ಸಾವಿನ ಸುಳ್ಳು ಲೆಕ್ಕ ನೀಡುವ ಉದ್ದೇಶವಿಲ್ಲ


ಬೆಂಗಳೂರು, ಏ.೩೦- ಕೋವಿಡ್ ಸೋಂಕಿನಿಂದ ಮೃತಪಡುವವರ ಸುಳ್ಳು ಸಾವಿನ ಲೆಕ್ಕವನ್ನು ನೀಡುವ ಯಾವ ಅನಿವಾರ್ಯತೆಯೂ ಬಿಬಿಎಂಪಿಗಾಗಲಿ ಸರರ್ಕಾರಕ್ಕಾಗಲಿ ಇಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಸಹಜ ಸಾವಿನ ಲೆಕ್ಕವನ್ನು ನಾವು ನೀಡುತ್ತಿಲ್ಲ. ಬೇರೆ ಬೇರೆ ರಾಜ್ಯಗಳಿಂದ ರಾಜ್ಯಕ್ಕೆ ವೈದ್ಯಕೀಯ ಸೌಲಭ್ಯವನ್ನು ಪಡೆಯಲು ಬಂದು, ಇಲ್ಲಿ ಕೊರೊನಾದಿಂದ ಸಾವನ್ನಪ್ಪುವವರು ಇಲ್ಲೇ ಅಂತ್ಯಕ್ರಿಯೆಯನ್ನು ನಡೆಸುತ್ತಿದ್ದಾರೆ ಎಂದರು.
ಬೆಂಗಳೂರು ಹೊರವಲಯದ ರಾಮನಗರ, ದೇವನಹಳ್ಳಿ, ಬಿಡದಿ, ಆನೇಕಲ್ ಕಡೆಯಿಂದಲೂ ಶವಸಂಸ್ಕಾರಕ್ಕೆ ಬಿಬಿಎಂಪಿ ವ್ಯಾಪ್ತಿಗೆ ಬರುತ್ತಿದ್ದಾರೆ. ಎಲ್ಲಾ ಆಸ್ಪತ್ರೆಗಳಿಂದ ಬರುವ ಮಾಹಿತಿಯನ್ನು ದಿನಂಪ್ರತಿ ಆರೋಗ್ಯ ಇಲಾಖೆಗೆ ನೀಡುತ್ತಿದ್ದೇವೆ ಎಂದು ಹೇಳಿದರು.