ಸಾವಿನ ಮನೆ ಗಳ ಹಿರಿಯುತ್ತಿರುವ ಸರ್ಕಾರ : ಪುಷ್ಪಾ ಅಮರ್‍ನಾಥ್

ಹುಣಸೂರು, ನ.13: ಮಹಾಮಾರಿಕೊರೊನಾ ಹಾವಳಿಯಿಂದ ಜನತೆ ಹೈರಾಣಾಗಿದ್ದು, ಜೀವನ ನಡೆಸಲೆಎಣಗುತ್ತಿರುವಇಂಥಕಠಿಣ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ನೀರಿನಕರ, ವಿದ್ಯುತ್‍ದರಜೊತೆ ವಿವಿಧ ರೀತಿಯ ದಂಡ ವಿಧಿಸುತ್ತಿರುವ ಮೂಲಕ ಸಾವಿನ ಮನೆಯಲ್ಲಿ ಗಳ ಹಿರಿಯುವ ಕೆಲಸ ಮಾಡುತ್ತಿದೆಎಂದು ರಾಜ್ಯ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಹಾಗೂ ಜಿ.ಪಂ ಸದಸ್ಯೆ ಪುಷ್ಪಾ ಅಮರ್‍ನಾಥ್‍ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಪತ್ರಕರ್ತರ ಸಂಘದಲ್ಲಿ ಸುದಿಗೋಷ್ಠಿಯಲ್ಲಿ ಮಾತನಾಡಿದಅವರುಕೊರೊನಾ ಬಂದ ನಂತರಇಡೀ ಪ್ರಪಂಚದ ಆರ್ಥಿಕ ಸ್ಥಿತಿ ಬುಡಮೇಲಾಗಿದ್ದು, ಎಷ್ಟೋ ಉದ್ದಿಮೆಗಳು, ಕೈಗಾರಿಕೆಗಳು ಬೀಗ ಜಡಿದಿದ್ದು, ವ್ಯಾಪಾರೋದ್ಯಮ ನೆಲಕಚ್ಚಿದ್ದು ಜನತೆ ಜೀವನ ನಡೆಸಲು ಸಾಧ್ಯವಾಗದ ಇಂಥ ಪರಿಸ್ಥಿತಿಯಲ್ಲಿ ಅವರ ನೆರವಿಗೆ ಬರಬೇಕಾದರಾಜ್ಯ ಹಾಗೂ ಕೇಂದ್ರ ಸರ್ಕಾರಅವರೊಂದಿಗೆ ಚಲ್ಲಾಟ ವಾಡುವ ಮೂಲಕ ಖಜಾನೆ ತುಂಬಿಸುವ ಕೆಲಸ ಮಾಡುತ್ತಿರುವುದು ಮಹಾ ಅನ್ಯಾಯಎಂದರು.
ಮಹಿಳೆಯರಿಗೆ ಇಲ್ಲದ ಭದ್ರತೆ
ದೇಶದಲ್ಲಿ ನಿತ್ಯ ಒಂದಲ್ಲಾ ಒಂದು ಮಹಿಳಾ ದೌಜ್ರ್ಯನ ನಡೆಯುತ್ತಿದ್ದರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೋಮದಲ್ಲಿ ಮಲಗಿರುವುದು ಗಾಂಧಿ ಕನಸಿಗೆ ಕೊಳ್ಳಿ ಇಟ್ಟಂತಿದೆ ಎಂದ ಅವರು ಬಿ.ಜೆ.ಪಿ ಶಾಸಕ 00000 ಸಾರ್ವಜನಿಕವಾಗಿ ಮಹಿಳೆ ಮೇಲೆ ದೌಜ್ರ್ಯನ ನಡೆಸುತ್ತಾರೆಂದರೆ ಪರಿಸ್ಥಿತಿಯ ಗಂಭಿರತೆ ತಿಳಿಯಲಿದೆ ಎಂದರು.
ರೈತರ ನೆರವಿಗೆ ಧಾವಿಸಿ
ಕೊರೊನಾದಿಂದರೈತರ ಸಂಕಷ್ಟ ಹೆಚ್ಚಾಗಿದ್ದುಕೂಡಲೆ ಸರ್ಕಾರಅವರ ನೆರವಿಗೆ ಧಾವಿಸಿ ವಿಶೇಷ ಫ್ಯಾಕೇಜ್‍ಗಳನ್ನು ಘೋಷಿಸಬೇಕೆಂದು ಆಗ್ರಹಿಸಿದ ಪುಷ್ಟ ಅಮರ್‍ನಾಥ್ ಮಹಿಳೆಯರ ಭದ್ರತೆಗಾಗಿಕಠಿಣ ಕಾನೂನುಗಳನ್ನು ರೂಪಿಸಬೇಕೆಂದು ಒತ್ತಾಹಿಸಿದರು.