವರಾಜ್ ಚೋಳಕೆ ಮಹಿಬೂಬ ಕೊಲಾರ ಸಲೀಮ ಬಾಗವಾನ ಶಿವಾಜಿ ಮೋರೆ ಬಂದೇನವಾಜ ದೋಲಚಿ ರವಿ ಬೆನಕಟ್ಟಿ ಮುಂತಾದವರು ಮೇಟಿ ಗೊಳಸಂಗಿ ಡಿ.ಬಿ ನಾಯಕ, ಶಬ್ಬಿರ ನದಾಫ ಉಪಸ್ಥಿತರಿದ್ದರು