ಸಾವು ತಡೆಗೆ ರಸ್ತೆಗೆ ಬ್ರೇಕರ್ ಹಾಕಲು ಒತ್ತಾಯ

ಸೇಡಂ, ಮೇ, 30: ಒಂದೆರಡು ತಿಂಗಳಿಗೊಮ್ಮೆ ಅಪಘಾತಗಳು ಸಂಭವಿಸಿ ಬಡ ಕುಟುಂಬದ ಸದಸ್ಯರು ಸಾವಿಗೀಡಾದರೂ ಸಹ ತಾಲೂಕು ಆಡಳಿಯ ರಸ್ತೆಗಳಿಗೆ ಬ್ರೇಕರ್ ಅಳವಡಿಸುವಲ್ಲಿ ವಿಫಲವಾಗುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತ ಶಿವಕುಮಾರ ಅಪ್ಪಾಜಿ ದೂರಿದ್ದಾರೆ.
ಪಟ್ಟಣದ ಬಹುತೇಕ ಕಡೆ ಅನಾವಶ್ಯಕ ಸ್ಥಳಗಳಲ್ಲಿ ಸ್ಪೀಡ್ ಬ್ರೇಕರ್ ಗಳನ್ನು ಹಾಕಲಾಗಿದೆ. ಆದರೆ ಎಲ್ಲಿ ಹೆಚ್ಚಿನ ಅಪಘಾತಗಳಾಗಿ ಪ್ರಾಣಹಾನಿಯಾಗುತ್ತಿವೆಯೊ ಅಲ್ಲಿ ಅಳವಡಿಸದೆ ಇರುವುದು ದುರ್ದೈವದ ಸಂಗತಿಯಾಗಿದೆ.
ಕಳೆದ ಕೆಲ ತಿಂಗಳುಗಳ ಹಿಂದೆ ಊಡಗಿ ರಿಂಗ್ ರೋಡ್ ಕ್ರಾಸ್ ಬಳಿ ತಡರಾತ್ರಿ ಮದುವೆ ಮುಗಿಸಿಕೊಂಡು ಹೋಗುತ್ತಿದ್ದ ಮಹಿಳೆ ಹಾಗೂ ಮಗುವಿನ ಮೇಲೆ ಭಾರ ತುಂಬಿದ್ದ ಲಾರಿ ಹಾಯ್ದು ಕೊನೆಯುಸಿರೆಳೆದಿದ್ದರು. ಈಗ ಅದೇ ಕ್ರಾಸ್ ಬಳಿ ಬುಧವಾರ ತಡರಾತ್ರಿ ವ್ಯಕ್ತಿಗೆ ಲಾರಿ ಡಿಕ್ಕಿ ಹೊಡೆದಿದೆ. ಇಡೀ ದೇಹದ ಮೇಲೆ ಭಾರದ ಲಾರಿ ಹಾಯ್ದ ಪರಿಣಾಮ ದೇಹ ಛಿದ್ರ ಛಿದ್ರವಾಗಿ ಮೃತ ವ್ಯಕ್ತಿಯನ್ನು ಗುರುತಿಸುವುದೂ ಪೆÇಲೀಸರಿಂದ ಸಾಧ್ಯವಾಗುತ್ತಿಲ್ಲ. ಈ ಸಾವುಗಳೆದಕ್ಕೂ ನೇರ ಕಾರಣ ಜಿವಿಆರ್, ಪುರಸಭೆ ಮತ್ತು ಪೆÇಲೀಸ್ ಇಲಾಖೆಯೇ ಆಗಿದೆ.
ರಸ್ತೆ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ಜಿವಿಆರ್ ಇನಫ್ರಾ ಕಂಪನಿಯವರು ಕೇವಲ ಟೋಲ್ ಸಂಗ್ರಹದಲ್ಲಿಯೇ ಆಸಕ್ತಿ ತೋರುತ್ತಿದ್ದು, ರಸ್ತೆಯ ಮೇಲಿನ ಧೂಳು ತೆಗೆಯಲ್ಲ. ಅಪಘಾತ ಹೆಚ್ಚಾದ ಸ್ಥಳಗಳಲ್ಲಿ ಸೂಚನಾ ಫಲಕ ಅಳವಡಿಸಲ್ಲ ಜೊತೆಗೆ ಪಟ್ಡಣದಲ್ಲಿ ಹಾದು ಹೋಗುವ ರಸ್ತೆಗೆ ಲೈಟಿಂಗ್ ವ್ಯವಸ್ಥೆ ಇಲ್ಲ. ಇನ್ನೊಂದೆಡೆ ಸರ್ವಿಸ್ ರಸ್ತೆ ಪಾದಚಾರಿ ಹಾಗೂ ದ್ವಿಚಕ್ರವಾಹನಗಳ ಅನುಕೂಲಕ್ಕೆ ಪಟ್ಟಣದ ನಿವಾಸಿಗಳ ಸುರಕ್ಷತೆಗೆ ನಿರ್ಮಿಸಲಾಗಿದೆ. ಆದರೆ ಸರ್ವಿಸ್ ರಸ್ತೆಯನ್ನು ಖಾಸಗಿ ವಾಹನಗಳು ತಮ್ಮ ವಾಹನಗಳ ಪಾಕಿರ್ಂಗಗೆ ಬಳಸುತ್ತಾರೆ. ಈ ಕುರಿತು ಪೆÇಲೀಸ್ ಇಲಾಖೆ ಕಿಂಚಿತ್ತೂ ಕಾಳಜಿ ತೋರಲ್ಲ ಎಂದು ಆರೋಪಿಸಿದ್ದಾರೆ.

ಕೂಡಲೇ ಹೆಚ್ಚಿನ ಅಪಘಾತಗಳಾಗುವ ಕಲಬುರಗಿ ಕ್ರಾಸ್, ಜಿಕೆ ಕ್ರಾಸ್ ಮತ್ತು ಊಡಗಿ ರಿಂಗ್ ರೋಡ್ ಕ್ರಾಸ್ ಗಳನ್ನು ಅಪಘಾತ ವಲಯ ಎಂದು ಘೋಷಿಸಿ, ಸ್ಪೀಡ್ ಬ್ರೇಕರ್ ಅಳವಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಬಹುತೇಕ ಅಪಘಾತಗಳು ಸಿಮೆಂಟ್ ಕಾರ್ಖಾನೆ ಲಾರಿಗಳಿಂದಲೆ ಆಗಿವೆ.
ರಿಂಗ್ ರಸ್ತೆಯಲ್ಲಿ ನಡೆದ ಬಹುತೇಕ ಅಪಘಾತಗಳು ವಾಸವದತ್ತಾ ಸಿಮೆಂಟ್ ಹಾಗೂ ಶ್ರೀ ಸಿಮೆಂಟ್ ಕಾರ್ಖಾನೆಗಳಿಗೆ ತೆರಳುವ ಲಾರಿ, ಟ್ಯಾಂಕರಗಳಿಂದಲೆ ಸಂಭವಿಸಿವೆ ಎಂಬುದು ಗಮನಾರ್ಹ. ಕೂಡಲೆ ಸಿಮೆಂಟ್ ಕಾರ್ಖಾನೆಗಳಿಗೆ ತೆರಳುವ ಭಾರಿ ಗಾತ್ರದ ವಾಹನಗಳಿಗೆ ಸಮಯ ನಿಗಧಿ ಮಾಡಿ ನಿಭರ್ಂಧ ಹೇರಬೇಕು ಜೊತೆಗೆ ಬೈಪಾಸ್ ರಸ್ತೆ ನಿರ್ಮಿಸಬೇಕು.

  • ಶಿವಕುಮಾರ ಅಪ್ಪಾಜಿ
    ಸಾಮಾಜಿಕ ಕಾರ್ಯಕರ್ತ