ಸಾವಿತ್ರಿಭಾಯಿ ಫುಲೆ ಜನ್ಮದಿನ ಆಚರಣೆ

ಕೋಲಾರ,ಜ.೮:ಕರ್ನಾಟಕ ದಲಿತ ಸಂಘರ್ಷ ಸಮಿತಿ, ಆರ್.ಪಿ.ಐ ವತಿಯಿಂದ ವಕ್ಕಲೇರಿ ಹೋಬಳಿ ಮಟ್ಟದಲ್ಲಿ ಮೈಲಾಂಡಹಳ್ಳಿ ಮತ್ತು ಲಕ್ಷ್ಮೀಪುರ ಗ್ರಾಮಗಳಲ್ಲಿ ಮಹಿಳಾ ಹಕ್ಕುಗಳ ಹೋರಾಟಗಾರ್ತಿ, ಆಧುನಿಕ ಶಿಕ್ಷಣ ನೀಡಿದ ಸರಸ್ಪತಿ, ಕ್ರಾಂತಿಕಾರಿ ಪುಸ್ತಕಗಳನ್ನು ಬರೆದಂತಹ ಲೇಖಕಿ, ಅಕ್ಷರ ಜ್ಯೋತಿ ಬೆಳಗಿದ ಶಾರದೆಯಾದ ಸಾವಿತ್ರಿ ಬಾಯಿಪುಲೆ ರವರ ಜನ್ಮ ದಿನಾಚರಣೆ ಮಾಡಿದರು.
ಇದರ ಅಂಗವಾಗಿ ಮಕ್ಕಳ ಮೊದಲ ಪಾಠಶಾಲೆಯಾದ ಅಂಗನವಾಡಿ, ಪ್ರಾಥಮಿಕ ಶಾಲೆಗಳ ಶಿಕ್ಷಕರುಗಳಿಗೆ ಸನ್ಮಾನ ಮಾಡಲಾಯಿತು. ಸಭೆಯಲ್ಲಿ ಕರ್ನಾಟಕ ದಲಿತ ಸಂಘ ಸಮಿತಿ ಭೀಮವಾದ ಮತ್ತು ಆರ್.ಪಿ.ಐ ಮುಖ್ಯ ಕಾರ್ಯದರ್ಶಿ ರಾಮಾಂಜಿನಪ್ಪ, ಮಹಿಳಾ ಕಾರ್ಯದರ್ಶಿ ಶೈಲಜಾ, ಕೋಲಾರ ತಾಲೂಕು ಪ್ರಧಾನ ಸಂಚಾಲಕ ವಕ್ಕಲೇರಿ ಬಾಬು, ಮಾಜಿ ಸಂಚಾಲಕ ಮೈಲಾಂಡಹಳ್ಳಿ ಆನಂದ್ ಎಂ, ಸಂಚಾಲಕರಾದ ಲಕ್ಷ್ಮೀಪುರ ಲೋಕೇಶ್, ಪೊಲೀಸ್ ಮುನಿಯಪ್ಪ, ತಮಟೆ ಕಲಾವಿದರಾದ ಮುನಿಯಪ್ಪ, ಮಂಜುನಾಥ್ ಎನ್, ಲಕ್ಷ್ಮೀಪುರ ಮುರಳಿ, ಗೋಪಾಲಪ್ಪ ಉಪಸ್ಥಿತರಿದ್ದರು.
ಕರ್ನಾಟಕ ದಲಿತ ಸಂಘ ಸಮಿತಿ ಭೀಮವಾದ ಮತ್ತು ಆರ್.ಪಿ.ಐ ಮುಖಂಡರು, ಗ್ರಾಮದ ಎಸ್.ಡಿ.ಎಂ.ಸಿ ಸದಸ್ಯರು, ಗ್ರಾಮ ಪಂಚಾಯತಿ ಸದಸ್ಯರು, ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳಿಗೆ ಸ್ವಾಗತ ಕೋರಲಾಯಿತು.