
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಏ,17- ನಗರ ಕ್ಷೇತ್ರಕ್ಕೆ ಇಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ಗಾಲಿ ಲಕ್ಷ್ಮೀ ಅರುಣಾ ಅವರು ತಮ್ಮ ಸಾವಿರಾರು ಬೆಂಬಲಿಗರ ಮೂಲಕ ಆಗಮಿಸಿ ಮಗಳು ಬ್ರಹ್ಮಿಣಿ, ಅಳಿಯ ರಾಜೀವ್, ತಂದೆ ಪರಮೇಶ್ವರ ರೆಡ್ಡಿ, ತಾಯಿ ನಾಗಲಕ್ಷ್ಮಿ ಅವರೊಂದಿಗೆ ನಾಮಪತ್ರ ಸಲ್ಲಿಸಿ ಪಕ್ಷದ ಶಕ್ತಿ ಪ್ರದರ್ಶನ ಮಾಡಿದರು.
ನಗರದ ವೀರನಗೌಡ ಕಾಲೋನಿಯಲ್ಲಿನ ತಮ್ಮ ಗ್ಲಾಸ್ ಹೌಸ್ ಕಚೇರಿಯಿಂದ ತೆರೆದ ವಾಹನದಲ್ಲಿ ಪಕ್ಷದ ಮುಖಂಡರೊಂದಿಗೆ ಮೆರವಣಿಗೆ ಮೂಲಕ ನಗರದ ಆರಾಧ್ಯ ದೇವತೆ ಕನಕ ದುರ್ಗಮ್ಮ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿ ಬಳಿಕ ಮಹಾನಗರ ಪಾಲಿಕೆ ಕಚೇರಿಗೆ ಆಗಮಿಸಿ ಚುನಾವಣಾ ಆದಿಕಾರಿ ಎಂ.ಎನ್.ರುದ್ರೇಶ್ ಅವರಿಗೆ ನಾಮ ಪತ್ರ ಸಲ್ಲಿಸಿದರು.
ನಂತರ ಪಕ್ಷದ ಜಿಲ್ಲಾ ಅಧ್ಯಕ್ಷ ಗೋನಾಳ್ ವಿರೂಪಾಕ್ಷಗೌಡ, ಪಾಲಿಕೆ ಮಾಜಿ ಸದಸ್ಯ ಮಾಜಿ ಮೇಯರ್ ಗುರ್ರಂ ವೆಂಕಟರಮಣ, ಪಾಲಿಕೆ ಮಾಜಿ ಸದಸ್ಯೆ ಪರ್ವಿನ್ ಬಾನು ಅವರೊಂದಿಗೆ ನಾಮಪತ್ರ ಸಲ್ಲಿಸಿದರು
ಪಕ್ಷದ ಸ್ಟಾರ್ ಪ್ರಚಾರಕ, ವಕ್ತಾರ ಸಂಜಯ್ ಬೆಟಗೇರಿ, ಯುವ ಘಟಕದ ಅಧ್ಯಕ್ಷ ಸುನೀಲ್, ಸೇರಿದಂತೆ ಅನೇಕ ಮುಖಂಡರು ಆಗಮಿಸಿದ್ದರು.
ಇದಕ್ಕೂ ಮುನ್ನ ನಗರದ ವಿವಿಧ ಪ್ರದೇಶಗಳಿಂದ ಜನರು ಪಕ್ಷದ ಬಾವುಟ, ಪಕ್ಷದ ವರಿಷ್ಟ ಜನಾರ್ಧನರೆಡ್ಡಿ ಅವರ ಭಾವಚಿತ್ರ ಹಿಡಿದು ವಾಹನಗಳಲ್ಲಿ ಪಕ್ಷದ ಕಚೇರಿಗೆ ಆಗಮಿಸಿದರು.
ಅಲ್ಲಿಂದ ಡೊಳ್ಳು, ಕಹಳೆ, ತಾಷರಾಂ, ತಮಟೆ ಸೇರಿದಂತೆ ವಿವಿಧ ಕಲಾ ತಂಡಗಳೊಂದಿಗೆ ಪಟಾಕಿ ಸಿಡಿಸುತ್ತ, ಕೇಕೆ ಹಾಕುತ್ತಾ ಭರ್ಜರಿ ಮೆರವಣಿಗೆಯೊಂದಿಗೆ ತಮ್ಮ ಅಭ್ಯರ್ಥಿಯನ್ನು ಪಾಲಿಕೆ ಕಚೇರಿಗೆ ಕರೆತಂದರು.
ಒಟ್ಟಾರೆ ಇಂದಿನ ಜನ ಸಮೂಹ ಪಕ್ಷದ ಬಲ ಪ್ರದರ್ಶನದಂತೆ ಇತ್ತು ಎಂದರೆ ತಪ್ಪಾಗಲಾರದು.
ಮೆರವಣಿಗೆಗೆ ಬಂದವರಿಗೆ ಮಜ್ಜಿಗೆ ಮತ್ತು ನೀರು ವಿತರಿಸಲಾಯ್ತು.
ನಾಮಪತ್ರ ಸಲ್ಲಿಸುವ ಮುನ್ನ ಪಕ್ಷದ ಅಧ್ಯಕ್ಷ ದಮ್ಮೂರು ರಾಮಣ್ಣ ಕಂಬಳಿ ಕುರಿ ನೀಡಿ ಜಯ ಘೋಷ ಮಾಡಿದರು
ಇದರಿಂದಾಗಿ ಇಂದು ದುರ್ಗಮ್ಮ ದೇವಸ್ಥಾನದಿಂದ ಗಡಗಿ ಚೆನ್ನಪ್ಪ ವೃತ್ತದ ಪ್ರದೇಶ ಜನ ಜಂಗುಳಿಯಿಂದ ಕೂಡಿತ್ತು ಟ್ರಾಫಿಕ್ ಡೈವರ್ಟ್ ಮಾಡಿತ್ತು.
ಈ ವೇಳೆ ತೆರೆದ ವಾಹನದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಲಕ್ಷ್ಮೀ ಅರುಣ ಅವರು ನಗರದ ಅಭಿವೃದ್ಧಿಗೆ ಸರ್ವರಿಗೂ ಸಮಪಾಲು ಎಂಬಂತಹ ಆಡಳಿತಕ್ಕಾಗಿ ಮತ ನೀಡಿ ಗೆಲ್ಲಿಸಿ ಎಂದು ಮನವಿ ಮಾಡಿದರು.
ಅಭ್ಯರ್ಥಿ ಕುರಿತಾದ ಟೋಪಿ, ಟವಲ್, ಚಿಕ್ಕದಾದ ಕಟೌಟ್ ಗಳು ಬೆಂಬಲಿಗರು ಹೊಂದಿದ್ದರು.
ಬಾಕ್ಸ್
ನಾಮ ಪತ್ರ ಸಲ್ಲಿಸುವ ವೇಳೆ ಲಕ್ಷ್ಮೀ ಅರುಣ ಅವರು ತಮ್ಮ ಪತಿ ಮಾಜಿ ಸಚವ ಜನಾರ್ಧನರೆಡ್ಡಿ ಅವರ ಗೈರು ಹಾಜರಿಯಾಗಬೇಕಾಗಿರುವ ಸನ್ನಿವೇಶವನ್ನು ನೆನೆದು ಭಾವುಕರಾಗಿ ಕಣ್ಣೀರಾಕಿದರು.