ಸಾಹಿತಿ ಇಂದುಮತಿ ಲಮಾಣಿ ಮೇಲೆ ಹಲ್ಲೆ ಕರವೇ ಖಂಡನೆ

ವಿಜಯಪುರ, ಡಿ.29-ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕøತೆ ಮತ್ತು ಹಿರಿಯ ಮಹಿಳಾ ಸಾಹಿತಿ ಇಂದುಮತಿ ಲಮಾಣಿ ಮತ್ತು ಅವರ ಮಕ್ಕಳ ಮೇಲೆ ಶನಿವಾರದಂದು ಹೂವಿನಹಿಪ್ಪರಗಿ ಚನ್ನಮ್ಮ ವೃತ್ತ ಬಳಿ ಕೆಲ ಪುಂಡ ದುಷ್ಕರ್ಮಿಗಳು ಹಲ್ಲೆ ಮಾಡಿರುವ ಕ್ರಮವನ್ನು ಕರವೇ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ಎಂ.ಸಿ. ಮುಲ್ಲಾ ಒಬ್ಬ ನಾಡಿನ ಕವಿಯತ್ರಿ ಶ್ರೇಷ್ಠ ಸಾಹಿತಿ ಮೇಲೆ ಮಹಿಳೆಯನ್ನುವ ಅರಿವನ್ನು ತರದೆ ದುಷ್ಕರ್ಮಿಗಳು ರಸ್ತೆಯ ಮೇಲೆ ಕೇವಲ ವಾಹನದ ಹಾರ್ನ ಮಾಡಿದ ಕ್ಷುಲ್ಲಕ ಕಾರಣಕ್ಕೆ ದೈಹಿಕವಾಗಿ ಹಲ್ಲೆ ಮಾಡಿರುವ ಕ್ರಮ ಕರವೇ ಸಹಿಸುವದಿಲ್ಲ. ಈ ಕಾರಣಕ್ಕೆ ಅವರು ಯಾರೆ ಇರಲಿ ಅವರ ಮೇಲೆ ಸಂಜೆ 6 ಗಂಟೆಗೆ ದೂರು ದಾಖಲಾದರು ಇನ್ನೂ ಯಾವ ಆರೋಪಿಗಳನ್ನು ಬಂಧಿಸಿಲ್ಲ ಕಾರಣ ಕೂಡಲೇ ಕಠಿಣ ಕಾನೂನು ಕ್ರಮ ತೆಗೆದುಕೊಂಡು ಸಾಹಿತಿಗಳಿಗೆ ನ್ಯಾಯ ಒದಗಿಸಲು ಆಗ್ರಹಿಸಿದರು.
ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಕುಂಬಾರ ಮಾತನಾಡಿ ಈ ಘಟನೆ ನಡೆದಾದ ಮೇಲೆ ಬಸವನಬಾಗೇವಾಡಿ ಪೋಲಿಸ ಠಾಣೆಗೆ ದೂರು ಕೊಡಲು ಹೋದ ಮಹಿಳಾ ಸಾಹಿತಿ ಮತ್ತು ಅವರ ಮಕ್ಕಳ ಜೊತೆ ಅನುಚಿತವಾಗಿ ನಡೆದುಕೊಂಡ ಠಾಣೆ ಪೋಲಿಸ್ ಸಿಬ್ಬಂದಿಯ ಕ್ರಮ ಖಂಡನೆ. ಸಂಜೆ 6 ಗಂಟೆಯವರೆಗೂ ಅವರನ್ನು ಠಾಣೆಯಲ್ಲಿ ಕೂಡ್ರಿಸಿ ಠಾಣಾ ಪಿ.ಎಸ್.ಐ. ಬೇಜವಾಬ್ದಾರಿ ಕ್ರಮವನ್ನು ಖಂಡಿಸಿದರು.
ಅನಾರೋಗ್ಯದಿಂದ ಬಳಲುತ್ತಿರುವ ಸಾಹಿತ್ಯಿಗಳಿಗೆ ತಿಂಡಿ, ನೀರು ಸಹ ಕೊಡದೆ ಒಬ್ಬ ಅಪರಾಧಿ ತರಹ ನಡೆದುಕೊಂಡಿರುವ ಪೋಲಿಸರು ಯಾವ ಹಿತಾಸಕ್ತಿಗಾಗಿ ಈ ಕ್ರಮವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಠಾಣೆಯ ಮಹಿಳಾ ಸಿಬ್ಬಂದಿ ಬಡಿಗೇರ ಎಂಬುವರು ಸಾಹಿತಿ ಇಂದುಮತಿ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ. ಮಹಿಳೆ ಎಂಬ ಮಮಕಾರ ತೊರದ ಪೋಲಿಸ ಸಿಬ್ಬಂದಿಯ ಮೇಲೆ ಜಿಲ್ಲಾಧಿಕಾರಿಗಳು ಮತ್ತು ಪೋಲಿಸ ವರಿಷ್ಠರು ಯೋಗ್ಯ ಕ್ರಮ ತೆಗೆದುಕೊಳ್ಳಬೇಕು ಇಲ್ಲದ ಪಕ್ಷ ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಹಾದೇವ ರಾವಜಿ, ದಸ್ತಗೀರ ಸಾಲೋಟಗಿ, ಅಶೋಕ ಹಾರಿವಾಳ, ವಿನೋದ ದಳವಾಯಿ, ಫಯಾಜ ಕಲಾದಗಿ, ಮನೋಹರ ತಾಜೋವಾ, ಎಲ್.ಎಂ. ಬಿರಾದಾರ, ಜೈ ಭೀಮ ಮುತ್ತಗಿ, ನಿಸಾರ ಬೇಪಾರಿ, ತಾಜೋದ್ದಿನ ಖಲಿಪಾ, ಶಹಾಜನ ಖಾದ್ರಿ, ಬಸವರಾಜ ಬಿ.ಕೆ. ಆಯ್.ಪಿ. ಪಠಾಣ ಇನ್ನಿತರರು ಉಪಸ್ಥಿತರಿದ್ದರು.