ಸಾವು ಗೆದ್ದ ಸಾತ್ವಿಕ ಮನೆಗೆ- ಅಜ್ಜನ ವಿರುದ್ಧ ಪ್ರಕರಣ ದಾಖಲಿಸಲು ಡಿಸಿ ಸೂಚನೆ

ಸಂಜೆವಾಣಿ ವಾರ್ತೆ.
ವಿಜಯಪುರ,ಏ.7:ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ತೋಟದ ವಸತಿಯ ಕೊಳವೆ ಬಾವಿಯಲ್ಲಿ ಸಿಕ್ಕಿ ಹಾಕಿಕೊಂಡು ಸಾವು ಬದುಕಿನ ನಡುವೆ ಹೋರಾಟ ನಡೆಸಿ ಬದುಕುಳಿದ 2 ವರ್ಷದ ಬಾಲಕ ಸಾತ್ವಿಕನನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಬಾಲಕ ಸಂಪೂರ್ಣವಾಗಿ ಸಾತ್ವಿಕ ಚೇತರಿಸಿಕೊಂಡು ಆರೋಗ್ಯದಿಂದ ಇರುವ ಹಿನ್ನೆಲೆಯಲ್ಲಿ ಸಾತ್ವಿಕನನ್ನು ಶನಿವಾರ ಸಂಜೆ ಜಿಲ್ಲಾ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.
ಸತತ ಇಪ್ಪತ್ತು ಗಂಟೆಗಳ ಕಾರ್ಯಾಚರಣೆ ಬಳಿಕ ಸಾತ್ವಿಕ ಸಾವು ಗೆದ್ದು ಮೃತ್ಯುಂಜಯನಾಗಿ ಹೊರ ಬಂದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಶನಿವಾರ ಬಿಡುಗಡೆಯಾಗಿ ಮನೆಗೆ ತೆರಳಿದ್ದಾನೆ.
ಏತನ್ಮಧ್ಯೆ ಈ ಭೀಕರ ದುರಂತಕ್ಕೆ ಕಾರಣರಾದ ಜಮೀನು ಮಾಲೀಕ ಸಾತ್ವಿಕನ ಅಜ್ಜ ಶಂಕರೆಪ್ಪ ಮುಜಗೊಂಡ ಹಾಗೂ ಕೊಳವೆ ಬಾವಿ ಕೊರೆದ ಯಂತ್ರದ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಲು ಜಿಲ್ಲಾಧಿಕಾರಿ ಟಿ. ಭೂಬಾಲನ್ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.