ಸಾವಿತ್ರಿ ಜೊತೆಯಾದ ವಿಜಯ ರಾಘವೇಂದ್ರ

ಹಿರಿಯ ನಟಿ ತಾರಾ ಪ್ರಧಾನ ಪಾತ್ರದಲ್ಲಿ ಅಭಿನಯಿಸುತ್ತಿರುವ “ಸಾವಿತ್ರಿ” ಚಿತ್ರದ ನಾಯಕರಾಗಿ ವಿಜಯ ರಾಘವೇಂದ್ರ ಆಯ್ಕೆಯಾಗಿದ್ದಾರೆ.
ಬೆಂಗಳೂರು ಸುತ್ತಮುತ್ತ 45 ದಿನಗಳ ಚಿತ್ರೀಕರಣ ನಡೆಯಲಿದೆ.
ಪ್ರಶಾಂತ್ ಕುಮಾರ್ ಹೀಲಲ್ಲಿಗೆ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಎಸ್ ದಿನೇಶ್ ನಿರ್ದೇಶನ‌ ಮಾಡುತ್ತಿದ್ದಾರೆ.
ಸಾಹಿತಿ ಹೃದಯ ಶಿವ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಗೀತರಚನೆ ಹಾಗೂ ಸಂಭಾಷಣೆ ಕೂಡ ಹೃದಯ ಶಿವ ಅವರದೆ.
ಚಿತ್ರದಲ್ಲಿ ತಾರಾ, ವಿಜಯ ರಾಘವೇಂದ್ರ,
ಪ್ರಕಾಶ್ ಬೆಳವಾಡಿ, ಸಂಜು ಬಸಯ್ಯ ,‌ಬೇಬಿ ಲೈಲಾ, ಪ್ರಮೋದ್ ಮುಂತಾದವರಿದ್ದಾರೆ.