ಸಾವಿತ್ರಿ ಕಾಲೋನಿ : ಮರ ಉರುಳಿ – ದ್ವಿಚಕ್ರ ವಾಹನ ಜಖಂ

ರಾಯಚೂರು.ನ.೧೫- ನಗರದ ಸಾವಿತ್ರಿ ಕಾಲೋನಿಯ ಬಡಾವಣೆಯಲ್ಲಿ ಏಕಾಏಕಿಯಾಗಿ ಬೃಹದಾಕಾರದ ಮರ ಒಂದು ರಸ್ತೆಯಲ್ಲಿ ಬಿದ್ದುದರಿಂದ ರಸ್ತೆಯೂ ಸಂಪೂರ್ಣ ಬಂದ್ ಆಗಿದೆ.
ಮರ ಬಿದ್ದುದರಿಂದ ಎರಡು ದ್ವಿಚಕ್ರ ವಾಹನಗಳು ಸಂಪೂರ್ಣ ಜಖಂ ಆಗಿವೆ. ಜೆಸ್ಕಾಂನ ವಿದ್ಯುತ್ ಕಂಬವಂತೂ ಸಂಪೂರ್ಣವಾಗಿ ಮುರಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗದೆ ಇರುವುದು ಕಂಡು ಬಂದಿದೆ. ನಂತರ ಮಾತನಾಡಿದ ಪ್ರತ್ಯಕ್ಷ ದರ್ಶಿ ಬಿಚ್ಚಾಲಿ ಈರಣ್ಣನವರು ಅಕಸ್ಮಾತಾಗಿ ಈ ಮರವು ಬಿದ್ದಿದೆ. ಆದರೆ, ವಿದ್ಯುತ್ ಕಂಬವೂ ಸಂಪೂರ್ಣವಾಗಿ ಜಖಂಗೊಂಡಿದೆ. ಎರಡು ದ್ವಿಚಕ್ರ ವಾಹನಗಳು ಜಖಂಗೊಂಡಿದ್ದರೂ, ಜೆಸ್ಕಾಂರವರರಿಗೆ ತಿಳಿಸಿದ್ದುದರಿಂದ ಈ ಏರಿಯಾದಲ್ಲಿ ವಿದ್ಯುತ್ ಕಡಿತಗೊಳಿಸಿ ಮಾಹಿತಿ ಪಡೆದುಕೊಂಡು ಮರವನ್ನು ತೆರವುಗೊಳಿತ್ತೇವೆ ಎಂದು ತಿಳಿಸಿದ್ದಾರೆ.