ಸಾವಿನಲ್ಲೂ ಸಾರ್ಥಕತೆ ಮೆರೆದ ದತ್ತುರಾವ್

ರಾಯಚೂರು.ಸೆ.೦೯- ತೀವ್ರ ಹೃದಯಾಘಾತದಿಂದ ನಗರದ ಸಂಕಲ್ಪ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದ ದತ್ತುರಾವ್ ವಿನ್ನು ದೃಷ್ಟಿದಾನ ಮೂಲಕ ಹಲವು ಕುಟುಂಬಕ್ಕೆ ಹೊಸ ಬೆಳಕು ನೀಡಿ ಸಾವಿನಲ್ಲೂ ಸಾರ್ಥಕತೆ ಕಂಡರು.
ತೀವ್ರ ದುಃಖದಲ್ಲಿದ್ದರೂ ಪತ್ನಿ ಸರಸ್ವತಿ. ಪುತ್ರಿಯರಾದ ಮಮತಾ ಬಿಸೆ. ಸುಮಾ ಜಪಾಟೆ ನೇತ್ರದಾನಕ್ಕೆ ಒಪ್ಪಿಗೆ ನೀಡಿದ ಆದರ್ಶಪ್ರಾಯರಾದರು.
ನೇತ್ರದಾನಕ್ಕೆ ಪ್ರೇರಣೆ – ಮಾರ್ಗದರ್ಶನ ನೀಡಿದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ರಾಜಯೋಗಿನಿ ಸ್ಮಿತಾ ಅಕ್ಕ. ಶಾರದಾ ಅಕ್ಕ ಪರೋಪಕಾರಾರ್ಥಂ ಇದಂ ಶರೀರಠ ಎಂಬದು ತಿಳಿಸಿ. ದಾನ ಎಂಬುದು ಭಾರತೀಯ ಪರಂಪರೆಯಲ್ಲಿ ಶ್ರೇಷ್ಠ ಕಾರ್ಯ ಎಂದರು.ರಾಷ್ಟ್ರೀಯ ದೇಹಾಂಗದಾನ ಜಾಗೃತಿ ಸಮಿತಿ ರಾಯಚೂರು ಜಿಲ್ಲಾಧ್ಯಕ್ಷ. ಲಯನ್ಸ್ ಕ್ಲಬ್ ಕಾರ್ಯದರ್ಶಿ. ರಾಜೇಂದ್ರಕುಮಾರ ಶೇವಾಳೆ ಸಂಯೋಜನೆಯಲ್ಲಿ ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನೇತ್ರ ವಿಭಾಗದ ಮುಖ್ಯಸ್ಥ ಡಾ. ಸಿದ್ದೇಶ್ ಹಾಗೂ ವೈದ್ಯರ ತಂಡ ನೇತ್ರದಾನ ಪ್ರಕ್ರಿಯೆ ಪೂರ್ಣಗೊಳಿಸಿದರು.
ಈ ಸಂದರ್ಭದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ,ಸಂಕಲ್ಪ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿ, ರಾಷ್ಟ್ರೀಯ ದೇಹಾಂಗದಾನ ಜಾಗೃತಿ ಸಮಿತಿ, ಲಾಯನ್ಸ್ ಕ್ಲಬ್, ಹಾಗೂ ಆಪ್ತರು ಉಪಸ್ಥಿತರಿದ್ದು ಶ್ರದ್ಧಾಂಜಲಿ ಸಲ್ಲಿಸಿದರು.