ಸಾವು ಇಳಿಕೆ- ಸೋಂಕು ಏರಿಕೆ

ನವದೆಹಲಿ, ಜೂ.೧೧- ದೇಶದಲ್ಲಿ ಕೊರೊನಾ ಸೋಂಕು ಮತ್ತು ಸಾವಿನ ಸಂಖ್ಯೆ ಪ್ರತಿನಿತ್ಯ ಏರಿಕೆ ಮತ್ತು ಇಳಿಕೆಯಾಗುವ ಮೂಲಕ ಹಾವು ಏಣಿ ಆಟ ಆಡುತ್ತಿದೆ.ಈ ಮೂಲಕ ಜನರನ್ನು ಮತ್ತಷ್ಟು ಆತಂಕಕ್ಕೆ ಸಿಲುಕುವಂತೆ ಮಾಡಿದೆ.
ನೆನ್ನೆ ದಾಖಲಾಗಿದ್ದ ಸೋಂಕು ಇಂದು ತುಸು ಕಡಿಮೆ ಪ್ರಮಾಣದಲ್ಲಿ ಕಡಿಮೆಯಾಗಿದೆ. ಸಾವಿನ ಸಂಖ್ಯೆಯಲ್ಲಿ ನಿನ್ನೆಗಿಂತ ಶೇಕಡ ಅರ್ಧದಷ್ಟು ಕಡಿಮೆಯಾಗಿದೆ.
ದೇಶದಲ್ಲಿ ಕಳೆದ ನಾಲ್ಕು ದಿನಗಳಿಂದ ಸತತವಾಗಿ ಒಂದು ಲಕ್ಷಕ್ಕೂ ಕಡಿಮೆ ಪ್ರಮಾಣದಲ್ಲಿ ಸೋಂಕು ದಾಖಲಾಗುತ್ತದೆ ಇದು ಆಶಾದಾಯಕ ಬೆಳವಣಿಗೆಯಾಗಿದೆ.
ದೇಶದಲ್ಲಿ ಕಳೆದ ೨೪ ಗಂಟೆಗಳಲ್ಲಿ ಹೊಸದಾಗಿ ೯೧,೭೦೨ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಸೋಂಕಿನಿಂದ ೧,೩೪,೫೮೦ ಮುಂದಿ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ .ಜೊತೆಗೆ ೩,೪೦೩ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ
ಇಂದು ೮ ಗಂಟೆಗೆ ಹೊಸದಾಗಿ ಕಾಣಿಸಿಕೊಂಡಿರುವ ಸೋಂಕು ಸಂಖ್ಯೆ ಸೇರಿದಂತೆ ಇಲ್ಲಿಯತನಕ ಒಟ್ಟಾರೆಯಾಗಿ ದೇಶದಲ್ಲಿ ೨,೯೨,೭೪,೮೨೩ ಏರಿಕೆಯಾಗಿದೆ. ಸೋಂಕಿನಿಂದ ೨,೭೭,೯೦,೦೭೩ ಮಂದಿ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ.
ದೇಶದಲ್ಲಿ ದಿನನಿತ್ಯ ೨- ೩ ಸಾವಿರ ಆಜುಬಾಜಿನಲ್ಲಿ ನಿತ್ಯ ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇರುವರೆಗೂ ಸೋಂಕಿನಿಂದ ೩,೬೩,೦೭೯ ಮಂದಿ ಮೃತ ಪಟ್ಟಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.
ದೇಶದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಮತ್ತು ಸಾವು ದಾಖಲಾಗುತ್ತಿದ್ದ ಮಹಾರಾಷ್ಟ್ರ ದೆಹಲಿ ಕರ್ನಾಟಕ ಕೇರಳ ತಮಿಳುನಾಡು ಆಂಧ್ರಪ್ರದೇಶ ಪಶ್ಚಿಮಬಂಗಾಳ ಚಂಡೀಗಢದ ಹರಿಯಾಣ ರಾಜಸ್ಥಾನ ಪಂಜಾಬ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಸೋಂಕು ಮತ್ತು ಸಾವಿನ ಸಂಖ್ಯೆ ಕಡಿಮೆಯಾಗಿದೆ. ಇದರಿಂದಾಗಿ ದೇಶದಲ್ಲಿ ಸೋಂಕಿನ ಪ್ರಮಾಣ ಇಳಿಕೆಯಾಗಿದೆ

ಮತ್ತಷ್ಟು ಕುಸಿತ:
ದೇಶದಲ್ಲಿ ಪ್ರತಿನಿತ್ಯ ದೃಢಪಡುತ್ತಿರುವ ಸೋಂಕಿಗಿಂತ ಚೇತರಿಕೆ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯೂ ಗಣನೀಯವಾಗಿ ಕುಸಿಯುತ್ತಿದೆ.
ಸದ್ಯ ದೇಶದಲ್ಲಿ ೧೧,೨೧,೬೭೧ ಸಕ್ರಿಯ ಪ್ರಕರಣಗಳು ಇದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ

೨೪.೬೦ಕೋಟಿಗೆ ಲಸಿಕೆ:
ದೇಶದಲ್ಲಿ ಲಸಿಕೆ ಅಭಾವದ ನಡುವೆಯೂ ಇಲ್ಲಿಯತನಕ ೨೪ ಕೋಟಿಗೂ ಹೆಚ್ಚು ಜನರಿಗೆ ಲಸಿಕೆ ಹಾಕಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ನೆನ್ನೆ ಸಂಜೆಯತನಕ ೨೪,೬೦,೮೫,೬೪೯ ಮಂದಿಗೆ ಲಸಿಕೆ ಹಾಕಿರುವುದಾಗಿ ಅಂಕಿಅಂಶ ಬಿಡುಗಡೆ ಮಾಡಿದೆ. ಡಿಸೆಂಬರ್ ವೇಳೆಗೆ ದೇಶದ ಎಲ್ಲ ಜನರಿಗೆ ಲಸಿಕೆ ಹಾಕುವ ಗುರಿಯನ್ನು ಹೊಂದಿರುವುದಾಗಿಯೂ ಕೂಡ ತಿಳಿಸಿದೆ..
ಕಳೆದ ಕೆಲವು ದಿನಗಳಿಂದ ಪ್ರತಿದಿನ ಒಂದು ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರು ಚೇತರಿಸಿಕೊಳ್ಳುತ್ತಿದ್ದಾರೆ ಇದರಿಂದಾಗಿ ದೇಶದಲ್ಲಿ ಒಟ್ಟಾರೆ ಸೋಂಕಿತರ ಬಗ್ಗೆ ಶೇಕಡಾ ೪ ರಷ್ಟು ಮಂದಿಗೆ ಮಾತ್ರ ಇದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
೯೪.೭೭ ಚೇತರಿಕೆ
ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಚೇತರಿಕೆ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಇದುವರೆಗೂ ಪ್ರತಿಶತ ೯೪.೭೭ ಚೇತರಿಕೆ ಪ್ರಮಾಣ ಹೆಚ್ಚಿದೆ.