ಸಾವ್ಕಾರ ನೀನೇ ಚುನಾವಣೆಗೆ ನಿಲ್ಲು: ಸಿದ್ದು

ಬೆಂಗಳೂರು, ಮಾ-20- “ಸಾವ್ಕಾರ ನೀನೇ ನಿಲ್ಲಪ್ಪ.. ನೀನು ನಿಂತರೆ ಗೆಲ್ಲುವ ಅವಕಾಶ ಹೆಚ್ಚಿದೆ…”

ಬೆಳಗಾವಿ ಲೋಕಸಭೆ ಉಪ‌ಚುನಾವಣೆಯಲ್ಲಿ ಸ್ಪರ್ಧೆ ಮಾಡುವಂತೆ ಕೆ.ಪಿಸಿಸಿ ಕಾರ್ಯಾದ್ಯಕ್ಷ ಸತೀಶ್ ಜಾರಕಿ ಹೊಳಿ ಅವರನ್ನು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮನವೊಲಿಸಿದ ಬಗೆ ಇದು.

ಬಿಜೆಪಿಯಲ್ಲೂ ಇನ್ನೂ ಗೊಂದಲ ಮುಂದುವರಿದಿದೆ.
ನೀನು ಮನಸ್ಸು ಮಾಡಿ ಚುನಾವಣೆಗೆ ನಿಲ್ಲು ಆಮೇಲೆ ನೊಡೋಣ ಎಂದು ಸಲಹೆ‌ ನೀಡಿದ್ದಾರೆ.

ಬೆಳಗಾವಿ ಲೋಕಸಭೆ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಮಾಡುವ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದ ಹಿರಿಯ ನಾಯಕರ ಸಭೆಯಲ್ಲಿ ಪಾಲ್ಗೊಂಡ ಬಹುತೇಕರು ಸತೀಶ್ ಜಾರಕಿಹೊಳಿಗೆ ಚುನಾವಣೆಗೆ ನಿಲ್ಲುವಂತೆ ಮನವಿ ಮಾಡಿದರು ಎನ್ನಲಾಗಿದೆ

ಆಗ ಸತೀಶ್ ಜಾರಕಿ ಹೊಳಿ , ರಾಷ್ಟ್ರ ರಾಜಕಾರಣಕ್ಕೆ ಹೋಗಲು ತಮಗೆ ಮನಸ್ಸು ಇಲ್ಲ ತಾವು ರಾಜ್ಯರಾಜಕಾರಣದಲ್ಲಿ ಇರಲು ಹೆಚ್ಚಿನ ಆಸಕ್ತಿ ಇದೆ ಹೊಸಬರಿಗೆ ಅವಕಾಶ ಮಾಡಿಕೊಡಿ ಎಂದು ಅವರು ಹಿರಿಯ ನಾಯಕರಿಗೆ ಮನವಿ ಮಾಡಿದರು.

ಹಿರಿಯ ನಾಯಕರು ಮನವಿ ಮಾಡಿದ ಬಳಿಕ ಪ್ರತಿಕ್ರಿಯಿಸಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸಾಹುಕಾರ ನೀನು ಚುನಾವಣೆಗೆ ಮೊದಲು ಆಮೇಲೆ ನೋಡೋಣ ಎಂದು ಸತೀಶ್ ಜಾರಕಿಹೊಳಿ ಅವರಿಗೆ ಮನವಿ‌ ಮಾಡಿದ್ದಾರೆ.

ಹಿರಿಯ ನಾಯಕರ ಒಮ್ಮತದ ಅಭಿಪ್ರಾಯಕ್ಕೆ ಸಂಬಂಧಿಸಿದ ಸತೀಶ್ ಜಾರಕಿಹೊಳಿ ನೋಡೋಣ ಎಂದು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ