
ಸಂಜೆವಾಣಿ ನ್ಯೂಸ್
ಮೈಸೂರು ನ 08 :- ಉದ್ಬೂರು ಗೆಟ್ ಬಲಿ ಇರುವ ವಿಷ್ಣುವರ್ಧನ್ ಸ್ಮಾರಕದಲ್ಲಿ 68 ನೇ ಕನ್ನಡ ರಾಜ್ಯೋತ್ಸವ ವನ್ನು ಕರುಣಾಮಯಿ ವಿಷ್ಣುವರ್ಧನ್ ಅಭಿಮಾನಿ ಬಳಗ ಹಾಗೂ ಜೀವದಾರ ರಕ್ತ ನಿಧಿ ಕೇಂದ್ರ ವತಿಯಿಂದ ಅಭಿಮಾನಿಗಳಿಗೆ ಸಿಹಿ ಹಾಗೂ ಕನ್ನಡ ಬಾವುಟ ಹಿಡಿದು ಭುವನೇಶ್ವರಿಗೆ ಜೈಕಾರ ಕೂಗಿ ಕನ್ನಡ ರಾಜ್ಯೋತ್ಸವ ಆಚರಣೆಯನ್ನು ಸಂಭ್ರಮಿಸಿದರು
ಬಳಿಕ ಮಾತನಾಡಿದ ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್
ಕನ್ನಡದ ಹಲವಾರು ಕಟ್ಟಾಳುಗಳು ಮತ್ತು ಮಹನೀಯರ ಹೋರಾಟದ ಫಲವಾಗಿ ಇಂದು ಕರ್ನಾಟಕದ ಕಂಪು ವಿಶ್ವವ್ಯಾಪ್ತಿಯಾಗಿ ಹರಡಿದೆ’,ಕನ್ನಡ ಭಾಷೆಗೆ ಎಂದಿಗೂ ಅಳಿವು ಇಲ್ಲ. ಸೂರ್ಯಚಂದ್ರ ಇರುವಷ್ಟೇ ಅದು ಶಾಶ್ವತ’ ಎಂದರು.
ಇದೇ ಸಂದರ್ಭದಲ್ಲಿ ಜೀವದಾರ ರಕ್ತಾ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಕನ್ನಡ ಮೂವಿ ವಿಷ್ಣು ಅಭಿಮಾನಿ ಬಳಗದ ಸಂಚಾಲಕರಾದ ನಂದೀಶ್ ನಾಯಕ್, ಸೂರಜ್ ,ಸದಾಶಿವ್, ವಿ ಎಂ ನಾಗರಾಜು, ಸುಭಾಷ್, ವರುಣ ಮಹೇಶ್, ಚಂದ್ರು, ವಿಜಿ, ಹರೀಶ್ ನಾಯ್ಡು, ಹಾಗೂ ಇನ್ನಿತರರು ಅಭಿಮಾನಿಗಳು ಹಾಜರಿದ್ದರು