ಸಾವಿರ ಗುಂಗಲಿ ಗಮನ ಸೆಳೆದ ಹಾಡು

ಪ್ರತಿಭಾವಂತ ನಟಿ  ಬೃಂದಾ ಆಚಾರ್ಯ ಮತ್ತು  ಯುವ ನಟ ಭರತ್ ಬೋಪಣ್ಣ ನಟಿಸಿರುವ ಆಲ್ಬಂ ಹಾಡು ಬಿಡುಗಡೆಯಾಗಿದೆ. ಸಾಹಿತ್ಯ, ಸಂಗೀತ, ಪರಿಕಲ್ಪನೆ, ನಟನೆ ಸೇರಿದಂತೆ ಎಲ್ಲದರಲ್ಲಿಯೂ ವಿಶೇಷವಾಗಿರುವ `ಸಾವಿರ ಗುಂಗಲಿ ಆಲ್ಬಂ ಹಾಡು ಮೋಡಿ ಮಾಡಿದೆ.

ನವಿರು  ಶೈಲಿಯ ಹಾಡು ಕೇಳುಗರೆಲ್ಲರಿಗೂ ಇಷ್ಡವಾಗಿದೆ. ಮತ್ತಷ್ಟು ಮನಸುಗಳನ್ನು ಆವರಿಸಿಕೊಳ್ಳುತ್ತಾ ಮುಂದುವರೆಯುತ್ತಿದೆ. ಈ ಹಾಡು  ಕೃಷ್ಣ ನಂಜುಂಡಯ್ಯ ನಿರ್ದೇಶನದಲ್ಲಿ ಮೂಡಿ ಬಂದಿದೆ.

ಬೃಂದಾ ಆಚಾರ್ಯ, ಭರತ್ ಬೋಪಣ್ಣ, ಮಯೂರ್ ಸಾಗರ್, ಕೃತಿಕಾ ಗೌಡ, ಮಾನಿನಿ ಪಿ ರಾವ್ ಮುಂತಾದವರು ಆಲ್ಬಂ ಹಾಡಿನ ಭಾಗವಾಗಿದ್ದಾರೆ.

ಹಾಡಿನ ಪ್ರಧಾನ ಆಕರ್ಷಣೆಯಾಗಿ ಬೃಂದಾ ಆಚಾರ್ಯ ಕಾಣಿಸಿಕೊಂಡಿದ್ದಾರೆ. ಪ್ರಮೋದ್ ಮರವಂತೆ ಹಾಡಿಗೆ ಸಾಹಿತ್ಯ ಬರೆದಿದ್ದಾರೆ.  ಪೃಥ್ವಿ ಭಟ್ ಧ್ವನಿಯಲ್ಲಿ ಮೂಡಿ ಬಂದಿದೆ. ಛಾಯಾಗ್ರಹಣ ಸೇರಿದಂತೆ ಎಲ್ಲದರಲ್ಲಿಯೂ ಈ ಹಾಡು ಅದ್ದೂರಿಯಾಗಿ, ಮೂಡಿ ಬಂದಿದೆ.

ಬೃಂದಾ ಆಚಾರ್ಯ ಇದೀಗ ಹಲವಾರು ಬಿಗ್ ಬಜೆಟ್ ಸಿನಿಮಾಗಳಲ್ಲಿ ನಾಯಕಿಯಾಗಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಆಲ್ಬಂ ಹಾಡಿನಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ.

ಸೀರಿಯಲ್ ಜಗತ್ತಿನಿಂದ ಬಂದು, ಇದೀಗ ನಾಯಕನಾಗಿ ನೆಲೆಗಾಣುತ್ತಿರುವ ಭರತ್ ಬೋಪಣ್ಣ ಕೂಡಾ ಅಷ್ಟೇ ಚೆಂದಗೆ ನಟಿಸಿದ್ದಾರೆ. ಜೋಯ್ ಕಾಸ್ಟಾ ಸಂಗೀತ ನಿರ್ದೇಶನ, ಎನ್.ಕೆ ರಾಜ್ ಛಾಯಾಗ್ರಹಣ, ತಮಿಳರಸನ್ ಎಂ. ಸಂಕಲನ, ಅನಿಲ್ ಸಹ ನಿರ್ದೇಶನದೊಂದಿಗೆ ಈ ವೀಡಿಯೋ ಸಾಂಗ್ ಕಳೆಗಟ್ಟಿಕೊಂಡಿದೆ.