ಸಾವಿರಾರು ಕೋಟಿ ರೂ. ವೆಚ್ಚದ ಸ್ಮಾರ್ಟ್ ಸಿಟಿ ಕಾಮಗಾರಿಗಳು ಕಳಪೆ – ಜೆಡಿಎಸ್ ಆರೋಪ

ಸಂಜೆವಾಣಿ ವಾರ್ತೆ

ಶಿವಮೊಗ್ಗ, ಮೇ ೨೨: ಸಾವಿರಾರು ಕೋಟಿ ರೂ. ವ್ಯಯ ಮಾಡಿ ನಿರ್ಮಾಣ ಮಾಡಿರುವ ಸ್ಮಾರ್ಟ್  ಸಿಟಿ ಯೋಜನೆಗಳು ಈಗ ನಾಗರಿಕರಿಗೆ ಕಂಟಕವಾಗಿ ಪರಿಣಮಿಸುತ್ತಿವೆ. ಮನೆಗಳಿಗೆ ನೀರು ನುಗ್ಗುತ್ತಿದೆ. ಕಳಪೆ ಕಾಮಗಾರಿ ಬಯಲಾಗುತ್ತಿದೆ. ಕಾಮಗಾರಿಯಿಂದ ಜನರಿಗೆ ಉತ್ತಮ ಸೌಲಭ್ಯ ಸಿಗಬೇಕಿತ್ತ್ತಾದರೂ  ಮರೀಚಿಕೆಯೇ ಆಗಿದೆ ಎಂದು ಮಾಜಿ ಶಾಸಕ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ ಬಿ ಪ್ರಸನ್ನಕುಮಾರ್ ಹೇಳಿದರು.ಪತ್ರಿಕಾಗೋಷ್ಟಿಯಲ್ಲಿ  ಮಾತನಾಡಿದ ಅವರು,  ಸ್ಮಾರ್ಟ್ ಸಿಟಿ ಕಾಮಗಾರಿ ಮಾಡುವಾಗಲೇ ಸಾಕಷ್ಟು ಕಳಪೆ ಎಂಬ  ಸ್ವರ ಕೇಳಿಬಂದಿತ್ತು. ಜನರು ಪ್ರತಿಭಟಿಸಿದ್ದರು. ನಾಗರಿಕ ಹಿತಕರಕ್ಷಣಾ  ವೇದಿಕೆಯವರು ಸಹ ಗಮನಕ್ಕೆ ತಂದು ಹೋರಾಡಿದ್ದರು. ಆದರೂ ಎಚ್ಚೆತ್ತುಕೊಳ್ಳದ ನಗರಾಡಳಿತ ಮತ್ತು ಸ್ಮಾರ್ಟ್ ಸ್ಸಿಟಿಯವರು ಈಗ  ತಮ್ಮ ಕಾಮಗರಿಯ ಬಗ್ಗೆ ಜನರಿಗೆ ಉತ್ತರ ಕೊಡಬೇಕಿದೆ. ಅಂದಿನ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜನಪ್ರತಿನಿಧಿಗಳು ಈ ಬಗ್ಗೆ  ಮಾತನಾಡಬೇಕೆಂದರು.ಕಾಮಗಾರಿ ಮಾಡುವಾಗಲೇ ಗಲ್ಲಿಗಲ್ಲಿಗಳಲ್ಲಿ ಕಳಪೆ ಬಗ್ಗೆ ಆಕ್ರೋಶ ಕೇಳಿಬಂದಿತ್ತು. ಆದರೆ ಇದನ್ನು ತೇಲಿಬಿಡಲಾಯಿತೇ ವಿನಾ ಗಂಭೀರವಾಗಿ ಆಡಳಿತ ಗಮನಿಸಲಿಲ್ಲ. ಪರಿಣಾಮವಾಗಿ ಇಂದು ಜನರು ತೊಂದರೆಪಡುವAತಾಗಿದೆ. ಪ್ರತಿ ಬಡಾವಣೆಯ ಮನೆಗಳಿಗೆ ನೀರು ನುಗ್ಗುತ್ತಿದೆ. ಆದ ಅನ್ಯಾಯವನ್ನು ಸರಿಪಡಿಸುವವರಾರು ಎಂದು ಪ್ರಶ್ನಿಸಿದ ಅವರು, ಜಿಲ್ಲಾಧಿಕಾರಿ ಮತ್ತು ನಗರಾಡಳಿತ ಕೂಡಲೇ ಈ ಬಗ್ಗೆ ಕ್ರಮ ಜರುಗಿಸಬೇಕು. ಸಂಬAಧಿತ ಗುತ್ತಿಗೆದಾರರನ್ನು ಕರೆÀತಂದು ಎಲ್ಲ ಅವ್ಯವಸ್ಥೆಯನ್ನೂ  ಸರಿಪಡಿಸಬೇಕು. ಇಲ್ಲವಾದಲ್ಲಿ ಜನರು ಮತ್ತೆ ಹೋರಾಟಕ್ಕಿಳಿಯುವುದು ಅನಿವಾರ್ಯವಾಗುತ್ತದೆ ಎಂದರು.ಮನೆಯೊಳಕ್ಕೆ ನೀರು ನುಗ್ಗಿ ಮನೆಯಲ್ಲಿರುವ ವಸ್ತುಗಳೆಲ್ಲ ಹಾನಿಗೊಳಗಾಗಿವೆ. ಕೊಳಚೆೆ ನೀರಿನಿಂದ ಡೆಂಗ್ಯೂ, ಮಲೇರಿಯಾ ಎದುರಾಗಲಿದೆ.  ಆದ್ದರಿಂದ ಡಿಸಿಯವರು ಕೂಡಲೇ ಜನಪ್ರತಿನಿಧಿಗಳ ಸಭೆ ಕರೆದು ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.ಪತ್ರಿಕಾಗೋಷ್ಟಿಯಲ್ಲಿ ಪಕ್ಷದ ಮುಖಂಡರ ದಈಪಕ್ ಸಿಂಗ್,  ರಾಮಕೃಷ್ಣ,   ನರಸಿಂಹ ಗಂಧದಮನೆ, ವಿನಯ್ ಮೊದಲಾದವರಿದ್ದರು.