
ಧಾರವಾಡ,ಆ 24 :ಕಲಾವಿದರು ಭೂಮಿಯ ಮೇಲಿನ ಗಂಧರ್ವರು. ಅವರಲ್ಲಿ ಸಾವಿರ ಹಾಡಿನ ಸರದಾರ ಹುಕ್ಕೇರಿ ಬಾಳಪ್ಪನವರು ಒಬ್ಬರು.ಸರಕಾರ ಹುಕ್ಕೇರಿ ಬಾಳಪ್ಪನವರ ಸ್ಮಾರಕವನ್ನು ನಿರ್ಮಿಸಬೇಕುಎಂದು ಬಸವರಾಜಕುಪ್ಪಸಗೌಡರ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ಸಾವಿರ ಹಾಡಿನ ಸರದಾರ ಶ್ರೀ ಹುಕ್ಕೇರಿ ಬಾಳಪ್ಪ ಸ್ಮಾರಕದತ್ತಿಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದಅವರು, ಹುಕ್ಕೇರಿ ಬಾಳಪ್ಪನವರು ಹಾಡದ ಹಾಡುಗಳೇ ಇಲ್ಲ. ಅವರು ಸಂಗೀತದಎಲ್ಲ ಪ್ರಕಾರಗಳನ್ನು ಹಾಡುತ್ತಿದ್ದರು.ಕರ್ನಾಟಕದ ಕವಿಗಳ ಹಾಡುಗಳಿಗೆ ಜೀವತುಂಬಿದವರು ಹುಕ್ಕೇರಿ ಬಾಳಪ್ಪನವರು.ಮುರುಗೋಡದಕೀರ್ತಿಯನ್ನುರಾಷ್ಟ್ರಮಟ್ಟದಲ್ಲಿತೆಗೆದುಕೊಂಡು ಹೋದಗಾಯಕರು.ಹಾಡಿನ ಮೂಲಕ ಸಮಾಜವನ್ನು, ರೈತರನ್ನು, ಮಕ್ಕಳನ್ನು, ತಪ್ಪುದಾರಿ ಹಿಡಿದವರನ್ನುತಿದ್ದುವ ಕೆಲಸ ಮಾಡುತ್ತಿದ್ದರು.ತತ್ವ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸುವ ಕುರಿತುಹಾಡುಗಳನ್ನು ಹಾಡುತ್ತಿದ್ದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಶ್ರಾಂತ ಉಪಆರಕ್ಷಕಅಧೀಕ್ಷಕ ಬಿ.ಡಿ ಪಾಟೀಲ ಮಾತನಾಡಿ,ಉತ್ತರಕರ್ನಾಟಕದಕಲಾವಿದರು, ಸಾಹಿತಿಗಳು, ಜನರು ಸುಮ್ಮನೇಇರುವುದರಿಂದಇದರ ಲಾಭದಕ್ಷಿಣಕರ್ನಾಟಕದವರು ಪಡೆದುಕೊಳ್ಳುತ್ತಿದ್ದಾರೆ.ನಮ್ಮಕಲಾವಿದರಿಗೆ ಸಿಗಬೇಕಾದಂತ ಮಾನ್ಯತೆಗೌರವಇನ್ನೂ ಸಿಕ್ಕಿಲ್ಲ. ಸಂಗೀತ, ನಾಟಕ, ಜನಪದ ಕಲೆಗಳು ಹುಟ್ಟಿರುವುದೇಉತ್ತರಕರ್ನಾಟಕದಲ್ಲಿ,ಆದರೂಅವರಿಗೆ ಸಿಗಬೇಕಾದ ಗೌರವಕಡಿಮೆಯಾಗಿದೆ.ನಮ್ಮರಾಜಕೀಯ ಮುಖಂಡರು ಆಸಕ್ತಿವಹಿಸಿಇಲ್ಲಿಯಕಲಾವಿದರನ್ನು, ಕಲೆಯನ್ನುಬೆಳೆಸಬೇಕು.ಈ ಭಾಗದಅಭಿವೃದ್ಧಿಕಾರ್ಯ ಮಾಡಬೇಕಿದೆ ಎಂದರು.
ಸಂಘದಅಧ್ಯಕ್ಷಚಂದ್ರಕಾಂತ ಬೆಲ್ಲದಮಾತನಾಡಿ, ಹುಕ್ಕೇರಿಬಾಳಪ್ಪ ನಮ್ಮ ನಾಡಿನದೊಡ್ಡ ಆಸ್ತಿ.ಅವರುಕೃಷಿಕರಾಗಿ ಸಾಕಷ್ಟುಕೃಷಿಕರನ್ನು ಪೆÇ್ರೀತ್ಸಾಹಿಸುವ ಕೆಲಸವನ್ನು ಹಾಡಿನ ಮೂಲಕ ಮಾಡಿದರುಎಂದರು.
ವೇದಿಕೆ ಮೇಲೆ ಹುಕ್ಕೇರಿ ಬಾಳಪ್ಪನವರ ಪುತ್ರ, ದತ್ತಿದಾನಿ ಅಂದಾನೆಪ್ಪ ಬಾಳಪ್ಪ ಹುಕ್ಕೇರಿ ಉಪಸ್ಥಿತರಿದ್ದರು.ಪ್ರಮೀಳಾಜಕ್ಕಣ್ಣವರ ಪ್ರಾರ್ಥಿಸಿದರು.ಶಂಕರ ಕುಂಬಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಸತೀಶತುರಮರಿ ವಂದಿಸಿದರು.ಸಂಚಾಲಕಿ ವಿಶ್ವೇಶ್ವರಿ ಬ. ಹಿರೇಮಠ ನಿರೂಪಿಸಿ, ವಂದಿಸಿದರು.
ಕಾರ್ಯಕ್ರಮದಲ್ಲಿಗುರು ಹಿರೇಮಠ, ನಿಂಗಣ್ಣಕುಂಟಿ, ಚಂದ್ರಶೇಖರಅಮೀನಗಡ, ಮೇಘಾ ಹುಕ್ಕೇರಿ, ಹರ್ಷವರ್ಧನ ಶೀಲವಂತ, ಮಹಾಂತೇಶನರೇಗಲ್ ಇದ್ದರು.