ಸಾವಿರಾರು ಬೆಂಬಲಿಗರೊಂದಿಗೆ ಬೆಲ್ಲಂ ನರಸರಡ್ಡಿ ಕಾಂಗ್ರೆಸ್ ಸೇರ್ಪಡೆ

ರಾಯಚೂರು,,ಮಾ.೨೭- ದೇಶದಲ್ಲಿ ಹಾಗೂ ರಾಜ್ಯದಲ್ಲಿ ಬಡತನ ನಿರ್ಮೂಲನೆ, ಮಹಿಳಾ ಸಂರಕ್ಷಣೆ, ನಿರುದ್ಯೋಗಿ ಯುಕರಿಗೆ ಉದ್ಯೋಗ, ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಸಮಾನತೆ ಸೇರೆ ನಾವೆಲ್ಲರು ಸೌಹಾರ್ಧತೆಯಿಂದ ಸಹೋದರರಂತೆ ಬಾಳಬೇಕಾದರೆ ಕಾಂಗ್ರೆಸ್ ಸರ್ಕಾರ ರಚನೆ ಅನಿವಾರ್ಯವಾಗಿದ್ದರಿಂದ ನಾವೆಲ್ಲರು ಒಗ್ಗಟ್ಟಾಗಿ ಪಕ್ಷ ಸಂಘಟಿಸಿ ೨೦೨೩ ರಲ್ಲಿ ಬಹುಮತದಿಂದ ಸರ್ಕಾರ ರಚಿಸಬೇಕಿದೆ ಎಂದು ಎಐಸಿಸಿ ಕಾರ್ಯದರ್ಶಿ ಎನ್ ಎಸ್ ಬೋಸರಾಜು ತಿಳಿಸಿದರು.
ನಗರ ಹೈದ್ರಾಬಾದ ರಸ್ತೆಯ ಬೆಲಂ ರೈಸ್ ಮಿಲ್ ಆವರಣದಲ್ಲಿ ಆಯೋಜಿಸಿದ್ದ ಬೆಲ್ಲಂ ನರಸರಡ್ಡಿ ಅವರು ಸಾವಿರಾರು ಬೆಂಬಲಿಗರೊಂದಿಗೆ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಬಿಜೆಪಿ ಬರೀ ಸುಳ್ಳುಗಳನ್ನು ಹೇಳುವ ಮೂಲಕ ಅಧಿಕಾರಕ್ಕೆ ಬಂದು ಜನರ, ಯುವಕರ, ದೇಶದ ಬೆನ್ನೆಲುವಾದ ರೈತರ ಮುಗ್ದತೆಯನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.
ಈ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಬೆಲ್ಲಂ ನರಸರಡ್ಡಿ ಅವರು ಬೆಂಬಲಿಗರೊಂದಿಗೆ ಮೆರವಣಿಗೆ ಮೂಲಕ ಪಕ್ಷಕ್ಕೆ ಸೇರ್ಪಡೆಯಾದರು ಇವರನ್ನು ಎಐಸಿಸಿ ಕಾರ್ಯದರ್ಶಿ ಎನ್.ಎಸ್ ಬೋಸರಾಜು, ಮುಖಂಡರಾದ ಪಾರಸಮಾಲ್ ಸುಖಾಣಿ ಬರಮಾಡಿಕೊಂಡರು.
ನಗರ ಕಾಂಗ್ರೆಸ್ ಬ್ಲಾಕ್ ಅದ್ಯಕ್ಷ ಬಸವರಾಜ ರಡ್ಡಿ ಮಾತನಾಡಿ, ರಾಯಚೂರು ನಗರ ಸಂಪೂರ್ಣ ದೂಳಿನಿಂದ ಕೂಡಿದ್ದು ಜನರಿಗೆ ಹಸ್ತಮ ಬರುತ್ತಿದೆ. ವಾಸ್ತವ ಸ್ಥಿತಿಯ ಬಗ್ಗೆ ಶಾಸಕರಿಗೆ ಎಷ್ಟು ಬಾರಿ ಹೇಳಿದರೂ ಶಾಸಕ ಶಿವರಾಜ ಪಾಟೀಲ್ ಮೂಗೆ ತುಪ್ಪ ಸವರಿದ್ದಾರೆ ಅದಕ್ಕಾಗಿ ಈ ಭಾರಿ ತಕ್ಕ ಪಾಠ ಕಲಿಸಬೇಕೆಂದು ತಿಳಿಸಿದರು.
ಈ ಬಾರಿ ಜನರು ಕಾಂಗ್ರೆಸ್ ಸೇರ್ಪಡೆಯಾಗುತ್ತಿರುವುದು ಕಂಡು ಡಾ, ಶಿವರಾಜ ಪಾಟೀಲ್ ಅವರಿಗೆ ನಿದ್ದೆ ಬರುತ್ತಿಲ್ಲ. ಇಷ್ಟುದಿನ ಅರಾಮ್ ಮಲಗಿದ್ದು ಇವಾಗ ತಿಳಿಯುತ್ತದೆ ಎಂದು ತಿಳಿಸಿದರು.
ಮೇರವಣಿಗೆ ಹಾಗೂ ಕಾರ್ಯಕ್ರಮದಲ್ಲಿ ಹಿರಿಯರಾದ ಪಾರಸಮಾಲ್ ಸುಖಾಣಿ, ಕೆ ಶಾಂತಪ್ಪ, ಜಿ ಶಿವಮೂರ್ತಿ, ಗದಾರ್ ಬೆಟ್ಟಪ್ಪ, ಬಿ ರಮೇಶ ರುದ್ರಪ್ಪ ಅಂಗಡಿ, ವಿಕೃಷ್ಣ ಮೂರ್ತಿ, ವಿ, ಬಸವರಾಜ ರಡ್ಡಿ, ಪೋಗಲ್ ಶೇಖರ್ ರಡ್ಡಿ, ಪ್ರವೀಣ ರಡ್ಡಿ, ಶ್ರೀನಿವಾಸ್ ರಡ್ಡಿ, ತಿಮ್ಮಾ ರಡ್ಡಿ, ದೇವರಾಜು ಸೇರಿದಂತೆ ಅನೇಕರು ಇದ್ದರು.