ಸಾವು ಗೆದ್ದ ಕಾರ್ಮಿಕರ ಧೈರ್ಯಕ್ಕೆ ಮೋದಿ ಪ್ರಶಂಸೆ

ನವದೆಹಲಿ,ನ,೨೯- ಉತ್ತರಕಾಶಿಯ ಸಿಲ್ಕ್ಯಾರ ಸುರಂಗದಲ್ಲಿ ಕಳೆದ ೧೭ ದಿನಗಳಿಂದ ಸಾವು ಬದುಕಿನ ನಡುವೆ ಹೋರಾಡಿ ಕೊನೆಗೂ ಸಾವು ಗೆದ್ದ ಬಂದ ೪೧ ಕಾರ್ಮಿಕರ ಜೊತೆ ಇಂದು ಮುಂಜಾನೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಿ ಅವರ ಧೈರ್ಯವನ್ನು ಪ್ರಶಂಸಿಸಿದ್ದಾರೆ.ಕಾರ್ಮಿಕರ ಧೈರ್ಯ ಮತ್ತು ತಾಳ್ಮೆ ದೇಶದ ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕವಾಗಿದೆ. ನಿಮ್ಮ ಧೈರ್ಯ ಮೆಚ್ಚುವಂತಹದು ಎಂದು ಹೇಳಿದ್ದಾರೆ.ನವೆಂಬರ್ ೧೨ ರಂದು ಭೂಕುಸಿತದ ನಂತರ ಉತ್ತರಾಖಂಡದ ಉತ್ತರಕಾಶಿಯಲ್ಲಿ ನಿರ್ಮಾಣ ಹಂತದಲ್ಲಿರುವ ಸಿಲ್ಕ್ಯಾರಾ ಸುರಂಗದೊಳಗೆ ಸಿಲುಕಿಕೊಂಡಿದ್ದ ೪೧ ಕಾರ್ಮಿಕರೊಂದಿಗೆ ಇಂದು ಮುಂಜಾನೆ ದೂರವಾಣಿಯಲ್ಲಿ ಮಾತನಾಡಿ ಸಾವು ಗೆದ್ದ ಬಂದ ಎಲ್ಲರನ್ನು ಅಭಿನಂಧಿಸಿದ್ದಾರೆ.ಮುಂಜಾನೆ ಉತ್ತರಕಾಶಿ ಸುರಂಗದಿಂದ ಹೊರಗೆ ಬಂದ ಕಾರ್ಮಿಕರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮಾತನಾಡಿ ಕಾರ್ಮಿಕರನ್ನು ರಕ್ಷಣೆ ಮಾಡಲು ಶ್ರಮಿಸಿ ವಿವಿಧ ರಕ್ಷಣಾ ತಂಡಗಳ ಕೆಲಸವನ್ನು ಇದೇ ವೇಳೆ ಶ್ಲಾಘಿಸಿದ್ದಾರೆ.ಬಹು ಏಜೆನ್ಸಿಗಳ ನೇತೃತ್ವದ ಭಾರತದ ಅತಿದೊಡ್ಡ ಸ್ಥಳಾಂತರಿಸುವ ಕಾರ್ಯಾಚರಣೆಯಲ್ಲಿ ಎಲ್ಲಾ ೪೧ ಕಾರ್ಮಿಕರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಇದಕ್ಕಾಗಿ ಎಲ್ಲರನ್ನು ಅಭಿನಂದಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.ಪಾರುಗಾಣಿಕಾ ಕಾರ್ಯಾಚರಣೆಯಲ್ಲಿ ತೊಡಗಿರುವ ಪ್ರತಿಯೊಬ್ಬರೂ “ಮಾನವೀಯತೆ ಮತ್ತು ತಂಡದ ಕೆಲಸಗಳ ಅದ್ಭುತ ಉದಾಹರಣೆ” ಪ್ರದರ್ಶಿಸಿದ್ದಾರೆ. ಉತ್ತರಕಾಶಿಯಲ್ಲಿ ಸಹೋದರರ ರಕ್ಷಣಾ ಕಾರ್ಯಾಚರಣೆ ಯಶಸ್ಸು ಎಲ್ಲರನ್ನೂ ಭಾವುಕರನ್ನಾಗಿಸುತ್ತಿದೆ, ಕಾರ್ಮಿಕರ ಧೈರ್ಯ ಮತ್ತು ತಾಳ್ಮೆ ಎಲ್ಲರಿಗೂ ಸ್ಪೂರ್ತಿದಾಯಕವಾಗಿದೆ, ನಿಮಗೆಲ್ಲರಿಗೂ ಒಳ್ಳೆಯ ಆರೋಗ್ಯ ಸಿಗಲಿ ಎಂದು ಹಾರೈಸಿದ್ದಾರೆ.”ನವೆಂಬರ್ ೧೨ ರಂದು ಭೂಕುಸಿತದ ನಂತರ ಕುಸಿದು ಬಿದ್ದ ನಂತರ ಕಾರ್ಮಿಕರು ಸುರಂಗದೊಳಗೆ ಸಿಲುಕಿಕೊಂಡಿದ್ದರು. ಅಂದಿನಿಂದ, ಅವರನ್ನು ರಕ್ಷಿಸಲು ಬೃಹತ್ ಕಾರ್ಯಾಚರಣೆ ನಡೆಸಲಾಗಿತ್ತು ೧೭ ದಿನಗಳ ನಂತರ ಅವರೆಲ್ಲರನ್ನೂ ರಕ್ಷಿಸಿದ್ದರಿಂದ ಕಳೆದ ರಾತ್ರಿ ಹೊರಕ್ಕೆ ಕರೆ ತರಲಾಗಿತ್ತು.

ಕಾರ್ಮಿಕರಿಗೆ ಲಕ್ಷ ರೂ. ಪರಿಹಾರ
ಉತ್ತರಕಾಶಿಯ ಸಿಲ್ಕ್ಯಾರ ಸುರಂಗದಲ್ಲಿ ಸಿಲುಕಿ ಸಾವು ಗೆದ್ದು ಬಂದ ೪೧ ಕಾರ್ಮಿಕರಿಗೆ ತಲಾ ೧ ಲಕ್ಷ ಪರಿಹಾರ ಪ್ರಕಟಿಸಲಾಗಿದೆ.
ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮತ್ತು ಕೇಂದ್ರ ಹೆದ್ದಾರಿ ಖಾತೆ ರಾಜ್ಯ ಸಚಿವ ಜನರಲ್ ವಿಕೆ ಸಿಂಗ್ ಅವರು ೪೧ ಕಾರ್ಮಿಕರಿಗೆ ತಲಾ ೧ ಲಕ್ಷ ಪರಿಹಾರ ವಿತರಿಸಿದರು.
ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಇತರ ಅಧಿಕಾರಿಗಳು ಸಹ ರಕ್ಷಣಾ ಸ್ಥಳದಲ್ಲಿದ್ದಾರೆ. ಕಾರ್ಮಿಕರನ್ನು ಸ್ವಾತಂತ್ರ್ಯದಿಂದ ಬೇರ್ಪಡಿಸಿದ ಉಳಿದ ೧೦-೧೨ ಮೀಟರ್ ಅವಶೇಷಗಳ ಮೂಲಕ ಕೈಯಾರೆ ಬಿಲ ಮಾಡುವ ಕಾರ್ಯಕ್ಕಾಗಿ ಉತ್ತರ ಪ್ರದೇಶದ ’ರಾಟ್-ಹೋಲ್’ ಗಣಿಗಾರರು ಸೇನೆಯೊಂದೊಗೆ ಕೈಜೋಡಿಸಿದ ಕಾರ್ಮಿಕರ ಕೆಲಸಕ್ಕೂ ಮೆಚ್ಚುಗೆ ವ್ಯಕ್ತಪಡಿಸಲಾಗಿದೆ.
ಸುರಂಗದಲ್ಲಿ ಯೋಗಾಭ್ಯಾಸ
ಸುರಂಗದಲ್ಲಿ ಸಿಕ್ಕಿ ಹಾಕಿಕೊಂಡ ವಿಷಯ ತಿಳಿಯುತ್ತಿದ್ದಂತೆ ಕಾಲಕಾಲಕ್ಕೆ ’ಯೋಗವನ್ನು ಅಭ್ಯಾಸ ಮಾಡಿ ಉತ್ಸಾಹ ಹೆಚ್ಚಿಸಿಕೊಳ್ಳುವ ಕೆಲಸ ಮಾಡಿದೆವು ಜೊತೆಗೆ ಸುರಂಗದಲ್ಲಿ ಇದ್ದ ಜಾಗದಲ್ಲಿ ನಡೆಗೆ ಅಭ್ಯಾಸದಲ್ಲಿ ಭಾಗಿಯಾಗಿದ್ದವು ಎಂದು ಸಾವು ಬಂದ ಕಾರ್ಮಿಕರೊಬ್ಬರು ತಿಳಿಸಿದ್ದಾರೆ.