ಸಾಸಲವಾಡ ಯುವಕನ ಕೊಲೆ – ನಿಗೂಢ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಜ.5 :- ಸೋಮವಾರ ಸಂಜೆಯಿಂದ ಕಾಣೆಯಾಗಿದ್ದ 22ರ ವಯಸ್ಸಿನ ಯುವಕನ  ಅರೆಬರೆ ಸುಟ್ಟ ಮೃತದೇಹ ಬುಧವಾರ ಬೆಳಿಗ್ಗೆ  ತಾಲೂಕಿನ ಸಾಸಲವಾಡ ಗ್ರಾಮದ ಸಮೀಪದ ಎಸ್ ವಿ ಕೆ ಫಾರಂ ಬಳಿ ಪತ್ತೆಯಾಗಿದ್ದು  ಯಾರೋ ದುಷ್ಕರ್ಮಿಗಳು ಈತನನ್ನು ಕೊಲೆ ಮಾಡಿರುವ ನಿಗೂಢತೆಯ ಸಂಶಯ ವ್ಯಕ್ತವಾಗಿದೆ.
ಸಾಸಲವಾಡದ ಕೆ ಬಿ ಉಮೇಶ (22) ನಿಗೂಢವಾಗಿ ಕೊಲೆಯಾಗಿರುವ ದುರ್ದೈವಿ ಯುವಕನಾಗಿದ್ದಾನೆ. ಈತನು ಸೋಮವಾರ ಸಂಜೆ 6ಗಂಟೆ ಸುಮಾರಿಗೆ ಕಣದಲ್ಲಿನ ದನಕರುಗಳಿಗೆ ಮೇವು ಹಾಕಿ ಬರುತ್ತೇನೆಂದು ಮನೆಯಲ್ಲಿ ಹೇಳಿ ಬೈಕ್ ತೆಗೆದುಕೊಂಡು ಹೋಗಿ ಕಣದಲ್ಲಿ ಬೈಕ್ ಬಿಟ್ಟು ಹೋಗಿದ್ದವನು ಮನೆಗೆ ಬಾರದೆ ಇದ್ದು ತಂದೆ ಸೇರಿ ಸಂಬಂದಿಕರು ಎಲ್ಲಾ ಕಡೆ ಹುಡುಕಾಡಿದರು ಪತ್ತೆಯಾಗಲಿಲ್ಲ ನಂತರ ಮಂಗಳವಾರ ಸಹ ಹುಡುಕಾಡಿದರೂ ಸಿಗದೇ ಇದ್ದು ಬುಧವಾರ ಬೆಳಿಗ್ಗೆ ಎಸ್ ವಿ ಕೆ ಫಾರಂ ಕಡೆ ಹೋಗಿ ನೋಡಲಾಗಿ ಸುಟ್ಟಿರುವ ಜಾಗ ಕಂಡಿದ್ದು ಅಲ್ಲಿಗೆ ಹೋಗಿ ನೋಡಲಾಗಿ ಅರೆ ಬರೆ ಸುಟ್ಟ ಮೃತದೇಹ ಕಂಡಿದ್ದು ಅವನು ಧರಿಸಿದ ಬಟ್ಟೆ ಚಪ್ಪಲಿ ಹಾಗೂ ಕೈಗೆ ಹಾಕಿದ್ದ ಪ್ಲಾಸ್ಟಿಕ್ ಬಳೆ ನೋಡಿದ ತಂದೆ ಮಗನ ಮೃತದೇಹ ಎಂದು ಗುರುತಿಸಿ ಕೂಡ್ಲಿಗಿ ಪೊಲೀಸರಿಗೆ ಮಾಹಿತಿ ತಿಳಿಸಿದ್ದು ಸ್ಥಳಕ್ಕೆ ಧಾವಿಸಿದ ಪೊಲೀಸರು ಘಟನೆ  ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ ಹಾಗೂ ತಂದೆ ಮರಿಬಸಪ್ಪ ನೀಡಿದ ದೂರಿನಂತೆ ಮಗನ ಸಾವು ನಿಗೂಢವಾಗಿದ್ದು ಯಾರೋ ದುಷ್ಕರ್ಮಿಗಳು ಮಗನನ್ನು ಕೊಲೆ ಮಾಡಿರುವ ಬಗ್ಗೆ ಸಂಶಯದ ದೂರಿನಂತೆ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ ಎಂದು ತಿಳಿದಿದೆ.