ಸಾವಿನ ಸುಳ್ಳು ಸುದ್ದಿ ಹಬ್ಬಿಸಿದ್ದಕ್ಕೆ ಸುಮಿತ್ರಾ ಬೇಸರ ಸ್ಪೀಕರ್‌ಗೆ ಪತ್ರ


ಮುಂಬೈ,ಏ.೨೩- ತಾವು ಮೃತಪಟ್ಟಿರುವುದಾಗಿ ಸುಳ್ಳು ಸುದ್ದಿ ಹಬ್ಬಿಸಿದ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕೆಂದು ಲೋಕಸಭಾಧ್ಯಕ್ಷರಿಗೆ ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್ ಪತ್ರ ಬರೆದಿದ್ದಾರೆ.
ನಿನ್ನೆ ರಾತ್ರಿಕೆಲ ಸಾಮಾಜಿಕ ಜಾಲ ತಾಣದ ಖಾತಾಗಳಲ್ಲಿ ಮತ್ತು ಕಾಂಗ್ರೆಸ್ ಸಂಸದ ಶಶಿತರೂರ್ ಅವರು ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್ ನಿಧನಕ್ಕೆ ಸಂತಾಪ ಸೂಚಿಸಿದ್ದರು.
ಸುಮಿತ್ರಾ ಮಹಾಜನ್ ಅವರು ಇನ್ನೂ ಜೀವಂತವಾಗಿದ್ದು, ಆರೋಗ್ಯವಾಗಿದ್ದಾರೆ ಎಂದು ಬಿಜೆಪಿ ಗಮನಕ್ಕೆ ತಂದ ಮೇಲೆ ಶಶಿತರೂರ್ ತಮ್ಮ ಟ್ವೀಟ್‌ನ್ನು ಡಿಲೀಟ್ ಮಾಡಿದರು. ಈ ಬಗ್ಗೆ ಆಡಿಯೋ ಮೂಲಕ ಸ್ಪಷ್ಟೀಕರಣ ನೀಡಿರುವ ಸುಮಿತ್ರಾ ಮಹಾಜನ್ ಸುದ್ದಿ ದೃಢಪಡಿಸದೆ ನಾನು ಮೃತಪಟ್ಟಿದ್ದೇನೆ ಎಂದು ಸುದ್ದಿ ಹಬ್ಬಿಸಿದರು. ಈ ರೀತಿ ಸುದ್ದಿ ಹಬ್ಬಿಸುವ ಮುನ್ನ ಇಂಧೋರ್ ಜಿಲ್ಲಾಡಳಿತ ದೃಢಪಡಿಸಬೇಕಾಗಿತ್ತು ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ಕೇಂದ್ರ ಸರ್ಕಾರ ಮತ್ತು ಲೋಕಸಭಾ ಸಪೀಕರ್ ಓಂ ಬಿರ್ಲಾ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು. ದೇಶದಲ್ಲಿ ಇದು ಸುದ್ದಿಯಾಗಿ, ಮುಂಬೈನಲ್ಲಿ ನನ್ನ ಸ್ನೇಹಿತರಿಂದ, ಬಂಧುಗಳಿಂದ ದೂರವಾಣಿ ಕರೆಗಳು ಬರಲಾರಂಭಿಸಿದವು.
ಮುಂಬೈನಲ್ಲಿರುವ ಕೆಲವು ನ್ಯೂಸ್ ಚಾನಲ್‌ಗಳು ತಮ್ಮ ಸಾವಿನ ಬಗ್ಗೆ ಏಕೆ ಮತ್ತು ಹೇಗೆ ಸುಳ್ಳು ಸುದ್ದಿ ನೀಡಿರುವುದಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಈ ವಿಷಯ ಗೊತ್ತಾದ ಬಳಿಕ ಕಾಂಗ್ರೆಸ್ ನಾಯಕ ಶಶಿ ತರೂರ್ ಟ್ವೀಟ್ ಡಿಲೀಟ್ ಮಾಡಿ ತಮಗೆ ನಂಬಲಾರ್ಹ ಮೂಲಗಳಿಂದ ಸುದ್ದಿ ಬಂದಿತ್ತು.ಇದಕ್ಕೆ ಕ್ಷಮೆ ಇರಲಿ ಎಂದು ಸ್ಪಷ್ಟನೆ ನೀಡಿದ್ದಾರೆ.
ಸುಮಿತ್ರಾ ಮಹಾಜನ್ ಪುತ್ರ ಮಂದರ್ ಪ್ರತಿಕ್ರಿಯೆ ನೀಡಿ ತಮ್ಮ ತಾಯಿ ಆರೋಗ್ಯವಾಗಿದ್ದು, ಸುಳ್ಳು ಸುದ್ದಿಗಳನ್ನು ನಂಬಬೇಡಿ ಎಂದು ಮನವಿ ಮಾಡಿದ್ದಾರೆ.
ಸುಮಿತ್ರಾ ಮಹಾಜನ್ ಇಂಧೋರ್ ಲೋಕಸಭಾ ಕ್ಷೇತ್ರವನ್ನು ೮ ಬಾರಿ ಪ್ರತಿನಿದಿಸಿದ್ದು, ೨೦೧೪ ರಿಂದ ೨೦೧೯ರವರೆಗೆ ಲೋಕಸಭಾ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.