ಸಾವಿಲ್ಲದ ಸಾಂಸ್ಕೃತಿಕ ಪಳೆಯುಳಿಕೆಯೇ ಸಂಗೀತ
ಟಿ ಎಚ್ ಎಂ ಬಸವರಾಜ್‌‌‌‌‌‌‌‌‌‌


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.11: ಸಾವಿಲ್ಲದ ಸಾಂಸ್ಕೃತಿಕ ಪಳೆಯುಳಿಕೆಯೇ ಸಂಗೀತ ಹಾಗೂ ಸಂಗೀತದ ರಾಗಗಳಿಂದ ರೋಗಗಳನ್ನು ಗುಣಪಡಿಸಬಹುದೆಂದು ಕರ್ನಾಟಕ ಇತಿಹಾಸ ಅಕಾಡೆಮಿಯ ಕೇಂದ್ರ ಕಾರ್ಯಕಾರಿ ಸಮಿತಿಯ ಸದಸ್ಯರಾದ ಟಿ ಹೆಚ್ ಎಂ ಬಸವರಾಜ್ ಅಭಿಪ್ರಾಯಪಟ್ಟರು.
ಶ್ರೀ ಗುರು ಪುಟ್ಟರಾಜ ಸಂಗೀತ ಪಾಠಶಾಲೆಯಲ್ಲಿ 19ನೇ ಮಾಸಿಕ ರಾಗರಂಗ ಕಾರ್ಯಕ್ರಮವನ್ನು ಡೋಲಕ್ ಬಾರಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು. ಇತ್ತೀಚಿಗೆ ಯಾಂತ್ರಿಕ ಬದುಕಿನ ಜಂಜಾಟದಲ್ಲಿ ನಮ್ಮ ಮನಸ್ಸಿನ ನೆಮ್ಮದಿಯ ದೃಷ್ಟಿಯಿಂದ ಸಂಗೀತಬೇಕು ಉದಾಹರಣೆ ಮ್ಯೂಸಿಕ್ ತೆರಪಿ ಯಿಂದ ಬಿಪಿ, ಶುಗರ್ ಒತ್ತಡ ಇವುಗಳನ್ನು ನಿವಾರಿಸಿಕೊಳ್ಳಬಹುದೆಂದು ತಿಳಿಸಿದರು.
ಸಂಗೀತಕ್ಕೆ ಬದುಕನ್ನೇ ಬದಲಿಸುವಷ್ಟು ಶಕ್ತಿ ಇದೆ ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಕೀಲರಾದ ಪರ್ವತ ರೆಡ್ಡಿಯವರು ಮಾತನಾಡುತ್ತಾ ಇಂತಹ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ಅಗತ್ಯ ಎಂದು ತಿಳಿಸಿದರು. ಕೆ ಎಸ್ ಆರ್ ಟಿ ಸಿ ಯ ಮಾರಪ್ಪ ಶ್ರೀಮತಿ ಕವಿತಾ ಉಪಸ್ಥಿತರಿದ್ದರು. ಪ್ರಾಚಾರ್ಯರಾದ ದೊಡ್ಡ ಬಸವ ಗವಾಯಿಗಳು ಸ್ವಾಗತಿಸಿ ನಿರೂಪಿಸಿ ಕೊನೆಯಲ್ಲಿ ವಂದಿಸಿದರು ಕಾರ್ಯಕ್ರಮದಲ್ಲಿ ವಿಶೇಷವಾಗಿ ಶ್ರೀಮತಿ ಚೈತ್ರ ಚಂದನ ದೇಸಾಯಿ ಕೊಪ್ಪಳ ಹಿಂದುಸ್ತಾನಿ ಸಂಗೀತ ಪ್ರಸ್ತುತಪಡಿಸಿದರು ತಬಲಾದಲ್ಲಿ ಯೋಗೀಶ ರಾಘವೇಂದ್ರ ಹಾರ್ಮೋನಿಯಂ ಪುಟ್ಟರಾಜ್ ಹಾಗೂ ಸಂಗೀತ ಶಾಲೆಯ ಮಕ್ಕಳಿಂದ ಸಂಗೀತ ಕಾರ್ಯಕ್ರಮ ನಡೆಯಿತು ಸಂಗೀತಕ್ಕೆ ಸಭಿಕರು ಮಂತ್ರ ಮುಗ್ಧರಾದರು.