ಸಾವುಜೀ ಸಮಾಜದ ನಿಗಮ ಮಂಡಳಿಗೆ ಆಗ್ರಹ

ಮಾನ್ವಿ,ಆ.೦೧- ತಾಲೂಕ ಕ್ಷತ್ರಿಯ ಸಮಾಜದ ಉಪ-ಪಂಗಡಗಳಲ್ಲೊಂದಾದ ಶ್ರೀ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ (ಸಾವಜಿ) ಸಮಾಜದ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಹಾಗೂ ಸಾವುಜೀ ನಿಗಮ ಮಂಡಳಿಯನ್ನು ಸ್ಥಾಪಿಸಬೇಕು ಎಂದು ತಾಲೂಕ ದಂಡಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಗೆ ಮನವಿ ಸಲ್ಲಿಸಿದರು..
ದಂಡಧಿಕಾರಿಳಿಗೆ ಮನವಿ ಸಲ್ಲಿಸಿ ಮಾತಾನಾಡಿ ಅವರ ನಾವು ಸೋಮವಂಶ ಶ್ರೀಸಹಸ್ರಾರ್ಜುನ ಕ್ಷತ್ರಿಯ ವಂಶದವರಾಗಿದ್ದ ವಿವಿಧತೆಯಲ್ಲಿ ಏಕತಾ ಭಾವನೆಯಿಂದ ಬದುಕುತ್ತಿರುವ ನಾವು ಕರ್ನಾಟಕ ರಾಜ್ಯಾದಾದ್ಯಂತ ಅಂದಾಜು ೧೫ಲಕ್ಷ ಜನರಿದ್ಯವ ಹಾಗೂ ಶೇಕಡಾ ೮೯% ಜನ ಕಡುಬಡವರು, ಉದ್ಯೋಗದಲ್ಲಿ ಗಿಪೇರಿ, ಕಿರಾಣಿ ಹಲವಾರು ಚಿಕ್ಕ ಪುಟ್ಟ ಕಸುಬು ಅಲ್ಲದೆ ದಿನಗೂಲಿ ಮಾಡುವ ಜನರಾಗಿದ್ದು, ಕೆಲವೆ ಕೆಲವು ಬೆರಳೆಣಿಕೆ ಮಂದಿ ಸ್ಥಿತಿವಂತರಿದಾರೆ ಈ ರೀತಿ ಬದಕುತ್ತಿರುವ ನಮ್ಮ ಸಮುದಾಯಕ್ಕೆ ಅಭಿವೃದ್ಧಿಗಾಗಿ ನಿಗಮ ಮಂಡಳಿಯನ್ನು ಸ್ಥಾಪಿಸಿಬೇಕು ಹಾಗೂ ಈ ನಮ್ಮ ಸಮುದಾಯಕ್ಕೆ ಪ್ರತ್ಯೇಕವಾಗಿ ಶ್ರೀ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪನೆ ಹಾಗೂ ಆ ಮಂಡಳಿಯಿಂದ ಹಿಂದುಳಿದ ವರ್ಗಗಳಿಗೆಂದೇ ಕಾಲಾನಂತ ವಿಶೇಷ ಯೋಜನಗಳ ಸವಲತ್ತುಗಳನ್ನು ಒದಗಿಸಿಕೊಡುವಂತಾಗಬೇಕು ಮತ್ತು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಹಾಗೂ ರಾಜಕೀಯ ರಂಗದಲ್ಲಿಯೂ ನಮ್ಮ ಸಮುದಾಯ ಇನ್ನೂ ತೆವಳುತ್ತಿದೆ ಈ ನಾಲೂ ಕ್ಷೇತ್ರಗಳಲ್ಲಿ ಆದಷ್ಟು ಬೇಗ ಉನ್ನತಮಟ್ಟದ ಅಭಿವೃದ್ಧಿ ಆಗಬೇಕು. ನಮ್ಮ ಸಮಾಜದ ಮೂರನೆಯ ಬೇಡಿಕೆಯಾಗಿ ಪ್ರತಿಯೊಂದು ಬಿಲ್ಲೆಯ ನಮ್ಮ ಸಮುದಾಯದ ಮಂದಿ ಹಚ್ಚಿರುವ ಊರಲ್ಲಿ ಒಂದು ರಸ್ತೆಗೆ ಶ್ರೀಸಹಸ್ರಾರ್ಜುನ ಮಹರಾಜರ ವೃತ್ತ ಎಂದು ಹೆಸರು ಇದಲು ಮತ್ತು ಸರ್ಕಾರದಿಂದ ಶ್ರೀಸಹಸ್ರಾರ್ಜುನ ಮಹರಾಜರ ಜಯಂತಿಯನ್ನು ಸರ್ಕಾರಿ ಜಯಂತಿಯಾಗಿ ಆಚರಿಸುವ ಆದೇಶ ಆಗಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷ ಪರಶುರಾಮ ದಾನಿ, ಶಂಕರ್ ಬಾಕಳೆ, ಕೃಷ್ಣ ಪವಾರ್, ಸೇರಿದಂತೆ ಅನೇಕರು ಇದ್ದರು.