ಸಾಹಸ ನಿಲಯ ಆರಂಭ

ಸಿನಿಮಾದಲ್ಲಿ ಸಾಹಸ ಸನ್ನಿವೇಶಗಳು ಚೆನ್ನಾಗಿ ಮೂಡಿಬರುವಲಿ ಸಾಹಸ ನಿರ್ದೇಶಕರ ಪಾತ್ರ ಮಹತ್ವದು.
ಕನ್ನಡದ ಸಾಕಷ್ಟು ಸಾಹಸ ನಿರ್ದೇಶಕರು ಭಾರತದಾದ್ಯಂತ ಅನೇಕ ಭಾಷೆಯ ಸಿನಿಮಾಗಳಲ್ಲಿ‌ ಕಾರ್ಯನಿರ್ವಹಿಸಿ ಪ್ರಸಿದ್ದರಾಗಿದ್ದಾರೆ.
ಕರ್ನಾಟಕದ ಸಾಹಸ ಕಲಾವಿದರಿಗಾಗಿ ಅಖಿಲ ಕರ್ನಾಟಕ ಸಾಹಸ ಕಲಾವಿದರ ಸಂಘ
ವಿಜಯ ದಶಮಿಯ ಶುಭ ಸಂದರ್ಭದಲ್ಲಿ ಈ ಸಂಘದ ನೂತನ ಕಟ್ಟಡ ಸಾಹಸ ನಿಲಯ ಉದ್ಘಾಟನೆ ಯಾಗಿದೆ.
ನಟ ವಿನೋದ್ ಪ್ರಭಾಕರ್, ತರುಣ್ ಸುಧೀರ್, ಹಾಗೂ ಥ್ರಿಲ್ಲರ್ ಮಂಜು, ರವಿವರ್ಮ, ಡಿಫರೆಂಟ್ ಡ್ಯಾನಿ ಸೇರಿದಂತೆ ಸಾಕಷ್ಟು ಸಾಹಸ ನಿರ್ದೇಶಕರ ಉಪಸ್ಥಿತಿಯಲ್ಲಿ ಉದ್ಘಾಟನಾ ಸಮಾರಂಭ ನೆರವೇರಿತು.‌
ನಾಯಂಡಹಳ್ಳಿಯ ಐ ಟಿ ಐ ಲೇಔಟ್ ನಲ್ಲಿ ಅಖಿಲ ಕರ್ನಾಟಕ ಸಾಹಸ ಕಲಾವಿದರ ಸಂಘದ ಸ್ವಂತ ಕಟ್ಟಡದಲ್ಲಿ ಸಾಹಸ ನಿಲಯ ತಲೆಯೆತ್ತಿದೆ