ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆ ಪೂರ್ಣಗೊಳಿಸದಿದ್ದರೆ ಲೋಕಸಭಾ ಚುನಾವಣೆ ಬಹಿಷ್ಕಾರ

ಸಂಜೆವಾಣಿ ವಾರ್ತೆ

ದಾವಣಗೆರೆ. ಫೆ.22: ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆಯನ್ನು ಮೂರು ತಿಂಗಳಲ್ಲಿ ಪೂರ್ಣಗೊಳಿಸದಿದ್ದಲ್ಲಿ ಲೋಕಸಭಾ ಚುನಾವಣೆ ಬಹಿಷ್ಕಾರ ಮಾಡಲಾಗುವುದು ಎಂದು ಖಡ್ಗ ಸಂಸ್ಥೆಯ ಬಿ.ಆರ್. ರಘು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, 2017ರ ಸೆಪ್ಟೆಂಬರ್ 11 ರಂದು ಪ್ರಾರಂಭವಾಗಿರುವಸಾಸ್ವೇಹಳ್ಳಿ ಏತ ನೀರಾವರಿ ಯೋಜನೆ 2022 ರ ಮಾ. 10 ಕ್ಕೆ ಮುಗಿಯಬೇಕಿತ್ತು.ಆದರೆ, ಈವರೆಗೆ ಮುಗಿದಿಲ್ಲ. ಮೂರು ತಿಂಗಳಲ್ಲಿ ಯೋಜನೆ ಪೂರ್ಣಗೊಳಿಸ ಬೇಕು. ಇಲ್ಲವಾದಲ್ಲಿ ಯೋಜನೆ ವ್ಯಾಪ್ತಿಯ  ಜನರು ಲೋಕಸಭಾ ಚುನಾವಣೆಯನ್ನು ಬಹಿಷ್ಕಾರ ಮಾಡುತ್ತೇವೆ ಎಂದು ತಿಳಿಸಿದರು.ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆ ಯಡಿ ಚನ್ನಗಿರಿ ತಾಲೂಕಿನ 120 ಕೆರೆ, ಹೊನ್ನಾಳಿ ತಾಲೂಕಿನ 4, ಶಿವಮೊಗ್ಗ ‌ ಜಿಲ್ಲೆಯ 12 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಯೋಜನೆ ಈವರೆಗೆ ಮುಗಿದಿಲ್ಲ ಎಂದು ತಿಳಿಸಿದರು.ಯೋಜನೆಯಡಿ ಪೈಪ್ ಲೈನ್ ಕೆಲಸ ಮುಗಿದಿದೆ.‌ ಅಧಿಕಾರಿಗಳ ಪ್ರಕಾರ ಶೇ.‌ 90 ಕಾಮಗಾರಿ ಮುಗಿದಿದೆ. ಆದರೆ, ಇನ್ನೂ ಶೇ.‌ 35-40 ರಷ್ಟು ಕಾಮಗಾರಿ ಆಗಬೇಕು. ಹೊನ್ನಾಳಿ ತಾಲೂಕಿನ ಹಟ್ಟಿಹಾಳ್ ಜಾಕ್ ವೆಲ್ ಸಮೀಪವೇ ಗಣಿಗಾರಿಕೆ ನಡೆಸ ಲಾಗುತ್ತಿದೆ. ಗಣಿಗಾರಿಕೆ ನಿಲ್ಲಿಸಬೇಕು ಎಂದು ಅನೇಕರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ದೂರಿದರು.ಚಂದ್ರಹಾಸ ಲಿಂಗದಹಳ್ಳಿ, ಸೈಯದ್ ನಯಾಜ್, ಸುನೀಲ್, ಕುಬೇಂದ್ರಸ್ವಾಮಿ ಇತರರು ಇದ್ದರು.